ಬೆಳ್ಳಿ ಪರದೆಯ ಮೇಲೆ ಯುವ ರಾಜ್‌ಕುಮಾರ್ ಅಬ್ಬರಿಸಲು ದಿನಗಣನೆ ಶುರುವಾಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಟೀಸರ್ ರಿಲೀಸ್ ಮಾಡಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಬಳಿಕ ಸುದ್ದ ಮಾಡಿರಲಿಲ್ಲ. ಇದೀಗ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಹೊಂಬಾಳೆ ಫಿಲ್ಮ್ಸ್ ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಪ್ಪು ಅಗಲಿಕೆಯ ಬಳಿಕ ಕೆಲವು ಅಭಿಮಾನಿಗಳು ಯುವ ರಾಜ್‌ಕುಮಾರ್ ಅವರಲ್ಲಿ ಅಪ್ಪುನ ನೋಡುತ್ತಿದ್ದಾರೆ. ಹೀಗಾಗಿ 'ಯುವ' ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಪ್ರಚಾರ ಕಾರ್ಯ ಶುರುವಾಗುವ ಸಾಧ್ಯತೆಯಿದೆ. ಟೀಸರ್, ಸಾಂಗ್ಸ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿದೆ.
ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಹೊಸ್ತಿಲ್ಲಲ್ಲಿ ಅಫೀಷಿಯಲ್ ಟ್ರೇಲರ್ ಲಾಂಚ್ ಆಗುವ ನಿರೀಕ್ಷೆಯಿದೆ. ಮಾಸ್ ಎಲಿಮೆಂಟ್ಸ್ ಜೊತೆ ಒಂದು ಲವ್ ಸ್ಟೋರಿ ಕೂಡ 'ಯುವ' ಚಿತ್ರದಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ. ರಗಡ್ ಲುಕ್‌ನಲ್ಲಿ ಯುವ ಚಂದವನಕ್ಕೆ ಪರಿಚಿತರಾಗಲಿದ್ದಾರೆ. ಕಥೆ ಬಗ್ಗೆ ಯಾವುದೇ ಸುಳಿವು ಕೊಡದೇ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿದೆ. ಅಣ್ಣಾವ್ರ ಮೊಮ್ಮಗನ ಆರಂಗೇಟ್ರಂ ಸಿನಿಮಾ ಆಗಿರುವುದರಿಂದ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ಯುವ ರಾಜ್‌ಕುಮಾರ್ ಸ್ಟಂಟ್ಸ್ ಮತ್ತು ಡ್ಯಾನ್ಸ್ ಬಗ್ಗೆ ಕುತೂಹಲ ತುಸು ಜಾಸ್ತಿಯೇ ಇದೆ.
ಒಂದು ಮಾಸ್ ಸಬ್ಜೆಕ್ಟ್ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ'ಕ್ಕಿದೆ. ಸದ್ಯ ಯುವ ಆಪ್ತರ ಪ್ರಕಾರ ಯುವ ಸಿನಿಮಾದ ಮೇಕಿಂಗ್ ಜೊತೆಗೆ ಯುವ ಆ್ಯಕ್ಟಿಂಗ್ ನೋಡುಗರಿಗೆ ಇಷ್ಟವಾಗುತ್ತೆ. ಆ ಮಟ್ಟಿಗೆ ಯುವ ರಾಜ್‌ಕುಮಾರ್ ಅಭಿನಯ ಮಾಡಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಇವರು ನಟಿಸುತ್ತಾರೆ ಎನ್ನುವ ವದಂತಿ ಹರಡಿತ್ತು. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಚಿತ್ರದಲ್ಲೂ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರದ ಟೈಟಲ್ ಅನಾವರಣಗೊಳಿಸಿದ ಸಚಿವ ಜಿ. ಪರಮೇಶ್ವರ್