ETV Bharat / state

ಧಾರವಾಡ: ಪಲ್ಟಿಯಾದ ಕ್ಯಾಂಟರ್ ಟಿಟಿ ವಾಹನಕ್ಕೆ ಡಿಕ್ಕಿ; ಮೂವರು ಸಾವು, ಮೂವರಿಗೆ ಗಾಯ - ROAD ACCIDENT

ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ನಿನ್ನೆ ರಾತ್ರಿ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.

DHARWAD  CANTER HITS TT VEHICLE  ಕ್ಯಾಂಟರ್ ಟಿಟಿ ಅಪಘಾತ  ಧಾರವಾಡ
ಧಾರವಾಡ: ಪಲ್ಟಿಯಾದ ಕ್ಯಾಂಟರ್ ಟಿಟಿ ವಾಹನಕ್ಕೆ ಡಿಕ್ಕಿ : ಮೂವರು ಸಾವು, ಮೂವರಿಗೆ ಗಾಯ (ETV Bharat)
author img

By ETV Bharat Karnataka Team

Published : Dec 23, 2024, 12:15 PM IST

ಧಾರವಾಡ: ಕ್ಯಾಂಟರ್​​ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಭಾನುವಾರ ರಾತ್ರಿ ನಡೆದಿದೆ.

ಕ್ಯಾಂಟರ್​​ ವಾಹನದಲ್ಲಿದ್ದ ಹನುಮಂತಪ್ಪ ಮಲ್ಲದ, ಮಹಾಂತೇಶ ಚವ್ಹಾಣ, ಮಹದೇವ ಹುಳೊಳ್ಳಿ ಮೃತರು. ಸಾವನ್ನಪ್ಪಿದವರು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಶಿರಸಂಗಿಯಿಂದ ಗೋವಾಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.

ಕ್ಯಾಂಟರ್​​ ವಾಹನ ಶಿರಸಂಗಿಯಿಂದ ಗೋವಾಗೆ ತೆರಳುತ್ತಿತ್ತು, ಗೋವಾದಿಂದ ಹುಬ್ಬಳ್ಳಿಗೆ ಟಿಟಿ ವಾಹನ ಬರುತ್ತಿತ್ತು. ಕ್ಯಾಂಟರ್​​ ವಾಹನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಪಲ್ಟಿಯಾಗಿ ಟಿಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್​​​ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಓರ್ವನಿಗೆ ಗಾಯಗಳಾಗಿವೆ. ಟಿಟಿ ವಾಹನದಲ್ಲಿನ ಇಬ್ಬರು ಪ್ರಯಾಣಿಕರು ಸಹ ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್​​ಗೆ ರವಾನಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಬಸ್​ಗೆ ಬೈಕ್​​​​ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.