ಕರ್ನಾಟಕ

karnataka

ETV Bharat / entertainment

ಐಶ್ವರ್ಯಾ - ಅಭಿಷೇಕ್​ ನಡುವೆ ಬಿರುಕು: ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿತು ಮಾಜಿ ವಿಶ್ವಸುಂದರಿಯ ಸಿಂಪಲ್ ಪೋಸ್ಟ್ - AISHWARYA RAI

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್​​ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವಿಚಾರ ನಿನ್ನೆ ಮೊನ್ನೆಯದ್ದಲ್ಲ. ಆದರೆ ಮಾಜಿ ವಿಶ್ವಸುಂದರಿಯ ಸಿಂಪಲ್ ಪೋಸ್ಟ್ ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿದೆ.

Bachchan Family
ಬಚ್ಚನ್​ ಕುಟುಂಬ (Photo source: IANS)

By ETV Bharat Entertainment Team

Published : Oct 12, 2024, 12:03 PM IST

ತಾರಾ ದಂಪತಿ, ತಾರಾ ಕುಟುಂಬದ ವೃತ್ತಿಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನವೂ ಹೆಚ್ಚು ಚರ್ಚೆಗೆ ಒಳಪಡುತ್ತವೆ. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗೆಗಿನ ಪೋಸ್ಟ್​​ಗಳು ಹೆಚ್ಚು ಹರಿದಾಡುತ್ತವೆ. ಭಾರತೀಯ ಚಿತ್ರರಂಗದಲ್ಲೇ ಅತ್ಯುನ್ನತ ಖ್ಯಾತಿ ಪಡೆದ ಬಚ್ಚನ್​ ಕುಟುಂಬ ಕೂಡಾ ಇದರಿಂದ ಹೊರತಲ್ಲ.

ಹೌದು, ಐಶ್ವರ್ಯಾ-ಅಭಿಷೇಕ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವದಂತಿ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪ್ರಖ್ಯಾತ ವೃತ್ತಿಜೀವನ ಮಾತ್ರವಲ್ಲದೇ, ಗಂಡನ ಮನೆ ಬಚ್ಚನ್ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬ ವದಂತಿಗಳು ಕಳೆದ ಕೆಲ ತಿಂಗಳುಗಳಿಂದ ದೊಡ್ಡ ಮಟ್ಟದ್ದಲ್ಲೇ ನಡೆದಿದೆ. ಆದರೆ ಅತಿಲೋಕ ಸುಂದರಿ ಊಹಾಪೋಹಗಳ ನಡುವೆ ಮಾವ ಅಮಿತಾಭ್​ ಬಚ್ಚನ್ ಅವರಿಗೆ ಸ್ಪೆಷಲ್​ ವಿಶ್​ ಮಾಡಿ ಗಮನ ಸೆಳೆದಿದ್ದಾರೆ.

ಮಾವನಿಗೆ ಸೊಸೆಯ ಬರ್ತ್​​​ಡೇ ವಿಶ್​:ನಿನ್ನೆ ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಭ್​ ಬಚ್ಚನ್​​​ ತಮ್ಮ 82ನೇ ಜನ್ಮದಿನ ಆಚರಿಸಿಕೊಂಡರು. ಈ ಹಿನ್ನೆಲೆ ಶುಕ್ರವಾರ ತಡರಾತ್ರಿ, ಐಶ್ವರ್ಯಾ ತಮ್ಮ ಮುದ್ದು ಮಗಳು ಆರಾಧ್ಯ ಮತ್ತು ಮಾವ ಅಮಿತಾಭ್​​ ಅವರನ್ನೊಳಗೊಂಡ ಮುದ್ದಾದ ಫೋಟೋವನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡರು. ತಮ್ಮ ಸ್ಪೆಷಲ್​ ಪೋಸ್ಟ್​ಗೆ, ''ಜನ್ಮದಿನದ ಶುಭಾಶಯಗಳು ಪಾ-ದಾದಾಜಿ. ದೇವರು ಆಶೀರ್ವದಿಸಲಿ'' ಎಂದು ಬರೆದುಕೊಂಡಿದ್ದಾರೆ. ಕ್ಯಾಪ್ಷನ್​ನಲ್ಲಿ ಪಾ (ಅಪ್ಪ) ಎಂದು ಉಲ್ಲೇಖಿಸಿರುವುದು ಬಹುತೇಕರ ಗಮನ ಸೆಳೆದಿದೆ. ಇದು ಬಚ್ಚನ್​ ಮತ್ತು ರೈ ಕುಟುಂಬಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಕೆಲಸ ಮಾಡಿದೆ.

ಐಶ್ವರ್ಯಾ ರೈ ಅವರ ಈ ಪೋಸ್ಟ್​​ನ ಹೊರತಾಗಿಯೂ, ಬಚ್ಚನ್ ಕುಟುಂಬದ ವಿಷಯಗಳು ಸೋಷಿಯಲ್​ ಮೀಡಿಯಾಗಳಲ್ಲಿ ಹಾಟ್​ ಟಾಪಿಕ್​ ಆಗಿಯೇ ಉಳಿದುಬಿಟ್ಟಿದೆ. ಇತ್ತೀಚೆಗಷ್ಟೇ ನಡೆದ ಅನಂತ್ ಅಂಬಾನಿ ಅವರ ಅದ್ಧೂರಿ ವಿವಾಹ ಸಮಾಂಭಕ್ಕೆ ಐಶ್ವರ್ಯಾ ಮತ್ತು ಆರಾಧ್ಯ ಪ್ರತ್ಯೇಕವಾಗಿ ಆಗಮಿಸಿದ ನಂತರ ವದಮತಿಗಳು ಉಲ್ಭಣಗೊಂಡವು. ಅಮಿತಾಭ್, ಪತ್ನಿ ಜಯಾ, ಮಗ ಅಭಿಷೇಕ್ ಮತ್ತು ಮಗಳು ಶ್ವೇತಾ ಎಲ್ಲರೂ ಮದುವೆ ಕಾರ್ಯಕ್ರಮಕ್ಕೆ ಒಟ್ಟಿಗೆ ಎಮಟ್ರಿ ಕೊಟ್ಟರು. ಆದ್ರೆ ಐಶ್ವರ್ಯಾ ಅವರ ಸಪರೇಟ್​ ಎಂಟ್ರಿ ಹಿನ್ನೆಲೆ, ಭಿನ್ನಾಭಿಪ್ರಾಯದ ಊಹಾಪೋಹಗಳು ತೀವ್ರಗೊಂಡವು. ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬಂದವರು. ಮದುವೆ ನಡೆದ ಸ್ಥಳದಲ್ಲಿ ಐಶ್​ ಮತ್ತು ಅಭಿ ಒಟ್ಟಿಗೆ ಕುಳಿತುಕೊಂಡಿರುವ ಫೋಟೋಗಳೂ ವೈರಲ್​ ಆದ್ರೂ ಕೂಡಾ, ಹೆಚ್ಚಿನವರು ಕಾರ್ಯಕ್ರಮಕ್ಕೆ ಪತ್ಯೇಕವಾಗಿ ಪವ್ರೇಶವಾದ ಬಗ್ಗೆಯೇ ಗಮನ ಹರಿಸಿದರು.

ಐಶ್ವರ್ಯಾ ಅವರು ಮಗಳು ಆರಾಧ್ಯ ಜೊತೆ ಪ್ಯಾರಿಸ್ ಫ್ಯಾಶನ್ ವೀಕ್‌ನಂತಹ ಪ್ರತಿಷ್ಠಿತ ಈವೆಂಟ್​ಗಳೂ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಂದ ತಾಯಿ ಮಗಳು ದೂರವಿರುವುದು ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗೆ ನಡೆದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ತಾಯಿ ಮಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಐಶ್ವರ್ಯಾ ಬಚ್ಚನ್​ ಕುಟುಂಬದೊಂದಿಗೆ ಚೆನ್ನಾಗಿಲ್ಲ ಎಂಬ ಗುಸುಗುಸು ಜೋರಾಗಿದೆ.

ಇದನ್ನೂ ಓದಿ:ರಜನಿ, ಬಿಗ್​ ಬಿ 'ವೆಟ್ಟೈಯನ್' ಕಲೆಕ್ಷನ್​: ಸೂಪರ್​ ಸ್ಟಾರ್ಸ್ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್

ಕಾರ್ಯಕ್ರಮದಲ್ಲಿ ಐಶ್ವರ್ಯಾ ತಮ್ಮ ವೆಡ್ಡಿಂಗ್​ ರಿಂಗ್​ ಇಲ್ಲದೇ ಕಾಣಿಸಿಕೊಂಡಿದ್ದರು. ಇದು ಆನ್‌ಲೈನಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಉತ್ತೇಜನ ನೀಡಿತು. ನಂತರ, ಪ್ಯಾರಿಸ್​ ಈವೆಂಟ್​ನಲ್ಲಿ ತಮ್ಮ ರಿಂಗ್​ನೊಂದಿಗೆ ಕಾಣಿಸಿಕೊಂಡರು. ಉಲ್ಭಣಗೊಂಡಿರುವ ಊಹಾಪೋಹಗಳ ನಡುವೆಯೂ, ಐಶ್ವರ್ಯಾ ಅಥವಾ ಕುಟುಂಬದ ಸದಸ್ಯರು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡಿಲ್ಲ.

ಅಭಿಷೇಕ್ ಮತ್ತು ಐಶ್ವರ್ಯಾ ತೆರೆಹಂಚಿಕೊಂಡಿರುವ ಚಿತ್ರಗಳು:

  • ಧೈ ಅಕ್ಸರ್ ಪ್ರೇಮ್ ಕೆ (2000).
  • ಕುಚ್ ನಾ ಕಹೋ (2003).
  • ಧೂಮ್ 2 (2006).
  • ಉಮ್ರಾವ್ ಜಾನ್ (2006).
  • ಗುರು (2007).
  • ಸರ್ಕಾರ್ ರಾಜ್ (2008).
  • ರಾವನ್ (2010).

ಇದನ್ನೂ ಓದಿ:ಸ್ವರ್ಗ ನರಕ ಒಂದಾಯ್ತು: ಶಿಶಿರ್​ ಬಿಗ್​ ಬಾಸ್​​ನ​ ಹೊಸ ಕ್ಯಾಪ್ಟನ್​: ಕಿಚ್ಚನ ಪಂಚಾಯ್ತಿಯಲ್ಲಿಂದು ಹೈ ಡ್ರಾಮಾ?

2007ರ ಏಪ್ರಿಲ್ 20ರಂದು ಖಾಸಗಿ ವಿವಾಹ ಸಮಾರಂಭದಲ್ಲಿ ಹಾರ ಬದಲಾಯಿಸಿಕೊಂಡರು. 2011ರ ನವೆಂಬರ್ 16ರಂದು ತಮ್ಮ ಮಗಳು ಆರಾಧ್ಯರನ್ನು ಬರಮಾಡಿಕೊಂಡರು.

ABOUT THE AUTHOR

...view details