ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಈಗಾಗಲೇ 70 ದಿನಗಳನ್ನು ಪೂರೈಸಿದೆ. 11ನೇ ವಾರ ಸಾಗಿದ್ದು, ಆಟದ ಮಜಲುಗಳು ಬದಲಾಗಿವೆ. ಸ್ಪರ್ಧಿಗಳ ನಡುವಿನ ಮನಸ್ತಾಪ, ವಾದ-ವಿವಾದಗಳು, ಗಲಾಟೆ ಕೊಂಚ ಹೆಚ್ಚೇ ಎನ್ನಬಹುದು. ಇಂದಿನ ಸಂಚಿಕೆಯಲ್ಲೂ ಸ್ಪರ್ಧಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅದರ ಒಂದು ನೋಟ ಪ್ರೋಮೋದಲ್ಲಿ ಸಿಕ್ಕಿದೆ.
''ಮನೆಗೆ ಬಂದ ಗೆಸ್ಟ್ಸ್ ಎದುರು ಮಕ್ಕಳಾಟ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಬಿಗ್ ಬಾಸ್ ಪ್ರೋಮೋ ಅನಾವರಣಗೊಳಿಸಿದ್ದಾರೆ. ಧನರಾಜ್ ಆಚಾರ್ ಮತ್ತು ರಜತ್ ಕಿಶನ್ ನಡುವಿನ ಗಲಾಟೆಯನ್ನು ಇಲ್ಲಿ ಕಾಣಬಹುದು. ಕೈ ಕೈ ಮಿಲಾಯಿಸಿಕೊಂಡಿದ್ದು ಗಂಭೀರ ಸ್ವರೂಪ ಪಡೆಯಿತೇ? ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಹೊರಕಳುಹಿಸಲಾಯಿತೇ? ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರಿಗೆ ಕುತೂಹಲವಿದೆ. ಸಂಪೂರ್ಣ ಸಂಚಿಕೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.
ಬಿಗ್ ಬಾಸ್ 50 ದಿನಗಳನ್ನು ಪೂರ್ಣಗೊಳಿಸಿದ್ದ ಸಂದರ್ಭದಲ್ಲಿ ವೈಲ್ಡ್ ಸ್ಪರ್ಧಿಯಾಗಿ ರಜತ್ ಕಿಶನ್ ಮನೆ ಪ್ರವೇಶಿಸಿದ್ದರು. ಎಂಟ್ರಿ ಕೊಟ್ಟ ದಿನದಿಂದಲೂ ಸಖತ್ ರೆಬೆಲ್ ಆಗೇ ಟಾಸ್ಕ್ ಆಡಿದ್ದಾರೆ. ದನಿ ಏರಿಸೋ ಮೂಲಕ ಹೆಚ್ಚಿನವರ ಗಮನ ಸೆಳೆದಿದ್ದಾರೆ. ಇದೀಗ ಧನರಾಜ್ ಆಚಾರ್ ಜೊತೆ ವಾದಕ್ಕಿಳಿದಿದ್ದಾರೆ.
ಕಾರ್ತಿಕ್, ನಮ್ರತಾ ಎಂಟ್ರಿಯಿಂದ ನಾಮಿನೇಷನ್ ಕಿಚ್ಚು ಇನ್ನೂ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ದನಿಯುಳ್ಳ ಬಿಗ್ ಬಾಸ್ ಪ್ರೊಮೋದಲ್ಲಿ ಧನರಾಜ್ ಆಚಾರ್ ಅವರು ರಜತ್ ಅವರನ್ನು ನಾಮಿನೇಷನ್ ಮಾಡಿರೋದನ್ನು ಕಾಣಬಹುದು. ''ತ್ರಿವಿಕ್ರಮ್ ಅವರು ಹೇಳ್ತಾರೆ ವಿನ್ ಆಗಲು ರಜತ್ ಅವ್ರು ಕಾರಣ ಎಂದು'' ಇದು ಹಿಡಿಸಲಿಲ್ಲ ಎಂದು ತಮ್ಮ ಕಾಣಗಳನ್ನು ಕೊಟ್ಟಿದ್ದಾರೆ. ಯಾರೋ ಕೊಟ್ಟ ರೀಸನ್ಗೆ ನನನ್ನು ನಾಮಿನೇಟ್ ಮಾಡೋದು ಎಷ್ಟು? ಸರಿ ಎಂದು ರಜತ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.