ಕರ್ನಾಟಕ

karnataka

ETV Bharat / education-and-career

ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರಿಗೆ ಭರ್ಜರಿ ಉದ್ಯೋಗಾವಕಾಶ - Chikkaballapur WCD Recruitment - CHIKKABALLAPUR WCD RECRUITMENT

ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್​ 19 ಆಗಿದೆ.

Chikkaballapur WCD Recruitment for  anganwadi workers and helper
ಉದ್ಯೋಗ ಮಾಹಿತಿ (ಈಟಿವಿ ಭಾರತ್​​)

By ETV Bharat Karnataka Team

Published : Sep 17, 2024, 5:22 PM IST

ಬೆಂಗಳೂರು: ಚಿಕ್ಕಬಳ್ಳಾಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 6ನೇ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 285 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆ ವಿವರ:

  • ಅಂಗನವಾಡಿ ಕಾರ್ಯಕರ್ತರು - 54
  • ಮಿನಿ ಅಂಗನವಾಡಿ ಕಾರ್ಯಕರ್ತೆಯರು - 14
  • ಅಂಗನವಾಡಿ ಸಹಾಯಕಿರು - 217

ಯಾವ ತಾಲೂಕಿನಲ್ಲಿ ಎಷ್ಟು ಎಷ್ಟು ಹುದ್ದೆ

  • ಬಾಗೇಪಲ್ಲಿ: ಅಂಗನಾಡಿ ಕಾರ್ಯಕರ್ತೆಯರು - 8, ಮಿನಿ ಕಾರ್ಯಕರ್ತೆಯರು - 3, ಸಹಾಯಕಿಯರು - 24
  • ಚಿಕ್ಕಬಳ್ಳಾಪುರ ತಾಲೂಕು: ಕಾರ್ಯಕರ್ತೆಯರು - 8, ಮಿನಿ ಕಾರ್ಯಕರ್ತೆಯರು - 2, ಸಹಾಯಕಿಯರು - 43.
  • ಚಿಂತಾಮಣಿ ತಾಲೂಕು: ಕಾರ್ಯಕರ್ತೆಯರು - 11, ಮಿನಿ ಕಾರ್ಯಕರ್ತೆಯರು- 22, ಸಹಾಯಕಿಯರು - 2.
  • ಗುಡಿಬಂಡೆ ತಾಲೂಕು: ಕಾರ್ಯಕರ್ತೆಯರು - 2, ಸಹಾಯಕಿಯರು - 12,
  • ಶಿಡ್ಲಘಟ್ಟ ತಾಲೂಕು: ಕಾರ್ಯಕರ್ತೆಯರು - 3, ಮಿನಿ ಕಾರ್ಯಕರ್ತೆಯರು - 1, ಸಹಾಯಕಿಯರು 39.

ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿರಬೇಕು.

ಅಂಗನಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ:ಅಭ್ಯರ್ಥಿಗಳು ಕನಿಷ್ಠ 19 ರಿಂದ 35 ವರ್ಷದ ವಯೋಮಿತಿ ಹೊಂದಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಅಧಿಸೂಚನೆ ಪರಿಶೀಲಿಸಿ ಆನ್​ಲೈನ್​ ಮೂಲಕ ಅರ್ಜಿ ಭರ್ತಿಗೆ ಮುಂದಾಗುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಅಕ್ಟೋಬರ್​ 19 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು.

ಅಭ್ಯರ್ಥಿಗಳು ಈ ಜಾಲತಾಣದ http://karnemakaone.kar.nic.in/abcd/ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: RDSWDಯಲ್ಲಿ ಪದವೀಧರರಿಗೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

ABOUT THE AUTHOR

...view details