ಕನ್ನಡ ಚಿತ್ರರಂಗದಲ್ಲಿ ಟೈಟಾನಿಕ್ ಚೆಲುವೆಯಾಗಿ ಸಿನಿಪ್ರಿಯರ ಮನಸ್ಸು ಗೆದ್ದ ನಟಿ ಅನು ಪ್ರಭಾಕರ್. ರಿಯಾಲಿಟಿ ಶೋಗಳ ಜೊತೆಗೆ ಕಂಟೆಂಟ್ ಆಧರಿತ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ಇದೀಗ ಹಾರರ್ ಕಥೆ ಹೊಂದಿರುವ 'ಹಗ್ಗ'ದ ಮೂಲಕ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ.
ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಮೋಷನ್ ಪೋಸ್ಟರ್ ಇತ್ತೀಚೆಗೆ ಅನಾವರಣಗೊಂಡಿದೆ. ವೇಣು, ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೋಷನ್ ಪೋಸ್ಟರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಗ್ಗ ಚಿತ್ರದ ಒಂದು ಕ್ಷಣ (ETV Bharat) ಇದನ್ನೂ ಓದಿ:ಪ್ರಣಂ ದೇವರಾಜ್ ಅಭಿನಯದ 'ಸನ್ ಆಫ್ ಮುತ್ತಣ್ಣ' ಶೂಟಿಂಗ್ ಕಂಪ್ಲೀಟ್ - Son Of Muttanna
ವಿಭಿನ್ನ ಕಥಾಹಂದರದ ಈ ಚಿತ್ರದಲ್ಲಿ ತಬಲ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
'ಹಗ್ಗ' ಕಲಾವಿದರು (ETV Bharat) ನಿರ್ಮಾಪಕ ರಾಜ್ ಭಾರದ್ವಾಜ್ ಹಗ್ಗ ಕಥೆ ಬರೆದಿದ್ದು, ಅವಿನಾಶ್ ಎನ್. ನಿರ್ದೇಶಿಸಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್.ಎಂ.ವಿಶ್ವ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್.ಪಿ. ಸಂಭಾಷಣೆ ಬರೆದಿದ್ದಾರೆ. ಆಗಸ್ಟ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ.