ಹೈದರಾಬಾದ್: ಶ್ರೀಮಂತರು ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಸಾಮಾನ್ಯ ಜನರು ಮ್ಯೂಚುವಲ್ ಫಂಡ್‌ಗಳು ಮತ್ತು ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳನ್ನು ಇಡುತ್ತಾರೆ. ದುಡಿದು ಸಂಪಾದಿಸಿದ ಹಣವನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಜನಸಾಮಾನ್ಯರು ಸುರಕ್ಷಿತ ಹೂಡಿಕೆಯಲ್ಲಿ ಭಾರಿ ಆಸಕ್ತಿ ತೋರುತ್ತಾರೆ. ಹೌದು ದೇಶದ ಅತ್ಯಂತ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಯಾವ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ ಎಂಬುದನ್ನು ತಿಳಿಯೋದಾದರೆ.,
ಫೋರ್ಬ್ಸ್ ಪ್ರಕಾರ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಈ ಉದ್ಯಮಿಯ ನಿವ್ವಳ ಮೌಲ್ಯ 116.1 ಶತಕೋಟಿ ಡಾಲರ್ ಆಗಿದೆ (ಭಾರತೀಯ ಕರೆನ್ಸಿಯಲ್ಲಿ ಇದರ ಮೊತ್ತ ಸರಿಸುಮಾರು ರೂ. 9,69,600 ಕೋಟಿ ರೂ ಆಗುತ್ತದೆ). ಮುಖೇಶ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ - ಟೆಲಿಕಾಂ, ತೈಲ ಮತ್ತು ಅನಿಲ, ಚಿಲ್ಲರೆ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತದೆ . 66 ವರ್ಷದ ಮುಖೇಶ್ ಐಪಿಎಲ್ನ ಪ್ರಮುಖ ತಂಡ 'ಮುಂಬೈ ಇಂಡಿಯನ್ಸ್' ಮಾಲೀಕರೂ ಕೂಡಾ ಹೌದು. ಮುಂಬೈನ ಅತ್ಯಂತ ದುಬಾರಿ ಕಟ್ಟಡವಾದ ಆಂಟಿಲಿಯಾ ಇವರ ವಾಸದ ಮನೆ.
ಮುಕೇಶ್ ಅಂಬಾನಿ ಹೂಡಿಕೆ: ಅತ್ಯಂತ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಎಲ್ಲಿ ಹೂಡಿಕೆ ಮಾಡುತ್ತಾರೆ ಎಂಬ ಕುತೂಹಲ ಅನೇಕರಿಗೆ ಇರುವುದು ಸಹಜವೇ ಆಗಿದೆ. ಆದರೆ ಅಂಬಾನಿ ನಮ್ಮ ನಿಮ್ಮಂತೆ ಫಿಕ್ಸೆಡ್ ಡೆಪಾಸಿಟ್, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಿಲ್ಲ. ಅವರು ತಾವು ಗಳಿಸಿದ ಹಣವನ್ನು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸುತ್ತಾರೆ. ಈ ಮೂಲಕ ತಮ್ಮ ಸಂಪತ್ತನ್ನು ವೃದ್ಧಿ ಮಾಡಿಕೊಳ್ಳುತ್ತಾರೆ. ಹಾಗೂ ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಾರೆ.