ಬೈಕ್ ಕ್ರೇಜ್ ಯಾರಿಗಿರಲ್ಲ ಹೇಳಿ. ಯುವಕರು ಒಂದೊಳ್ಳೆ ಬೈಕ್ ಖರೀದಿ ಮಾಡಬೇಕು ಎಂಬ ಕನಸು ಕಾಣುವುದು ಸಹಜ. ಉತ್ತಮ ಮೈಲೇಜ್ ಮತ್ತು ಸ್ಟೈಲ್ ಕಾಣುವ ಬೈಕ್ಗಳಿಗಾಗಿ ಪರಿತಪಿಸುತ್ತಿರುತ್ತಾರೆ. ಅಂತಹ ವಾಹನ ಪ್ರೇಮಿಗಳಿಗೆ ಇದೊಳ್ಳೆ ಸುದ್ದಿ. ಹೀರೋ, ಬಜಾಜ್, ಯಮಹಾ, ರಾಯಲ್ ಎನ್‌ಫೀಲ್ಡ್‌ನಂತಹ ಅನೇಕ ಆಟೋಮೊಬೈಲ್ ಕಂಪನಿಗಳು ಮುಂದಿನ 12 ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ತಮ್ಮ ಇತ್ತೀಚಿನ ಹೊಸ ಮಾದರಿಯ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿವೆ.
ಇನ್ನು ಕೆಲವೇ ತಿಂಗಳಲ್ಲಿ ಅವುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ. ಹೊಸ ಮಾದರಿಯ, ಸ್ಟೈಲಿಸ್ ಲುಕ್ ಇರುವ ಬೈಕ್ಗಳ ದರ ಎಷ್ಟಿದೆ?, ಅವುಗಳ ಕಾರ್ಯಕ್ಷಮತೆ, ಮೈಲೇಜ್ ಹೇಗಿದೆ? ಎಂಬುದು ಕುರಿತು ಇಲ್ಲಿ ವಿವರಿಸಲಾಗಿದೆ.
1. Suzuki Access 125 Facelift :ಉತ್ತಮ ಬೈಕ್ ತಯಾರಿಸುವ ಆಟೋಮೊಬೈಲ್ ಕಂಪನಿಗಳಲ್ಲಿ ಸುಜುಕಿ ಕೂಡ ಒಂದು. ಅದು ತನ್ನದೇ ಆದ ಸ್ಟೈಲ್ನ ಬೈಕ್ಗಳನ್ನು ತಯಾರಿಸಿದೆ. ಇದೀಗ ಹೊಸ ಮಾದರಿಯಲ್ಲಿ Suzuki Access 125 Facelift ಸ್ಕೂಟಿಯನ್ನು ನವೀಕರಿಸಿ ಪರಿಚಯಿಸುತ್ತಿದೆ. ಅಪ್ಡೇಟ್ ಮಾದರಿಯ ಈ ಸ್ಕೂಟಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. 124 ಸಿಸಿ ಎಂಜಿನ್ ಸಾಮರ್ಥ್ಯ, 45 ಕಿ.ಮೀ ಮೈಲೇಜ್ ಹೊಂದಿದೆ. ಇದು 80 ಸಾವಿರದಿಂದ 90,500 ರೂಪಾಯಿವರೆಗೆ ದರ ಇದೆ.
2. Hero Xoom 125R & Xoom 160 :Hero Motor Corp ಅಧಿಕೃತವಾಗಿ Xoom 125R ಮತ್ತು Xoom 160 ಅಡ್ವೆಂಚರ್ ಸ್ಕೂಟರ್‌ಗಳನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. Xoom 160 ಮಾಡೆಲ್ ಬೈಕ್ 156 cc ಎಂಜಿನ್ ಸಾಮರ್ಥ್ಯ ಹೊಂದಿರಲಿದೆ. ಇದರ ದರ 1.10 ಲಕ್ಷದಿಂದ 1.20 ಲಕ್ಷ ಇರಲಿದೆ.
3. NEW Husqvarna Svartpilen 250 :ಹಸ್ಕ್ವರ್ನಾ ಮೋಟಾರ್ ಕಂಪನಿ ಭಾರತದಲ್ಲಿ 'Svartpilen 250' ಪೇಟೆಂಟ್ ಪಡೆದಿದೆ. ಈ ಮಾದರಿಯು ಈ ವರ್ಷ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕೆಲವು ತಿಂಗಳ ಹಿಂದೆ ಈ ಸ್ವೀಡಿಷ್ ಬ್ರಾಂಡ್, ವಿಟ್ಟಿಲೆನ್ 250 ಮತ್ತು ಸ್ವಾರ್ಟಿಲೆನ್ 401 ಬೈಕ್ಗಳನ್ನು ಭಾರತೀಯರಿಗೆ ಪರಿಚಯಿಸಿತ್ತು. ಇವುಗಳಲ್ಲಿ ಅಳವಡಿಸಲಾಗಿದ್ದ 250 ಸಿಸಿ ಎಂಜಿನ್ ಮುಂಬರುವ ಸ್ವಾರ್ಟ್‌ಲೆನ್ 205 ಬೈಕ್‌ನಲ್ಲಿಯೂ ಇರುವ ಸಾಧ್ಯತೆಯಿದೆ.