ಹೈದರಾಬಾದ್: ಜೀ ಎಂಟರ್ಟೈನ್ಮೆಂಟ್- ಸೋನಿ ನಡುವಿನ ವಿಲೀನ ಒಪ್ಪಂದದ ಕುರಿತಾದ ತುರ್ತು ಮಧ್ಯಸ್ಥಿಕೆ ವಿಚಾರಣೆಯು ನಾಳೆ(ಜನವರಿ 31) ಸಿಂಗಪೂರ್ನಲ್ಲಿ ನಡೆಯಲಿದೆ ಎಂದು ಸಿಎನ್ಬಿಸಿ-ಟಿವಿ 18 ವರದಿ ಮಾಡಿದೆ.
ಸೋನಿ ಪಿಕ್ಚರ್ ನೆಟ್ವರ್ಕ್ ಇಂಡಿಯಾ (ಎಸ್ಪಿಎನ್ಐ) ಮಾತೃ ಸಂಸ್ಥೆ ಜಪಾನಿನ ಸೋನಿ ಗ್ರೂಪ್ ಕಾರ್ಪೊರೇಷನ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ (ಬಿಇಪಿಎಲ್) ಆದ ಜೀಯೊಂದಿಗಿನ 10 ಬಿಲಿಯನ್ ಡಾಲರ್ ವಿಲೀನ ಒಪ್ಪಂದವನ್ನು ರದ್ದು ಮಾಡಿತು. ಅಲ್ಲದೇ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 90 ಮಿಲಿಯನ್ ಡಾಲರ್ ಅನ್ನು ಪರಿಹಾರ ಮೊತ್ತವನ್ನು ಕೇಳಿದೆ.
ಸಿಂಗಾಪೂರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್ಐಎಸಿ)ಯು ಏಷ್ಯಾದ ಮೊದಲ ಮಧ್ಯಸ್ಥಿಕೆ ಸಂಸ್ಥೆಯಾಗಿದೆ. ಇದು 2010ರಿಂದ ತುರ್ತು ಮಧ್ಯಸ್ಥಗಾರರ ನೇಮಕ ಮಾಡಿದಾಗಿನಿಂದ 130 ಅರ್ಜಿಗಳನ್ನು ಸ್ವೀಕರಿಸಿದೆ. ಒಂದು ವೇಳೆ ಈ ತುರ್ತು ಮಧ್ಯಸ್ಥಿಕೆ ಪರಿಹಾರದ ಅರ್ಜಿ ಸ್ವೀಕಾರವಾದಲ್ಲಿ, ದಿನದೊಳಗೆ ತುರ್ತು ಮಧ್ಯಸ್ಥಗಾರರನ್ನು ನೇಮಕ ಮಾಡಲಾಗುವುದು.
ಮುರಿದು ಬಿದ್ದ ಒಪ್ಪಂದ: ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಜಿಲ್) ಜೊತೆಗೆ ಸೋನಿ ಗ್ರೂಪ್ ಕಾರ್ಪೊರೇಷನ್ 10 ಬಿಲಿಯನ್ ಡಾಲರ್ ವಿಲೀನದ ಒಪ್ಪಂದವನ್ನು ಮುರಿದು ಹಾಕಿತು. ವಿಲೀನ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ 90 ಮಿಲಿಯನ್ ಡಾಲರ್ ಬ್ರೇಕ್ಅಪ್ ಶುಲ್ಕವೂ ಸೋನಿ ಬಯಸಿದೆ. ಆದರೆ ಇದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಜೀ ಹೇಳಿದೆ.