ETV Bharat / entertainment

ಗಣೇಶ್​​ ಸಿನಿಮಾ ಟೈಟಲ್​ ಟೀಸರ್​​ ಅನಾವರಣಕ್ಕೆ ದಿನ ನಿಗದಿ: ಪವರ್​ಫುಲ್​ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್​ - GOLDEN STAR GANESH

ಟಾಲಿವುಡ್​ನ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯು ಗಣೇಶ್ ಅವರ​ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ನಾಳೆ ಟೈಟಲ್​ ಟೀಸರ್​​ ಅನಾವರಣಗೊಳ್ಳಲಿದೆ.

Golden Star Ganesh
ಗೋಲ್ಡನ್​ ಸ್ಟಾರ್​ ಗಣೇಶ್​​ ಹೊಸ ಸಿನಿಮಾ (Photo: Film Poster)
author img

By ETV Bharat Entertainment Team

Published : Jan 1, 2025, 3:36 PM IST

ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಸ್ಟಾರ್​ಡಮ್​ ಹೊಂದಿರುವ ಗೋಲ್ಡನ್​ ಸ್ಟಾರ್ ಗಣೇಶ್​​​ ನಟನೆಯ ಕೊನೆಯ ಚಿತ್ರ "ಕೃಷ್ಣಂ ಪ್ರಣಯ ಸಖಿ" ಯಶಸ್ವಿಯಾಗಿದೆ. ರೊಮ್ಯಾಂಟಿಕ್​ ಕಾಮಿಡಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಗಣಿ ಮುಖ್ಯಭೂಮಿಕೆಯ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದರು. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ‌ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯು ಗಣೇಶ್ ಮುಖ್ಯಭೂಮಿಕೆಯಲ್ಲಿ​​ ಸಿನಿಮಾ ಬರಲಿದೆ ಎಂದು ಘೋಷಿಸಿತ್ತು. ಇದೀಗ ಪೋಸ್ಟರ್ ಒಂದನ್ನು ಅನಾವರಣಗೊಳಿಸಿ, ಟೈಟಲ್​ ಟೀಸರ್​​ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ.

2024ರ ಆಗಸ್ಟ್​​ನಲ್ಲಿ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಗಿತ್ತು. ಸಾಲು ಸಾಲು ಸಿನಿಮಾಗಳ ಪೈಕಿ ಸಖತ್​ ಸದ್ದು ಮಾಡಿದ್ದ ಗೋಲ್ಡನ್​ ಸ್ಟಾರ್​ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೃಷ್ಣಂ ಪ್ರಣಯ ಸಖಿ" ಆಗಸ್ಟ್​ 15ರಂದು ತೆರೆಗಪ್ಪಳಿಸಿತ್ತು. ಚಂದನವನದ ಹಾಸ್ಯ ಗಣಿ ನಟನೆಯಲ್ಲಿ ಮೂಡಿಬಂದ ಈ ಪ್ರೇಮ್​ಕಹಾನಿ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾ ಕೆಲ ಚಿತ್ರಮಂದಿರಗಳಲ್ಲಿ ಶತದಿನಗಳ ಕಾಲ ಓಡುವ ಮೂಲಕ ಬಹುತೇಕರ ಗಮನ ಸೆಳೆದಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಗೋಲ್ಡನ್​ ಸ್ಟಾರ್​​ನ ಮುಂದಿನ ಪ್ರಾಜೆಕ್ಟ್​ಗಳಿಗಾಗಿ ಕಾತರರಾಗಿದ್ದ ಸಂದರ್ಭ ಟಾಲಿವುಡ್​ನ‌ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿತು. ಇದೀಗ ಸಿನಿಮಾದ ಪೋಸ್ಟರ್​ ಅನಾವರಣಗೊಂಡಿದೆ.

ಇದನ್ನೂ ಓದಿ: ಕ್ಯಾನ್ಸರ್ ಗೆದ್ದ​ ಕರುನಾಡ ಚಕ್ರವರ್ತಿ : ಡಬಲ್​ ಪವರ್​​ನೊಂದಿಗೆ ಬರುತ್ತೇನೆಂದ ಶಿವರಾಜ್​ಕುಮಾರ್​

ಪೋಸ್ಟರ್​ ಶೇರ್ ಮಾಡಿರುವ ನಾಯಕ ನಟ ಮತ್ತು ಪ್ರೊಡಕ್ಷನ್​​ ಹೌಸ್, ''ದೈವಿಕ ಶಕ್ತಿಯ ಸ್ಫೋಟ - ರುದ್ರನ ಕ್ರೋಧ, ಜನವರಿ 2, 2025ರಂದು ಟೈಟಲ್​​ ಟೀಸರ್‌ನೊಂದಿಗೆ 'PMF49'ರ ಮೊದಲ ನೋಟವನ್ನು ಕಣ್ತುಂಬಿಕೊಳ್ಳಲು ರೆಡಿಯಾಗಿ'' ಎಂದು ಬರೆದುಕೊಂಡಿದ್ದಾರೆ. ಟೈಟಲ್​​ ಟೀಸರ್‌ ನಾಳೆ ಅನಾವರಣಗೊಳ್ಳಲಿದ್ದು, ಇಂದಿನ ಪೋಸ್ಟರ್​ನಲ್ಲಿ ಪವರ್​ಫುಲ್​ ತ್ರಿಶೂಲದ ನೋಟವನ್ನು ಕಾಣಬಹುದು. ಅಲ್ಲಿಗೆ ಲವರ್​ ಬಾಯ್​​ ಗಣೇಶ್​​ ಪವರ್​ಫುಲ್​ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅನ್ನೋದು ಬಹುತೇಕ ಪಕ್ಕಾ ಆಗಿದೆ.

ಇದನ್ನೂ ಓದಿ: 'ಅಮ್ಮನ ನೆನಪು, ನಾನಿನ್ನೂ ಸಿನಿಮಾವನ್ನು ಸಂಪೂರ್ಣ ವೀಕ್ಷಿಸಿಲ್ಲ': ಮ್ಯಾಕ್ಸ್​​ ನಾಯಕ ಸುದೀಪ್​​

ಟಿ.ಜಿ.ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿಯು ಗಣೇಶ್ ಅವರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಖ್ಯಾತ ನೃತ್ಯ ನಿರ್ದೇಶಕ ಧನಂಜಯ್‌ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದ ಶೀರ್ಷಿಕೆ ನಾಳೆ ತಿಳಿಯಲಿದೆ. ಇನ್ನುಳಿದಂತೆ ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.