ಪ್ರಜ್ವಲ್ ದೇವರಾಜ್ ನಟನೆಯ 'ಮಾಫಿಯಾ' ಸಿನಿಮಾ ಅಕ್ಟೋಬರ್ 16ರಂದು ಬಿಡುಗಡೆಯಾಗಲಿದೆ. ವಿಜಯದಶಮಿಯಂದು (ನಿನ್ನೆ) ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿತು.
ಟೀಸರ್ನಿಂದ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ 'ಮಾಫಿಯಾ'ದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಚಿತ್ರದ ರಿಲೀಸ್ ಡೇಟ್ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ.
ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಾಯಕಿ ನಟಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನಟ ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ.