ಕರ್ನಾಟಕ

karnataka

ETV Bharat / entertainment

ದರ್ಶನ್ ಅನುಪಸ್ಥಿತಿಯಲ್ಲಿ ಅಂಬಿ ಸೊಸೆ ಸೀಮಂತ: ಅಭಿಷೇಕ್ ಅಂಬರೀಶ್​​ - ಅವಿವಾ ಬಿದ್ದಪ್ಪ ಫೋಟೋಗಳಿಲ್ಲಿವೆ - Abishek Ambareesh Aviva Biddappa - ABISHEK AMBAREESH AVIVA BIDDAPPA

ಎರಡು ದಿನಗಳ ಹಿಂದೆ ಜೆಪಿ ನಗರದಲ್ಲಿರೋ ನಿವಾಸದಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರ ನಡೆಯಿತು.

Abishek Ambareesh Aviva Biddappa
ಅಭಿಷೇಕ್ ಅಂಬರೀಶ್​​​ - ಅವಿವಾ ಬಿದ್ದಪ್ಪ (ETV Bharat)

By ETV Bharat Karnataka Team

Published : Sep 17, 2024, 7:51 PM IST

ಬೆಂಗಳೂರು: ದಿವಂಗತ ರೆಬಲ್​ ಸ್ಟಾರ್​ ಅಂಬರೀಶ್​ ಮನೆಗೆ ಹೊಸ ಅತಿಥಿ ಶೀಘ್ರವೇ ಆಗಮಿಸಲಿದ್ದಾರೆ. ಹೌದು, ಮಂಡ್ಯದ ಮರಿ ಗೌಡ ಅಭಿಷೇಕ್​ ಅಂಬರೀಶ್ ಶೀಘ್ರದಲ್ಲೇ ತಂದೆಯಾಗಿ ಭಡ್ತಿ ಪಡೆಯಲಿದ್ದಾರೆ. ಪತ್ನಿ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರವನ್ನು ನೆರವೇರಿಸಲಾಗಿದೆ.

ಅಭಿಷೇಕ್ ಅಂಬರೀಶ್​​ - ಅವಿವಾ ಬಿದ್ದಪ್ಪ (ETV Bharat)

2023ರ ಜೂನ್​​ 5ರಂದು ಅಭಿ ಅವಿವಾ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು. ಮಂಡ್ಯದ ಮರಿ ಗೌಡ ಜನಪ್ರಿಯತೆ ಅಭಿಷೇಕ್​ ಅಂಬರೀಶ್ ಅವರು ತಮ್ಮ ಬಹುಕಾಲದ ಗೆಳತಿ, ಫ್ಯಾಷನ್ ಡಿಸೈನರ್​ ಅವಿವಾ ಬಿದ್ದಪ್ಪ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಕುಟುಂಬಸ್ಥರು, ಆಪ್ತರ, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಪ್ರೀತಿಸಿದ ಜೋಡಿ ದಾಂಪತ್ಯ ಜೀವನ ಆರಂಭಿಸಿದರು. ಈ ಪ್ರೇಮಪಕ್ಷಿಗಳೂ ಶೀಘ್ರದಲ್ಲೇ ತಂದೆ ತಾಯಿ ಆಗಲಿದ್ದಾರೆ.

ಎರಡು ದಿನಗಳ ಹಿಂದೆ ಜೆಪಿ ನಗರದಲ್ಲಿರುವ ನಿವಾಸದಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಅವರ ಸೀಮಂತ ಶಾಸ್ತ್ರ ಜರುಗಿತು. ಅವಿವಾ ಅವರೀಗ ಏಳು ತಿಂಗಳ ಗರ್ಭಿಣಿ. ಫೋಟೋಗಳನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಭಿಷೇಕ್ ಅಂಬರೀಶ್​​ - ಅವಿವಾ ಬಿದ್ದಪ್ಪ ಕುಟುಂಬ (ETV Bharat)

ಇದನ್ನೂ ಓದಿ:ದರ್ಶನ್​ ಭೇಟಿಗಾಗಿ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ, ನಟ ಧನ್ವೀರ್ - Actor Dhanveer Meets Darshan

ಹಿರಿ ಮಗನಿಲ್ಲದೇ ನಡೆದ ಅಂಬಿ ಸೊಸೆ ಸೀಮಂತ: ದರ್ಶನ್ ಅನುಪಸ್ಥಿತಿಯಲ್ಲಿ ಸರಳವಾಗಿ ಸೀಮಂತ ನಡೆಯಿತು. ನಟ ದರ್ಶನ್ ಮತ್ತು ಅಂಬಿ ಕುಟುಂಬ ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದೆ. ಪರಸ್ಪರರು ಪ್ರತೀ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಬಿ ನಿಧನದ ನಂತರವೂ ದರ್ಶನ್​​ ಅವರು ಸುಮಲತಾ ಅಂಬರೀಶ್​ ಮತ್ತು ಅಭಿಷೇಕ್​ ಅಂಬರೀಶ್​ ಅವರಿಗೆ ತಮ್ಮ ಬೆಂಬಲ ಕೊಡುತ್ತಲೇ ಬಂದಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್​​​ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ - Darshan Judicial Custody Extended

ABOUT THE AUTHOR

...view details