ಐಶ್ವರ್ಯಾ ರೈ ಬಚ್ಚನ್ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ನಿರಂತರ ವದಂತಿಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಮುಂಬೈನ ಬಾಂದ್ರಾದಲ್ಲಿ ರೂಮರ್ ಲವ್ಬರ್ಡ್ಸ್ ಅಗಸ್ತ್ಯ ನಂದಾ - ಸುಹಾನಾ ಖಾನ್ ಜೊತೆ ಕಾಣಿಸಿಕೊಂಡಿದ್ದಾರೆ. ಸಹೋದರಿಯ ಪುತ್ರಿ ನವ್ಯಾ ನವೇಲಿ ನಂದಾ ಕೂಡ ಜೊತೆಗಿದ್ದರು. ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋಗಳಲ್ಲಿ ಈ ನಾಲ್ವರು ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಕಾರು ಚಲಾಯಿಸುತ್ತಿದ್ದರೆ, ಅಗಸ್ತ್ಯ ಪಕ್ಕದ ಸೀಟ್ನಲ್ಲಿ ಕುಳಿತಿದ್ದರು. ಹಿಂಬಂದಿಯಲ್ಲಿ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಖಾನ್ ಅವರನ್ನು ಕಾಣಬಹುದು.
ಸೂಪರ್ ಹಿಟ್ ಧೂಮ್ ಖ್ಯಾತಿಯ ಅಭಿಷೇಕ್ ಬಚ್ಚನ್ ಕ್ಯಾಶುಯಲ್ ವೇರ್ನಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳ ನಡುವೆ ಹಾದು ಹೋದ ಅಭಿಷೇಕ್ ಬ್ಲ್ಯಾಕ್ ಸ್ವೆಟ್‌ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಕಾರು ಓಡಿಸುತ್ತಿದ್ದರೆ, ಪಕ್ಕದ ಪ್ರಯಾಣಿಕರ ಸೀಟ್ನಲ್ಲಿ ಅಗಸ್ತ್ಯಾ ಕುಳಿತಿದ್ದರು. ಹಿಂಬಂದಿ ನಟಿ ಸುಹಾನಾ ಇದ್ದರು. ಅಗಸ್ತ್ಯಾ ಸುಹಾನಾ ಡೇಟಿಂಗ್ ವಿಚಾರ ಕೆಲ ಸಮಯದಿಂದ ಸದ್ದು ಮಾಡುತ್ತಿದೆ. ಕ್ಯಾಮರಾಗಳನ್ನು ಕಂಡ ಅಗಸ್ತ್ಯ ಕ್ಯಾಶುವಲ್ ಆಗಿ ಸ್ಮೈಲ್ ಕೊಟ್ಟರೆ, ಸುಹಾನಾ ಕೊಂಚ ನಾಚಿದಂತೆ ತೋರುತ್ತಿದೆ. ಸುಹಾನಾ ಜೊತೆ ನವ್ಯಾ ಕೂಡ ಕುಳಿತಿದ್ದರು. ಅಗಸ್ತ್ಯ ಮತ್ತು ನವ್ಯಾ, ಅಭಿಷೇಕ್ ಸಹೋದರಿ ಶ್ವೇತಾ ಬಚ್ಚನ್ ನಂದಾ ಅವರ ಮಕ್ಕಳು.
ಅಭಿಷೇಕ್ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೆಜ್ಜೆ ಇಡುತ್ತಿದ್ದಾರೆ. ವದಂತಿಗಳೆಷ್ಟೇ ಬಂದರೂ ಪ್ರತಿಕ್ರಿಯೆ ಕೊಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಇನ್ನೂ ಸುಹಾನಾ ನಟನೆಯ ಮುಂದಿನ ಚಿತ್ರ 'ಕಿಂಗ್'ನಲ್ಲಿ ಅಭಿಷೇಕ್ ಖಳನಾಯಕನ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಸುಹಾನಾರ ತಂದೆ, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ ನಟಿಸಲಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಭಿಷೇಕ್ ಮತ್ತು ಎಸ್‌ಆರ್‌ಕೆ ಅವರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಹಿಂದೆ ಕಭಿ ಅಲ್ವಿದಾ ನಾ ಕೆಹನಾ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಮುಂದಿನ ಚಿತ್ರದ ಮೇಲೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಇನ್ನೂ, ಅಗಸ್ತ್ಯ ಮತ್ತು ಸುಹಾನಾ, ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ವೃತ್ತಿಜೀವನ ಆರಂಭಿಸಿದ್ದಾರೆ. ಈ ಚಿತ್ರ ಕಳೆದ ವರ್ಷ ನವೆಂಬರ್ನಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.