ETV Bharat / business

ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ಬಡ್ಡಿದರ ಯಥಾಸ್ಥಿತಿ ಸಾಧ್ಯತೆ - RBI MPC Meeting - RBI MPC MEETING

ಆರ್​ಬಿಐನ ಎಂಪಿಸಿ ಸಭೆ ಆರಂಭವಾಗಿದೆ.

ಆರ್​ಬಿಐ
ಆರ್​ಬಿಐ (IANS)
author img

By ETV Bharat Karnataka Team

Published : Oct 7, 2024, 4:39 PM IST

ನವದೆಹಲಿ: ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದ ಹಣಕಾಸು ನೀತಿ ಸಮಿತಿ ಸಭೆ (ಎಂಪಿಸಿ) ಆರಂಭವಾಗಿದ್ದು, ಈ ಬಾರಿಯೂ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಸಾಧ್ಯತೆಗಳಿವೆ ಎಂದು ಹಣಕಾಸು ತಜ್ಞರು ಸೋಮವಾರ ಹೇಳಿದ್ದಾರೆ.

ಅ.9ರಂದು ಆರ್‌ಬಿಐ ನಿರ್ಧಾರ ಪ್ರಕಟ: ಆರು ಸದಸ್ಯರ ಸಮಿತಿಯ ಸಭೆಯಲ್ಲಿ ಇಂದು ಬಡ್ಡಿದರಗಳ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಲಾಯಿತು. ಆರ್​ಬಿಐ ಗವರ್ನರ್ ಅಕ್ಟೋಬರ್ 9ರಂದು ಎಂಪಿಸಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಹಣದುಬ್ಬರ ಹೆಚ್ಚಳ ಆತಂಕ: "ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅಸ್ಥಿರತೆ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಕಚ್ಚಾ ತೈಲ ಬೆಲೆಗಳ ಮೇಲಿನ ಪರಿಣಾಮದಿಂದ ಹಣದುಬ್ಬರ ಹೆಚ್ಚಾಗುವ ಆತಂಕ ಉಂಟಾಗಿದೆ" ಎಂದು ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಹೇಳಿದರು.

"ಹೆಚ್ಚಿನ ಬಡ್ಡಿದರಗಳ ಹೊರತಾಗಿಯೂ, ಭಾರತದ ಆರ್ಥಿಕ ಬೆಳವಣಿಗೆಯು ಚೇತರಿಸಿಕೊಂಡಿದೆ. ಮನೆ ಮಾರಾಟದಂತಹ ಬಳಕೆಯ ಸೂಚಕಗಳು ದೃಢವಾದ ಆವೇಗವನ್ನು ಕಾಯ್ದುಕೊಂಡಿವೆ. ಈ ಸುಸ್ಥಿರ ಬೆಳವಣಿಗೆಯು ರೆಪೊ ದರವನ್ನು ಅಸ್ತಿತ್ವದಲ್ಲಿರುವ ಶೇಕಡಾ 6.5 ರ ಮಟ್ಟದಲ್ಲಿರಿಸಲು ಆರ್​ಬಿಐಗೆ ಸಾಕಷ್ಟು ಅನುಕೂಲಕರವಾಗಿದೆ" ಎಂದು ಬೈಜಾಲ್ ತಿಳಿಸಿದರು.

ಭಾರತದಲ್ಲಿ ಮನೆ ಖರೀದಿಸುವ ಬಹುತೇಕರು ಗೃಹ ಸಾಲದ ಮೂಲಕವೇ ಖರೀದಿ ಮಾಡುವುದರಿಂದ ಬಡ್ಡಿದರ ಕಡಿತವು ಗ್ರಾಹಕರಿಗೆ ಅನುಕೂಲವಾಗಬಹುದು ಎನ್ನುತ್ತಾರೆ ಅನಾರಾಕ್ ಗ್ರೂಪ್​ನ ಅಧ್ಯಕ್ಷ ಅನುಜ್ ಪುರಿ.

ರೆಪೊ ದರ ಯಥಾಸ್ಥಿತಿ ಸಾಧ್ಯತೆ: ಹೆಚ್ಚುವರಿಯಾಗಿ, ಸಾಲದ ಬೆಳವಣಿಗೆಯು ಠೇವಣಿ ಬೆಳವಣಿಗೆಯನ್ನು ಮೀರಿಸಿದ್ದು, ಈ ಸಾಲ ಮತ್ತು ಠೇವಣಿ ಬೆಳವಣಿಗೆಯ ನಡುವಿನ ಅಸಮತೋಲನದ ಕಾರಣದಿಂದ ರೆಪೊ ದರಗಳನ್ನು ಬಿಗಿಯಾಗಿಯೇ ಇಡಲು ಕಾರಣವಾಗಬಹುದು. ಹೀಗಾಗಿ ಮತ್ತಷ್ಟು ಅವಧಿಗೆ ರೆಪೊ ದರವನ್ನು ಇದೇ ಮಟ್ಟದಲ್ಲಿ ಮುಂದುವರಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

Big Picture: ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ನೋಡುವುದಾದರೆ- ರೆಪೊ ದರ ಕಡಿತದಿಂದ ಗೃಹ ಸಾಲಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗಲಿವೆ. ಇದರಿಂದ ಇಎಂಐ ಮೊತ್ತ ಕೂಡ ಕಡಿಮೆಯಾಗಬಹುದು. ಇತ್ತೀಚಿನ ಯುಎಸ್ ಫೆಡ್ ಬಡ್ಡಿದರ ಕಡಿತವು ಆರ್​ಬಿಐಗೆ ಪ್ರೇರಕವಾಗಬಹುದು. ಆದರೆ ಈಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕ ಆರ್ಥಿಕತೆಯು ಸಾಕಷ್ಟು ಅನಿಶ್ಚಿತತೆಯನ್ನು ಎದುರಿಸುತ್ತಿರುವುದು ಕೂಡ ವಾಸ್ತವ. ಹೀಗಾಗಿ ಸದ್ಯಕ್ಕೆ ಬಡ್ಡಿದರ ಕಡಿತಗೊಳಿಸುವುದು ಆರ್​ಬಿಐಗೆ ಹಗ್ಗದ ಮೇಲಿನ ನಡಿಗೆಯಾಗಿದೆ.

ಕಳೆದ ವಾರ, ಸರ್ಕಾರವು ಎಂಪಿಸಿಗೆ ಮೂವರು ಬಾಹ್ಯ ಸದಸ್ಯರನ್ನು ನೇಮಿಸಿದೆ. ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ರಾಮ್ ಸಿಂಗ್; ಅರ್ಥಶಾಸ್ತ್ರಜ್ಞ ಸೌಗತ ಭಟ್ಟಾಚಾರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ನಾಗೇಶ್ ಕುಮಾರ್ ಬಾಹ್ಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಾರ್ಗದರ್ಶಿ ಚಿಟ್​​ ಫಂಡ್​ನ 115ನೇ ಶಾಖೆ ಆರಂಭ - margadarshi chit fund

ETV Bharat Logo

Copyright © 2024 Ushodaya Enterprises Pvt. Ltd., All Rights Reserved.