ETV Bharat / state

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಮಗು ದತ್ತು ನೀಡಲು ಇದ್ದ ತೊಡಕು ನಿವಾರಿಸಿದ ಹೈಕೋರ್ಟ್ - HIGH COURT

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮಗು ದತ್ತು ನೀಡಲು ಅಡ್ಡಿಯಿದ್ದ ತೊಡಕುಗಳನ್ನು ಹೈಕೋರ್ಟ್ ನಿವಾರಿಸಿದೆ. ನೋಂದಣಿಗೆ ನಿರಾಕರಿಸಿ ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : 4 hours ago

ಬೆಂಗಳೂರು: ಮಗುವನ್ನು ಪೋಷಣೆ ಮಾಡಲು ಆರ್ಥಿಕವಾಗಿ ಸದೃಢವಾಗಿರದ, ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಸಂತ್ರಸ್ತೆಗೆ ಜನಿಸಿದ ಮಗುವನ್ನು ದತ್ತು ನೀಡಲು ಇದ್ದ ಕಾನೂನು ತೊಡಕುಗಳನ್ನು ಹೈಕೋರ್ಟ್ ನಿವಾರಿಸಿದೆ. ಅಲ್ಲದೆ, ಮಗು ಉಳ್ಳವರ ಮನೆಯನ್ನು ಸೇರಲು ಕೋರ್ಟ್​​ ನೆರವಾಗಿದೆ.

ಜೊತೆಗೆ, ದತ್ತು ನೀಡಲು ಮಗುವಿನ ತಂದೆಗೆ (ಬಯೊಲಾಜಿಕಲ್ ಫಾದರ್) ಒಪ್ಪಿಗೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ದತ್ತುಪತ್ರದ ನೋಂದಣಿಗೆ ನಿರಾಕರಿಸಿ ಉಪನೋಂದಣಾಧಿಕಾರಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶಿಸಿದೆ. ಮಗುವಿನ ತಂದೆಯ ಒಪ್ಪಿಗೆ ಪಡೆಯುವಂತೆ ತಾಯಿ, ಪೋಷಕರಿಗೆ ಸೂಚಿಸದೆ ದತ್ತು ಪತ್ರವನ್ನು ನೋಂದಣಿ ಮಾಡಬೇಕು ಎಂದು ಉಪನೋಂದಣಾಧಿಕಾರಿಗೆ ನಿರ್ದೇಶಿಸಿದೆ.

ನೋಂದಣಿ ನಂತರ ದತ್ತು ಪಡೆದ ದಂಪತಿ ಜಿಲ್ಲಾ ದಂಡಾಧಿಕಾರಿಗೆ ವರದಿ ಸಲ್ಲಿಸಬೇಕು. ಅವರು ಪ್ರಕರಣದ ಕುರಿತ ವರದಿಯನ್ನು ಬಾಲ ನ್ಯಾಯ ಕಾಯ್ದೆ ಸೆಕ್ಷನ್ 66 ಹೇಳುವಂತೆ ಸೆಂಟ್ರಲ್ ಅಡಾಪ್ಶನ್ ರಿಸೋರ್ಸ್ ಅಥಾರಿಟಿಗೆ (ಸಿಎಆರ್‌ಎ) ಸಲ್ಲಿಸಬೇಕು ಎಂದು ಹೈಕೋರ್ಟ್​ ಆದೇಶಿಸಿದೆ.

ಉಪನೋಂದಣಾಧಿಕಾರಿಯ ಹಿಂಬರಹ ರದ್ದತಿಗೆ ಕೋರಿ ಮಗುವಿನ ತಾಯಿ (ಸಂತ್ರಸ್ತೆ) ಹಾಗೂ ದತ್ತು ಪಡೆಯಲು ಬಯಸಿರುವ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಮಗುವಿನ ತಾಯಿ ಮತ್ತು ದತ್ತು ಪಡೆಯಲು ಬಂದಿರುವ ದಂಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಬಾಲ ನ್ಯಾಯ ಕಾಯ್ದೆ 2015ರ ನಿಯಮಗಳು ಅನ್ವಯಿಸುತ್ತವೆ. ಅದರ ಪ್ರಕಾರ, ಮಗುವಿನ ಪೋಷಕರು ದತ್ತು ನೀಡುವ ಹಕ್ಕು ಹೊಂದಿರುತ್ತಾರೆ. ದತ್ತು ನಿಬಂಧನೆಗಳು-2017ರ ನಿಬಂಧನೆ 7(7) ಪ್ರಕಾರ ಅತ್ಯಾಚಾರದಂತಹ ಕೃತ್ಯದಿಂದ ಜನಿಸಿದ ಮಗುವನ್ನು ದತ್ತು ನೀಡಲು ತಾಯಿ ಅಧಿಕಾರ/ಹಕ್ಕು ಹೊಂದಿರುತ್ತಾರೆ. ಅದರಲ್ಲೂ ತಾಯಿ ಅಪ್ರಾಪ್ತೆಯಾಗಿದ್ದರೆ ದತ್ತು ಪತ್ರಕ್ಕೆ ಪ್ರಾಪ್ತ ಸಾಕ್ಷಿಯೊಬ್ಬರು ಸಹಿ ಹಾಕಬೇಕು ಎಂದು ತಿಳಿಸಿದೆ.

ಅಂತಿಮವಾಗಿ, ಸಂತ್ರಸ್ತೆ ಹಾಗೂ ಆಕೆಯ ತಾಯಿ ದತ್ತುಪತ್ರಕ್ಕೆ ಜಂಟಿಯಾಗಿ ಸಹಿ ಹಾಕಿದ್ದಾರೆ. ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 63 ಹೇಳುವಂತೆ ಮಗುವಿನ ಪೋಷಕರು ಹಾಗೂ ದತ್ತು ಪಡೆಯುತ್ತಿರುವ ದಂಪತಿ ನಡುವೆ ಕಾನೂನುಬದ್ಧ ದತ್ತು ಒಪ್ಪಂದ ಏರ್ಪಟ್ಟಿದೆ. ಆದ್ದರಿಂದ ದತ್ತು ಪತ್ರಕ್ಕೆ ಅತ್ಯಾಚಾರ ಆರೋಪಿಯಾದ ಮಗುವಿನ ತಂದೆಯ ಒಪ್ಪಿಗೆ ಮುಖ್ಯವಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅಪ್ರಾಪ್ತೆ (ಸಂತ್ರಸ್ತೆ) ಮೇಲೆ ವ್ಯಕ್ತಿಯೋರ್ವ 2023ರ ನವೆಂಬರ್ 11ರಿಂದ ಜೂನ್​ 6ರ ವರೆಗೆ ಅತ್ಯಾಚಾರವೆಸಗಿದ್ದ. ಪ್ರಕರಣದ ಸಂಬಂಧ 2024ರ ಆಗಸ್ಟ್​​ನಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅತ್ಯಾಚಾರ, ಪೋಕ್ಸೋ ಪ್ರಕರಣದಡಿ ಆರೋಪಿ ಬಂಧನಕ್ಕೊಳಗಾಗಿ ಸದ್ಯ ಜೈಲಿನಲ್ಲಿದ್ದಾನೆ. ಈ ಮಧ್ಯೆ 2024ರ ಸೆಪ್ಟೆಂಬರ್‌ನಲ್ಲಿ ಸಂತ್ರಸ್ತೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಸಂತ್ರಸ್ತೆಯ ಕುಟುಂಬದಲ್ಲಿ ಮೂವರು ಮಹಿಳಾ ಸದಸ್ಯರಿದ್ದು, ಆದಾಯ ಗಳಿಸುವ ಪುರುಷ ಇಲ್ಲ. ಇದರಿಂದ ಮಗುವಿನ ಸಮಗ್ರ ಬೆಳವಣಿಗೆ ಮತ್ತು ಉತ್ತಮ ಆರೈಕೆ ಸಾಧ್ಯವಿಲ್ಲದ ಕಾರಣ ಅದನ್ನು ದತ್ತು ನೀಡಲು ನಿರ್ಧರಿಸಿದ್ದರು. ಮಕ್ಕಳಿಲ್ಲದ ದಂಪತಿಯು ಅದನ್ನು ದತ್ತು ಪಡೆಯಲು ಒಪ್ಪಿದ್ದರು.

ಆದರೆ, ದತ್ತು ಪತ್ರದ ನೋಂದಣಿಗೆ ಕೋರಿ 2024ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು, ತಂದೆಯ ಒಪ್ಪಿಗೆ ಪಡೆಯದ ಕಾರಣ ಅಪೂರ್ಣವಾಗಿದೆ ಎಂದು ಉಪ ನೋಂದಣಾಧಿಕಾರಿ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಬೇಲೇಕೇರಿ ಪ್ರಕರಣ: ಸತೀಶ್ ಸೈಲ್ ಅರ್ಜಿ ಇತ್ಯರ್ಥವಾಗುವ ತನಕ ಕಾರವಾರ ಉಪಚುನಾವಣೆಗೆ ಹೈಕೋರ್ಟ್ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.