ಗಾಜನೂರಿನಲ್ಲಿ ಯುವ ರಾಜ್‍ಕುಮಾರ್ ಚಾಮರಾಜನಗರ: ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಡಾ. ರಾಜ್‍ಕುಮಾರ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್‍ಕುಮಾರ್ ಅವರು ಇಂದು ಗಾಜನೂರಿನ ಮನೆಗೆ ಭೇಟಿ ಕೊಟ್ಟು, ತಾತ ಹಾಗೂ ಅಪ್ಪು ಅವರ ನೆಚ್ಚಿನ ತಾಣ ಆಲದಮರದ ತೋಪಿಗೆ ತೆರಳಿ ವಿಶ್ರಾಂತಿ ಪಡೆದರು.
ಗಾಜನೂರಿನಲ್ಲಿ ಯುವ ರಾಜ್‍ಕುಮಾರ್ ಉದಯೋನ್ಮುಖ ನಟನನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತಾಮುಂದು - ನಾಮುಂದು ಎಂಬಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಯುವ ರಾಜ್‍ಕುಮಾರ್ ಸುತ್ತಲು ಸುತ್ತುವರೆದಿದ್ದರು. ಜೊತೆಗೆ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದಾರೆ. ಗಾಜನೂರಿನ ಮನೆ ಸಮೀಪ ಇರುವ ಆಲದಮರದ ತೋಪು ಅಣ್ಣಾವ್ರ ಮೆಚ್ಚಿನ ತಾಣವಾಗಿತ್ತು. ಇಲ್ಲಿಗೆ ಬಂದಾಗಲೆಲ್ಲ ಹೆಚ್ಚಿನ ಸಮಯವನ್ನು ಆಲದಮರದ ಬಳಿಯೇ ಕಳೆಯುತ್ತಿದ್ದರು. ಪುನೀತ್ ರಾಜ್‍ಕುಮಾರ್ ಕೂಡ ಸಾಕಷ್ಟು ಬಾರಿ ಆಲದಮರದ ಬಳಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೀಗ ಈ ಜಾಗದಲ್ಲಿ ಯುವ ರಾಜ್‍ಕುಮಾರ್ ಸಮಯ ಕಳೆದಿದ್ದು ವಿಶೇಷವಾಗಿತ್ತು.
ಗಾಜನೂರಿನಲ್ಲಿ ಯುವ ರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ ಯುವ ಸಿನಿಮಾ ಯುವ ರಾಜ್‍ಕುಮಾರ್ ಅಭಿನಯದ ಚೊಚ್ಚಲ ಚಿತ್ರ. ಚಿತ್ರದ ಟೈಟಲ್ ಸಾಂಗ್ ಇಂದು ಚಾಮರಾಜನಗರದಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡುಗಡೆ ಆಗಲಿದೆ. ಚಾಮರಾಜನಗರದ ಚಾಮರಾಜೇಶ್ವರ ದೇಗುಲದ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಂಜೆ 6ಕ್ಕೆ " ಒಬ್ಬನೇ ಶಿವ - ಒಬ್ಬನೇ ಯುವ" ಎಂಬ ಹಾಡು ಅನಾವರಣಗೊಳ್ಳಲಿದೆ.
ಇದನ್ನೂ ಓದಿ:ಚಾಮರಾಜನಗರದಲ್ಲಿಂದು 'ಯುವ' ಟೈಟಲ್ ಸಾಂಗ್ ರಿಲೀಸ್; ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ
ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಘಣ್ಣ ಕುಟುಂಬ ಭಾಗಿಯಾಗಲಿದೆ. ಹಾಡನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ ಎಂದಷ್ಟೇ ಚಿತ್ರತಂಡ ಹೇಳಿದ್ದು, ಯಾರು ಆ ವಿಶೇಷ ಆತಿಥಿ ಎಂಬುದನ್ನು ಸಸ್ಪೆನ್ಸ್ ಆಗಿಟ್ಟಿದೆ. ಒಟ್ಟಿನಲ್ಲಿ ಅಣ್ಣಾವ್ರ ತವರಲ್ಲಿ ಯುವ ರಾಜ್‍ಕುಮಾರ್ ಅವರ ಮೊದಲ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ:'ಕೆರೆಬೇಟೆ'ಗೆ ಬಿ.ವೈ ರಾಘವೇಂದ್ರ, ಆರಗ ಜ್ಞಾನೇಂದ್ರ ಸಾಥ್: ಟೈಟಲ್ ಸಾಂಗ್ ರಿಲೀಸ್
ರಾಜ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್‍ಕುಮಾರ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಬಹುನಿರೀಕ್ಷಿತ 'ಯುವ' ಚಿತ್ರಕ್ಕೆ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಹೊಂಬಾಳೆ ಫಿಲ್ಮ್ಸ್ನ ಬಹುತೇಕ ಚಿತ್ರಗಳು ಸೂಪರ್ ಹಿಟ್ ಆಗಿರೋ ಹಿನ್ನೆಲೆ ಹಾಗೂ ಯುವ ರಾಜ್‍ಕುಮಾರ್ ಅಭಿನಯದ ಚೊಚ್ಚಲ ಚಿತ್ರವಾಗಿರೋ ಕಾರಣದಿಂದ, 'ಯುವ' ಈಗಾಗಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದು, ಪ್ರಚಾರ ಪ್ರಾರಂಭವಾಗಿದೆ.