ಕರ್ನಾಟಕ

karnataka

ETV Bharat / entertainment

ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್‌ ಅವರಿ​ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು - ನಟ ಕೆ ಶಿವರಾಮ್

ನಟ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Heart attack to Shivaram
ಶಿವರಾಮ್​ಗೆ ಹೃದಯಾಘಾತ

By ETV Bharat Karnataka Team

Published : Feb 28, 2024, 5:48 PM IST

ಬೆಂಗಳೂರು: ನಟ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಹೆಚ್​ಸಿಜಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವರಾಮ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಲಾಗಿದೆ.

ಕೆ. ಶಿವರಾಮ್ (ಸಂಗ್ರಹ ಚಿತ್ರ)​

"20 ದಿನಗಳ ಹಿಂದೆ ಶಿವರಾಮ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಹೃದಯಾಘಾತವಾಗಿದೆ" ಎಂದು ಅವರ ಆಪ್ತರಾದ ಚಂದ್ರು ತಿಳಿಸಿದ್ದಾರೆ.

71 ವರ್ಷ ವಯಸ್ಸಿನ ಕೆ.ಶಿವರಾಮ್ 'ಬಾ ನಲ್ಲೆ ಮಧು ಚಂದ್ರಕೆ' ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ಇದನ್ನು ಹೊರತುಪಡಿಸಿ ವಸಂತಕಾವ್ಯ, ಖಳನಾಯಕ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ನಾಗ, ಓ ಪ್ರೇಮ ದೇವತೆ ಚಿತ್ರದಲ್ಲಿ ನಟಿಸಿದ್ದಾರೆ. 2007ರಲ್ಲಿ ಬಿಡುಗಡೆಯಾದ ಟೈಗರ್ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ಬಳಿಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:ಮೆಕ್ಸಿಕೋ ಚಿತ್ರೋತ್ಸವದಲ್ಲಿ ಬಿಗ್​ ಬಾಸ್​ ವಿಜೇತ ಕಾರ್ತಿಕ್ ನಟನೆಯ 'ಡೊಳ್ಳು' ಪ್ರದರ್ಶನ

ABOUT THE AUTHOR

...view details