ಕರ್ನಾಟಕ

karnataka

ETV Bharat / entertainment

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಕಂಡು ಹುಬ್ಬೇರಿಸಿದ ಫ್ಯಾನ್ಸ್: ವಿಡಿಯೋ ನೋಡಿ - ALLU ARJUN RASHMIKA MANDANNA

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಜೋಡಿ ನೃತ್ಯಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

Allu Arjun Rashmika Mandanna
ಅಲ್ಲು ಅರ್ಜುನ್​​ - ರಶ್ಮಿಕಾ ಮಂದಣ್ಣ (Photo: IANS)

By ETV Bharat Entertainment Team

Published : Nov 30, 2024, 12:36 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್​' ಬಿಡುಗಡೆಗೆ ಕೌಂಟ್​ಡೌನ್​ ಶುರುವಾಗಿದೆ. ರಿಲೀಸ್​ ಡೇಟ್​​ ಸಮೀಪಿಸುತ್ತಿದ್ದು, ದೇಶಾದ್ಯಂತ ಪ್ರಮೋಶನ್​ ಜೊರಾಗೇ ನಡೆಯುತ್ತಿದೆ. ಥ್ರಿಲ್ಲಿಂಗ್​​ ಲೈವ್ ಪರ್ಫಾಮೆನ್ಸ್​​ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದು, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿವೆ.

ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಪುಷ್ಪ 2 ಪ್ರಮೋಶನ್​ ಈವೆಂಟ್​​ ಅಭಿಮಾನಿಗಳಿಗೆ ಒಂದು ಭರ್ಜರಿ ಟ್ರೀಟ್​ ಅಂತಲೇ ಹೇಳಬಹುದು. ಅದ್ಧೂರಿ ವೇದಿಕೆಯಲ್ಲಿ ನಾಯಕ ನಾಯಕಿ ಚಿತ್ರದ ಅಂಗಾರನ್ ಹಾಡಿನ ಹುಕ್ ಸ್ಟೆಪ್​ ಹಾಕೋ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಹುಬ್ಬೇರಿಸಿದರು.

ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿರುವ ಫೋಟೋ ಶೇರ್ ಮಾಡಿದ ನಾಯಕ ನಟ ಅಲ್ಲು ಅರ್ಜುನ್, "ಪುಷ್ಪಾ ರಾಜ್ ಮತ್ತು ಶ್ರೀವಲ್ಲಿ" ಎಂಬ ಗಮನಾರ್ಹ ಕ್ಯಾಪ್ಷನ್​ ಕೊಟ್ಟಿದ್ದಾರೆ. ಜೊತೆಗೆ ಹಾರ್ಟ್​ ಎಮೋಜಿ ಬಳಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಜೋಡಿ ನಡುವಿನ ಅದ್ಭುತ ಕೆಮಿಸ್ಟ್ರಿಯನ್ನು ಸೆರೆಹಿಡಿದಿದೆ. ಅಲ್ಲು ಅರ್ಜುನ್ ಬ್ಲ್ಯಾಕ್​​ ಸೂಟ್‌ನಲ್ಲಿ ಸಖತ್​ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡ್ರೆ, ರಶ್ಮಿಕಾ ಮಂದಣ್ಣ ಬ್ಲ್ಯಾಕ್​​ ಸೀರೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ವೇದಿಕೆಯಲ್ಲಿ ಜೋಡಿ ಹಿಂದಿದ್ದ ದೊಡ್ಡ ಸ್ಕ್ರೀನ್​ನಲ್ಲಿ ಅಲ್ಲು ಅರ್ಜುನ್​ ಅವರ ಐಕಾನಿಕ್​ ಪುಷ್ಪ ರಾಜ್​ ಲುಕ್ ಅನ್ನು ಕಾಣಬಹುದಾಗಿದೆ. ​

'ರಶ್ಮಿಕಾರನ್ನು ವೇದಿಕೆ ಮೇಲೆ ಬರಲು ವಿನಂತಿಸುತ್ತೇನೆ': ಈವೆಂಟ್​ನಲ್ಲಿ ನಾಯಕ ನಟ ಪ್ರೇಕ್ಷಕರಿಗೆ ಮನತುಂಬಿ ಧನ್ಯವಾದ ಅರ್ಪಿಸಿದ್ದಾರೆ. ನಂತರ ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು ಡ್ಯಾನ್ಸ್​ಗೆ ಆಹ್ವಾನಿಸುವ ಮೂಲಕ ಅಲ್ಲಿ ಸೇರಿದ್ದವರನ್ನು ಆಶ್ಚರ್ಯಗೊಳಿಸಿದರು. "ಒಂದು ಕ್ಷಣಕ್ಕಾಗಿ, ಪ್ರೀತಿಗಾಗಿ, ನಾನು ರಶ್ಮಿಕಾ ಅವರನ್ನು ವೇದಿಕೆಯ ಮೇಲೆ ಬರಲು ವಿನಂತಿಸುತ್ತೇನೆ. ನಾನು ಅಂಗಾರನ್ ಹಾಡಿಗೆ ಸಣ್ಣ ಸ್ಟೆಪ್​​ ಹಾಕಲು ಬಯಸುತ್ತೇನೆ. ಆ ಹಾಡನ್ನು ಕೆಲವೇ ಕೆಲವು ಬಾರಿ ಮನದುಂಬಿ ಆನಂದಿಸಿದ್ದೇನೆ. ಅಂಥ ಒಂದು ಅನುಭವ ಆದಾಗ ಮಾತ್ರ ನಾನದನ್ನು ಮಾಡುತ್ತೇನೆ. ಇಂದು ಆ ಫೀಲ್​ ಇದೆ. ದಯವಿಟ್ಟು, ಹಾಡನ್ನು ಪ್ಲೇ ಮಾಡಿ'' ನಟ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ತಿಳಿಸಿದರು.

ಇದನ್ನೂ ಓದಿ:ಕಿಚ್ಚ vs ಉಪ್ಪಿ: ಮ್ಯಾಕ್ಸ್ - ಯುಐ ಬಾಕ್ಸ್​ ಆಫೀಸ್​ ಫೈಟ್​​; ಯಾರಾದರೂ ಹಿಂದೆ ಸರಿಯುತ್ತಾರಾ?

ಆಹ್ವಾನ ಸ್ವೀಕರಿಸಿದ ಸಹನಟಿ ರಶ್ಮಿಕಾ ಮಂದಣ್ಣ, ಆ ಹಾಡಿಗೆ ಜೀವ ತುಂಬಿದರು. ಜೋಡಿಯ ಡ್ಯಾನ್ಸ್​ ನಿಜಕ್ಕೂ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಸುಂದರ ಫೋಟೋ ವಿಡಿಯೋಗಳು ವೈರಲ್​ ಆಗುತ್ತಿದ್ದು, ಅನೇಕರು ಮನಸೋತಿದ್ದಾರೆ. ಜನಪ್ರಿಯ ಜೋಡಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ:ಫ್ಯಾಕ್ಟ್​​ ಚೆಕ್​: ಐಶ್ವರ್ಯಾ ರೈ ಮೊಬೈಲ್​​ ವಾಲ್​ಪೇಪರ್​ನಲ್ಲಿರೋದು ಅಮಿತಾಭ್​​ ಬಚ್ಚನ್​ ಅಲ್ಲ; ಹಾಗಾದ್ರೆ ಯಾರು? ವಿಡಿಯೋ ಇಲ್ಲಿದೆ

ಸುಕುಮಾರ್ ನಿರ್ದೇಶನದ ಪುಷ್ಪ 2ರಲ್ಲಿ ಫಹಾದ್ ಫಾಸಿಲ್ ಎದುರಾಳಿಯಾಗಿ ನಟಿಸಿದ್ದಾರೆ. ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್ 5 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರ ಗುರುವಾರ ಅದ್ಧೂರಿಯಾಗಿ ಬಿಡುಗಡೆ ಆಗಲಿದ್ದು, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ಸವಿಯಲು ಎದುರು ನೋಡುತ್ತಿದ್ದಾರೆ.

ABOUT THE AUTHOR

...view details