ಕರ್ನಾಟಕ

karnataka

ETV Bharat / entertainment

ಅಪ್ಪು ಅಚ್ಚುಮೆಚ್ಚಿನ ಆಟ ಶಟಲ್ ಬ್ಯಾಡ್ಮಿಂಟನ್ ಆಗಿತ್ತು ಎಂದ ಅಶ್ವಿನಿ ಪುನೀತ್ - Appu Cup - APPU CUP

Appu Cup: ಕಳೆದ ವರ್ಷದಿಂದ ಅಪ್ಪು ಹೆಸರಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆರಂಭಗೊಂಡಿದ್ದು, ಈ ಬಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಶ್ವಿನಿ ಪುನೀತ್​ ಅವರು ಅಪ್ಪು ಅವರ ಅಚ್ಚುಮೆಚ್ಚಿನ ಆಟ ಶಟಲ್ ಬ್ಯಾಡ್ಮಿಂಟನ್ ಆಗಿತ್ತು ಎಂದು ಹೇಳಿದರು.

SHUTTLE BADMINTON  ASHWINI PUNEETH  PUNEETH RAJKUMAR NEWS  SHUTTLE BADMINTON TOURNAMENT
ಅಪ್ಪು ಅವರ ಅಚ್ಚುಮೆಚ್ಚಿನ ಆಟ ಶಟಲ್ ಬ್ಯಾಡ್ಮಿಂಟನ್ ಆಗಿತ್ತು ಅಶ್ವಿನಿ ಪುನೀತ್ (ETV Bharat)

By ETV Bharat Karnataka Team

Published : Jul 15, 2024, 12:58 PM IST

Shuttle Badminton Tournament: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಅಪ್ಪು ಕಪ್ ಎಂದು ಕಳೆದ ವರ್ಷದಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಾಡಲಾಗುತ್ತಿದೆ. ಅದರಂತೆ ಈ ವರ್ಷವು ಅಪ್ಪು ಕಪ್ ಸೀಸನ್ 2 ಆರಂಭವಾಗುತ್ತಿದೆ. ಓರಾಯನ್ ಮಾಲ್​ನ ಹೊರಾಂಗಣದ ವೇದಿಕೆಯಲ್ಲಿ ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ ಅಪ್ಪು ಕಪ್ ಸೀಸನ್ 2 ಚಾಲನೆ ದೊರೆಯಿತು.

ಅಪ್ಪು ಕಪ್​ (ETV Bharat)

ಸಾಯಿ ಗೋಲ್ಡ್ ಪ್ಯಾಲೆಸ್​ನ ಶರವಣ ಅವರು ನಿರ್ಮಿಸಿರುವ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅನಾವರಣವಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಾ.ರಾ.ಗೋವಿಂದು ಈ ಕಾರ್ಯಕ್ರಮಕ್ಕೆ ಸಾಕ್ಚಿಯಾದರು. ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶೆಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದ ವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್​ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್​ (ETV Bharat)

ನಂತರ ಶ್ರೀಮುರಳಿ ಮಾತನಾಡಿ, ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಅದು ಹೊರದೇಶದಲ್ಲಿ ಅದನ್ನು ನಡೆಸಬೇಕೆಂಬುದು ಅವರ ಯೋಚನೆಯಾಗಿತ್ತು. ಸದಾ ಒಬ್ಬರಿಗೆ ಒಳ್ಳೆಯದನ್ನೇ ಬಯಸುವ ಹೃದಯ ಅವರಿಗಿತ್ತು. ಅಂತಹ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಡೆಯುತ್ತಿರುವ ಅಪ್ಪು ಕಪ್ ಸೀಸನ್ 2 ಯಶಸ್ವಿಯಾಗಲಿ ಎಂದರು.

ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್​ಗೆ ಚಾಲನೆ (ETV Bharat)

ನಾಡು ಕಂಡ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ "ಅಪ್ಪು ಕಪ್" ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯ ಬಗ್ಗೆ ಚೇತನ್ ಸೂರ್ಯ ಅವರು ಹೇಳಿದಾಗ ಬಹಳ ಸಂತೋಷವಾಯಿತು. ನಾನು ಮೊದಲೇ ತಿಳಿಸಿದಂತೆ ಈ ಟೂರ್ನಿಯ ಮೊದಲ ವಿಜೇತರಿಗೆ ನೂರು ಗ್ರಾಮ್ ಬಂಗಾರ, ದ್ವಿತೀಯ ವಿಜೇತರಿಗೆ ಐವತ್ತು ಗ್ರಾಮ್ ಬಂಗಾರ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಬಂಗಾರವನ್ನು ಬಹುಮಾನ ನೀಡುವುದಾಗಿ ಸಾಯಿ ಗೋಲ್ಡ್ ಪ್ಯಾಲೆಸ್​ನ ಶರವಣ ತಿಳಿಸಿದರು.

ಅಪ್ಪು ಕಪ್​ನ ರುವಾರಿ ಚೇತನ್ ಸೂರ್ಯ ಮಾತನಾಡಿ, ನಾವು ಕಳೆದ ವರ್ಷದಿಂದ ಆಯೋಜಿಸುತ್ತಿರುವ ಅಪ್ಪು ಕಪ್​ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ‌. ಶ್ರೀಮುರಳಿ ಅವರು ಹೇಳಿದಂತೆ ಮುಂದಿನ ವರ್ಷ ಹೊರದೇಶದಲ್ಲಿ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಆಯೋಜಿಸಲು ಪ್ರಯತ್ನ ಪಡುತ್ತೇನೆ‌. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿದೆ. ಜುಲೈ 26, 27, 28 ಬೆಂಗಳೂರಿನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಹತ್ತು ತಂಡಗಳ ಲೋಗೊ, ಜರ್ಸಿ ಅನಾವರಣ ಮಾಡಿ, ತಂಡದ ಮಾಲೀಕರ ಹಾಗೂ ಆಟಗಾರರ ಪರಿಚಯ ಮಾಡಿಕೊಡಲಾಯಿತು. ALL OK (ಅಲೋಕ್), ಸಮರ್ಜಿತ್ ಲಂಕೇಶ್, ಐಶ್ವರ್ಯ ಸಿಂದೋಗಿ, ಅಭಿಲಾಶ್ ದಳಪತಿ, ಕಾವ್ಯಾ ಶಾ, ಶರತ್ ಕ್ಷತ್ರಿಯ, ದಿಲೀಪ್ ಕೆಂಪೇಗೌಡ, ಸಿರಿ ರಾಜು, ರಾಮ್ ಪವನ್, ಐಶಾನ, ಲಾವಣ್ಯ, ದೇವನ್, ರಾಘವ್ ನಾಗ್, ಸುನಾಮಿ ಕಿಟ್ಟಿ, ವಿಜಯ್ ಸಿದ್ದರಾಜ್, ವ್ಯಾಸರಾಜ ಸೋಸಲೆ, ಜ್ಯೋತಿ ವ್ಯಾಸರಾಜ್ ಸೇರಿದಂತೆ ಹೆಸರಾಂತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. "ಅಪ್ಪು ಕಪ್" ನಲ್ಲಿ ಆಡುತ್ತಿರುವ ತಂಡಗಳು ಹೀಗಿದೆ.

  1. ಯುವರತ್ನ ಚಾಂಪಿಯನ್ಸ್ ಮಾಲೀಕರು ಬಿ.ಎಂ.ಶ್ರೀರಾಮ್ ಕೋಲಾರ್(Deepa Films), ನಾಯಕ ಪ್ರವೀಣ್ ತೇಜ್.
  2. ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ(Oirgin Ventures), ನಾಯಕ ರವಿ ಚೇತನ್.
  3. ಪವರ್ ಪೈತಾನ್ಸ್ ಮಾಲೀಕರು ಐಶ್ವರ್ಯ (SN Jals Events), ‌ನಾಯಕ ಸದಾಶಿವ ಶೆಣೈ.
  4. ದೊಡ್ಮನೆ ಡ್ರಾಗನ್ಸ್ ಮಾಲೀಕರು ಮಹೇಶ್ ಗೌಡ,(MKJ Group), ನಾಯಕ ಪ್ರಮೋದ್ ಶೆಟ್ಟಿ.
  5. ಜಾಕಿ ರೈಡರ್ಸ್ ಮಾಲೀಕರು ಶ್ರೀಹರ್ಷ(Sri Entertainments), ನಾಯಕ ಮನು ರವಿಚಂದ್ರನ್.
  6. ರಾಜಕುಮಾರ ಕಿಂಗ್ಸ್(Kings Club), ಮಾಲೀಕರು ವಿ.ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್.
  7. ಗಂಧದಗುಡಿ ವಾರಿಯರ್ಸ್ ಮಾಲೀಕರು ಡಾ||ಚೇತನ ಆರ್ ಎಸ್,(Kalaluha), ನಾಯಕ ಭುವನ್ ಗೌಡ.
  8. ವೀರ ಕನ್ನಡಿಗ ಬುಲ್ಸ್ ಮಾಲೀಕರು ಮೋನೀಶ್ ಸಿ.‌(Builder), ನಾಯಕ ದಿಲೀಪ್ ರಾಜ್.
  9. ಅರಸು ಹಂಟರ್ಸ್ ಮಾಲೀಕರು ಆನಂದ್(PRO Win management) . ನಾಯಕ ಹರೀಶ್ ನಾಗರಾಜ್.
  10. ಮೌರ್ಯ ವೈಟ್ ಗೋಲ್ಡ್, ಮಾಲೀಕರು ಬಾಬು ಸಿ.ಜೆ(White Gold), ನಾಯಕ ನಿರಂಜನ್ ದೇಶಪಾಂಡೆ.

ಓದಿ:ಸೆಂಚುರಿ ಸ್ಟಾರ್ ಇಂಟ್ರೊಡಕ್ಷನ್ ಟೀಸರ್ ಬೊಂಬಾಟ್​.. ಐ ಆಮ್ ಕಮಿಂಗ್ ಅಂತಿದ್ದಾರೆ ಶಿವರಾಜ್​ಕುಮಾರ್ - Shivarajkumar

ABOUT THE AUTHOR

...view details