ಕರ್ನಾಟಕ

karnataka

ETV Bharat / business

2.2 ಲಕ್ಷ ಕೋಟಿ ನಗರ ವಸತಿಗೆ ಆರ್ಥಿಕ ನೆರವು; ಮಹಿಳೆಯರ ಹೆಸರಿನಲ್ಲಿ ಖರೀದಿಸಿದ ಆಸ್ತಿ ಮೇಲಿನ ತೆರಿಗೆ ಇಳಿಕೆ - Union Budget 2024 Housing - UNION BUDGET 2024 HOUSING

Union Budget 2024 Housing : ದೇಶದ ಬಡ ಮತ್ತು ಮಧ್ಯಮ ವರ್ಗದವರ ನಗರ ವಸತಿಗೆ ಆರ್ಥಿಕ ನೆರವು ನೀಡಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2.2 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದಾರೆ. ಕೇಂದ್ರ ಬಜೆಟ್ ಮಂಡನೆ ವೇಳೆ ಬಡವರ ಸ್ವಂತ ಮನೆ ಕನಸನ್ನು ನನಸಾಗಿಸಲು ಅವರ ಪರ ನಿಲ್ಲುವುದಾಗಿ ಭರವಸೆ ನೀಡಿದರು.

UNION BUDGET 2024  INTEREST SUBSIDY SCHEME  URBAN HOUSING SEGMENT  GOOD NEWS FOR WOMEN
2.2 ಲಕ್ಷ ಕೋಟಿ ನಗರ ವಸತಿಗೆ ಆರ್ಥಿಕ ನೆರವು ಘೋಷಿಸಿದ ಕೇಂದ್ರ (Getty Images, Lok Sabha TV)

By ETV Bharat Karnataka Team

Published : Jul 23, 2024, 1:28 PM IST

Union Budget 2024 Housing:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಐದು ವರ್ಷಗಳಲ್ಲಿ ದೇಶದ ಬಡ ಮತ್ತು ಮಧ್ಯಮ ವರ್ಗದವರ ನಗರ ವಸತಿಗೆ ಆರ್ಥಿಕ ನೆರವು ನೀಡಲು 2.2 ಲಕ್ಷ ಕೋಟಿ ರೂಪಾಯಿಗಳ ಯೋಜನೆ ಘೋಷಿಸಿದ್ದಾರೆ. ಈ ನಿಧಿಗಳ ಮೂಲಕ ನಗರ ಪ್ರದೇಶಗಳಲ್ಲಿ ಮನೆ ಕಟ್ಟಲು ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗುತ್ತದೆ.

ದೇಶದಲ್ಲಿ ಬಾಡಿಗೆ ಮನೆಗಳ ಲಭ್ಯತೆಯನ್ನು ಹೆಚ್ಚಿಸುವುದರ ಜೊತೆಗೆ, ನಾವು ಅವರಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತೇವೆ ಎಂದು ಅವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ವಿಶೇಷ ಯೋಜನೆ ಮೂಲಕ 100 ವಾರಾಂತ್ಯದ ಅಂಗಾಡ್ (ಹಾಟ್ಸ್) ನಿರ್ಮಿಸಲು ಅಗತ್ಯ ಬೆಂಬಲ ನೀಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಸಾಲ ಮಂಜೂರಾತಿ ವ್ಯವಸ್ಥೆಗಳು ಮತ್ತು ಎಂಎಸ್‌ಎಂಇ ಸೇವೆಗಳಂತಹ ಎಲ್ಲಾ 7 ಇಲಾಖೆಗಳಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದರು. ಮಹಿಳೆಯರ ಹೆಸರಿನಲ್ಲಿ ಖರೀದಿಸಿದ ಆಸ್ತಿ ಮೇಲಿನ ತೆರಿಗೆ ಇಳಿಕೆಯಾಗಲಿದೆ ಎಂದು ಸಚಿವರು ವಿವರಿಸಿದರು.

ಓದಿ:ಲೈವ್ಮೋದಿ 3.0 ಸರ್ಕಾರದ ಮೊದಲ ಬಜೆಟ್‌: ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಮೇಲಿನ ಸುಂಕ ಇಳಿಕೆ - Union Budget 2024

ABOUT THE AUTHOR

...view details