ಕರ್ನಾಟಕ

karnataka

ETV Bharat / business

AI ಗ್ರಾಹಕರಿಗೆ ವರವೋ, ಶಾಪವೋ? ಡಿಜಿಟಲ್​ ಫ್ಲಾಟ್​ಫಾರ್ಮ್‌ಗಳಲ್ಲಿ ಹಕ್ಕುಗಳ ರಕ್ಷಣೆ ಹೇಗೆ? - Artificial Intelligence

ಎಐ (ಕೃತಕ ಬುದ್ಧಿಮತ್ತೆ) ಜಗತ್ತಿನಲ್ಲಿ ಸುಲಭವಾಗಿ ಗ್ರಾಹಕರನ್ನು ಸೆಳೆದು ವಂಚಿಸಬಹುದು. ಈ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಹಕ್ಕಿನ ಕುರಿತು ಅರಿವು ಹೊಂದುವುದು ಅಗತ್ಯ.

By ETV Bharat Karnataka Team

Published : Mar 25, 2024, 2:05 PM IST

world-consumer-rights-day-is-artificial-intelligence-a-blessing-or-a-curse-for-the-consumer
world-consumer-rights-day-is-artificial-intelligence-a-blessing-or-a-curse-for-the-consumer

ಅಹಮದಬಾದ್​: ಗ್ರಾಹಕರ ಹಕ್ಕಿನ ಉಲ್ಲಂಘನೆಯನ್ನು ತಡೆದು, ಜಾಗೃತಿ ಮೂಡಿಸುವ ಉದ್ದೇಶದಿಂದ ಮಾರ್ಚ್​ 15ರಂದು ವಿಶ್ವ ಗ್ರಾಹಕ ಹಕ್ಕಿನ ದಿನವಾಗಿ ಆಚರಿಸಲಾಗುತ್ತದೆ. ಆದಾಗ್ಯೂ ಭಾರತದಲ್ಲಿನ ಗ್ರಾಹಕರು ಈ ತಮ್ಮ ಹಕ್ಕಿನ ಬಗ್ಗೆ ಹೆಚ್ಚಿನ ಅರಿವು ಹೊಂದಿಲ್ಲ. ಅದರಲ್ಲೂ ವಿಶೇಷವಾಗಿ ಇ-ಕಾಮರ್ಸ್​ ಮತ್ತು ಡಿಜಿಟಲ್​ ಫ್ಲಾಟ್​ಫಾರ್ಮ್​ಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ. ಅಷ್ಟೇ ಅಲ್ಲದೇ, ಉತ್ಪನ್ನಗಳ ಕುರಿತ ಪ್ರಚೋದನೆ ಮತ್ತು ಆಮಿಷವೊಡ್ಡುವ ಕೆಲವು ಜಾಹೀರಾತುಗಳು ಕೂಡ ಕೆಲವು ಉತ್ಪನ್ನಗಳ ಬಗ್ಗೆ ತಪ್ಪುದಾರಿಗೆ ಎಳೆಯುತ್ತವೆ. ಈ ನಿಟ್ಟಿನಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯಡಿ ತಮ್ಮ ಹಕ್ಕಿನ ಕುರಿತು ತಿಳಿಯುವುದು ಅವಶ್ಯ.

ಗ್ರಾಹಕರ ಮೇಲಿನ ಎಐ ಪರಿಣಾಮ:ಪ್ರತೀ ಬಾರಿ ಗ್ರಾಹಕರ ಹಕ್ಕಿನ ದಿನವನ್ನು ವಿಭಿನ್ನ ಧ್ಯೇಯದಡಿ ಆಚರಿಸಲಾಗುತ್ತದೆ. ಗ್ರಾಹಕರ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವು ಗ್ರಾಹಕರಿಗೆ ಹಕ್ಕಿನ ಕುರಿತು ಜಾಗೃತಿ ಮಾಡಿಸುತ್ತದೆ. ಈ ವರ್ಷ ವಿಶ್ವ ಗ್ರಾಹಕ ಸಬಲೀಕರಣ ದಿನವನ್ನು ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (Fair and Responsible Artificial Intelligence for Consumers) ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ನಮ್ಮ ಮುಂದಿನ ಕಾಲ ಕೃತಕ ಬುದ್ದಿಮತ್ತೆಯಾದ್ದಾಗಿದೆ. ಈ ಎಐ ನಮಗೆ ವರವೂ ಮತ್ತು ಶಾಪವೂ ಆಗಲಿದೆ ಎಂದು ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಚೀಫ್​ ಜನರಲ್​ ಮ್ಯಾನೇಜರ್​ ಆನಿಂದಿತಾ ಮೆಹ್ತಾ ತಿಳಿಸಿದ್ದಾರೆ.

ಎಐ ಮೇಲೆ ಸರ್ಕಾರಕ್ಕಿ ಹಿಡಿತ:ಉದ್ಯಮಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಎಐ ಬಳಕೆ ಮಾಡಿ ಗ್ರಾಹಕರನ್ನು ಮೋಸ ಮಾಡಬಹುದಾಗಿದ್ದು, ಎಐ ಗ್ರಾಹಕರ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ. ಇ-ಕಾಮರ್ಸ್​​ ಮತ್ತು ಆನ್​ಲೈನ್​ ಫ್ಲಾಟ್​ಫಾರ್ಮ್​​ನಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳು ನಿಖರವಾಗಿರುವುದಿಲ್ಲ. ಕೆಲವು ವೇಳೆ ಗ್ರಾಹಕರ ಖಾಸಗಿತನವೂ ಎಐನಿಂದ ಅಪಾಯವನ್ನು ಎದುರಿಸುತ್ತದೆ. ಎಐ ನಿರ್ಮಿತ ಫೀಟೋಗಳು, ಪೈಟಿಂಗ್​, ಸಂಗೀತ, ವಿಡಿಯೋ ಮತ್ತು ಅಡಿಯೋಗಳನ್ನು ಗ್ರಾಹಕರನ್ನು ಆಕರ್ಷಿಸಲು ಜಾಹೀರಾತಿನಲ್ಲಿ ಬಳಕೆ ಮಾಡಿ, ಗ್ರಾಹಕರ ಮೋಸ ಮಾಡಬಹುದು.

ಎಐ ತಪ್ಪಾದ ವಿಡಿಯೋವನ್ನು ಕೂಡ ಅಭಿವೃದ್ಧಿ ಮಾಡುತ್ತದೆ. ಬಹುತೇಕ ಎಐಗಳು ಮೈಕ್ರೋಸಾಫ್ಟ್​​, ಗೂಗಲ್​ ಮತ್ತು ಮೆಟಾದ ನಿಯಂತ್ರಣದಲ್ಲಿದೆ. ಎಐ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತವಿಲ್ಲ. ಆದರೆ ಜಗತ್ತಿನೆಲ್ಲೆಡೆಯ ಕಂಪ್ಯೂಟಿಂಗ್​ ಕಂಪನಿಗಳು ಈ ತಂತ್ರಜ್ಞಾನವನ್ನು ನಿಯಂತ್ರಿಸುತ್ತದೆ. ಮಾಧ್ಯಮ, ಆರೋಗ್ಯ ಸೇವೆ, ಉತ್ಪಾದನೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳ ಉದ್ಯೋಗದ ಮೇಲೆ ಕೂಡ ಇದು ಪರಿಣಾಮವನ್ನು ಹೊಂದಿದೆ. ಗ್ರಾಹಕರಲ್ಲಿ ಈ ಎಐ ಬಳಕೆ ಬಗ್ಗೆ ಅತೀ ಕಡಿಮೆ ಮಾಹಿತಿ ಇದೆ. ಇತ್ತೀಚಿನ ದಿನದಲ್ಲಿ ಎಐ ಬಳಕೆ ಮಾಡಿ ನಡೆಸುತ್ತಿರುವ ವಂಚನೆಗಳು ಕೂಡ ಹೆಚ್ಚುತ್ತಿದೆ.

ಹೊಸ ಗ್ರಾಹಕ ರಕ್ಷಣಾ ಕಾಯ್ದೆ- 2019ರಲ್ಲಿ ಗ್ರಾಹಕರಿಗೆ ಹಕ್ಕಿದ್ಯಾ?:ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್​ ಎಫ್​ ಕೆನಾಡಿ 1962ರಲ್ಲಿ ವಿಶ್ವ ಗ್ರಾಹಕ ಸಬಲೀಕರಣ ದಿನವನ್ನು ಆಚರಿಸಲು ಆರಂಭಿಸಿದರು. 1983ರಲ್ಲಿ ವಿಶ್ವಸಂಸ್ಥೆ ಇದನ್ನು ವಿಶ್ವ ಗ್ರಾಹಕ ಹಕ್ಕು ದಿನವಾಗಿ ಆಚರಿಸಲು ನಿರ್ಧರಿಸಿತು. ಸರ್ಕಾರ ಗ್ರಾಹಕರ ಸಬಲೀಕರಣಕ್ಕೆ ಹೊಸ ಗ್ರಾಹಕ ರಕ್ಷಣೆ ಕಾಯ್ದೆ 2019 ಅನ್ನು ಅನುಮೋದಿಸಿತು.

ಇದರಿಂದಾಗಿ ಗ್ರಾಹಕರು ದೂರು ದಾಖಲಿಸುವುದು ಕೂಡ ಸುಲಭವಾಗಿದೆ. ಈ ಹಿಂದೆ ದೂರು ದಾಖಲಿಸಲು ತಾವು ಉತ್ಪನ್ನಕೊಂಡ ನಗರದ ಗ್ರಾಹಕರ ವೇದಿಕೆಗೆ ಹೋಗಬೇಕಿತ್ತು. ಆದರೆ, ಇದೀಗ ಹೊಸ ಕಾನೂನು ಪ್ರಕಾರ, ಗ್ರಾಹಕರು ಭಾರತದ ಯಾವ ಮೂಲೆಯಿಂದಲೂ ದೂರು ಸಲ್ಲಿಸಬಹುದು.

ಆನ್​ಲೈನ್​ನಲ್ಲೂ ದಾಖಲಿಸಬಹುದು ದೂರು:ಗ್ರಾಹಕರ ಅನುಕೂಲಕ್ಕಾಗಿ ಆನ್​ಲೈನ್​ನಲ್ಲಿ ದೂರು ದಾಖಲಿಸಲು ಇ ಫೈಲಿಂಗ್​ ಫೋರ್ಟಲ್​ನಲ್ಲಿ ಅವಕಾಶ ನೀಡಲಾಗಿದೆ. ಮಾರ್ಕೆಟ್​ನಲ್ಲಿ ಅಸುರಕ್ಷಿತ ಉತ್ಪನ್ನಗಳನ್ನು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಹಿಂಪಡೆಯಬಹುದು. ಪ್ರಾಧಿಕಾರ ಅಸುರಕ್ಷಿತ ಉತ್ಪನ್ನಗಳ ಮಾರಾಟ ಮತ್ತು ಆಮಿಷದ ಜಾಹೀರಾತು ನೀಡಿದ್ದಕ್ಕೆ ದಂಡ ವಿಧಿಸಬಹುದು. ಗ್ರಾಹಕ ನ್ಯಾಯದಲ್ಲಿ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಇದನ್ನೂ ಓದಿ: ಸರಿಯಾದ ವಿಮಾ​ ಏಜೆಂಟ್ ಹುಡುಕುವುದು ಕಷ್ಟವೇ?: ಹಾಗಾದ್ರೆ ನಿಮಗಾಗಿ ಇಲ್ಲಿವೆ ಕೆಲ ಸಲಹೆಗಳು

ABOUT THE AUTHOR

...view details