ಕರ್ನಾಟಕ

karnataka

ETV Bharat / entertainment

'ಕವಲುದಾರಿ' ಬಳಿಕ ವಿಶೇಷ ತನಿಖಾಧಿಕಾರಿಯಾಗಿ ರಿಷಿ: 'ರುದ್ರ ಗರುಡ ಪುರಾಣ' ಪೋಸ್ಟರ್ ರಿಲೀಸ್​ - Rishi Poster - RISHI POSTER

ಬಹುನಿರೀಕ್ಷಿತ 'ರುದ್ರ ಗರುಡ ಪುರಾಣ' ಚಿತ್ರದಿಂದ ನಟ ರಿಷಿ ಅವರ ಪೋಸ್ಟರ್ ಅನಾವರಣಗೊಂಡಿದೆ.

Rishi Poster
ನಟ ರಿಷಿ ಪೋಸ್ಟರ್ ಅನಾವರಣ (ETV Bharat)

By ETV Bharat Karnataka Team

Published : Jun 22, 2024, 11:02 AM IST

ದಿ. ನಟ ಪುನೀತ್ ರಾಜ್​​​ಕುಮಾರ್‌ ನಿರ್ಮಾಣದ 'ಕವಲುದಾರಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ರಿಷಿ ಕಳೆದ ದಿನ ತಮ್ಮ 36ನೇ ಜನ್ಮದಿನ ಆಚರಿಸಿಕೊಂಡರು. ಕನ್ನಡ ಮಾತ್ರವಲ್ಲದೇ ಶೈತಾನ್‌ ಎಂಬ ವೆಬ್ ಸೀರಿಸ್ ಮೂಲಕ ತೆಲುಗಿನಲ್ಲೂ ಮನೆ ಮಾತಾಗಿರುವ ನಟ ರಿಷಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದರು. ರಿಷಿ ನಾಯಕರಾಗಿ ನಟಿಸಿರುವ ಮುಂದಿನ ಬಹು ನಿರೀಕ್ಷಿತ ಚಿತ್ರ 'ರುದ್ರ ಗರುಡ ಪುರಾಣ'. ನಾಯಕ ನಟನ ಜನ್ಮದಿನ ಹಿನ್ನೆಲೆ, ಚಿತ್ರತಂಡ ಪೋಸ್ಟರ್ ರಿಲೀಸ್​ ಮಾಡಿ ಸ್ಪೆಷಲ್​ ಆಗಿ ಬರ್ತ್ ಡೇ ವಿಶ್ ಮಾಡಿದೆ.

ಬಹುನಿರೀಕ್ಷಿತ 'ರುದ್ರ ಗರುಡ ಪುರಾಣ' ಚಿತ್ರದಲ್ಲಿ ರಿಷಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕವಲುದಾರಿ ಚಿತ್ರದ ಬಳಿಕ ತನಿಖಾಧಿಕಾರಿಯಾಗಿ ನಟಿಸಿರುವ ಚಿತ್ರವಿದು. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅನಾವರಣಗೊಳಿಸಿದ್ದರು. ಚಿತ್ರದ ಫಸ್ಟ್ ಲುಕ್​​ಗೆ ರಿಷಿ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಬಿಡುಗಡೆ ಆಗಿರುವ ಪೋಸ್ಟರ್ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ಉಳಿದಂತೆ, ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರಿದ್ವಿ ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ:ಪ್ರಭಾಸ್​ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಫೈನಲ್‌ ಟ್ರೇಲರ್​ಗೆ ಫ್ಯಾನ್ಸ್ ಫಿದಾ - Kalki 2898 AD new Trailer

ಈಗಾಗಲೇ 'ರುದ್ರ ಗರುಡ ಪುರಾಣ'ದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. "ಡಿಯರ್ ವಿಕ್ರಮ್" ಚಿತ್ರ ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ.

ಸಂಭಾಷಣೆ ರಘು ನಿಡುವಳ್ಳಿ ಅವರದ್ದು. ಕೆ.ಪಿ ಸಂಗೀತ ನಿರ್ದೇಶನ ಇದೆ. ಸಂದೀಪ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮನು ಶೇಡ್ಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ‌ಮಾಡುವ ಮೂಲಕ ಪ್ರಚಾರ ಪ್ರಾರಂಭಿಸುವುದಾಗಿ ತಿಳಿಸಿರುವ ನಿರ್ದೇಶಕರು, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ ಎಂಬುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ:ನಾಡಪ್ರಭು ಕೆಂಪೇಗೌಡರ ಅವತಾರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ - Nadaprabhu Kempegowda Movie

ABOUT THE AUTHOR

...view details