TATA's Business Journey:ವಿಶ್ವಾದ್ಯಂತ ಟಾಟಾ ಗ್ರೂಪ್ ಕಂಪನಿ ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ಸುಮಾರು 100 ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದೆ. ಅಲ್ಲದೇ ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ವರದಿಯಲ್ಲಿ ನಾವು ಸುಮಾರು 150 ವರ್ಷಗಳಿಂದ ದೇಶದ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಟಾಟಾ ಕುಟುಂಬ ವೃಕ್ಷದ ಬಗ್ಗೆ ತಿಳಿಯೋಣ. ಜಮ್ಶೆಡ್ಜಿ ಟಾಟಾರಿಂದ ಹಿಡಿದು ರತನ್, ಮಾಯಾ ಟಾಟಾವರೆಗಿನ ಉದ್ಯಮಿಗಳ ಸಾಧನೆಯ ಹಾದಿಯನ್ನೊಮ್ಮೆ ನೋಡೋಣ.
ಜಮ್ಶೆಡ್ಜಿ ಟಾಟಾ:ಜಮ್ಶೆಡ್ಜಿ ಟಾಟಾ ಅವರು ಗುಜರಾತ್ನ ನವಸಾರಿ ಜಿಲ್ಲೆಯಲ್ಲಿ 1839 ರಲ್ಲಿ ಜನಿಸಿದರು. ಅವರಿಗೆ ದೇಶದ ಬಗ್ಗೆ ಅಪಾರ ಪ್ರೀತಿ ಇತ್ತು. ಜಮ್ಶೆಡ್ಜಿ ಟಾಟಾ ಅವರು ತಮ್ಮ ವ್ಯವಹಾರಗಳ ಮೂಲಕ ಕೆಲವರಿಗೆ ಜೀವನೋಪಾಯವನ್ನು ಒದಗಿಸಲು ಬಯಸಿದ್ದರು. 1868ರಲ್ಲಿ, ಮೊದಲ ಹತ್ತಿ ವ್ಯಾಪಾರ ಪ್ರಾರಂಭಿಸಲಾಯಿತು. ಅದರ ನಂತರ, ಐಷಾರಾಮಿ ಹೋಟೆಲ್‌ಗಳು ಮತ್ತು ತಾಜ್ ಹೋಟೆಲ್‌ಗಳನ್ನು ನಿರ್ಮಿಸಲಾಯಿತು. ಜಮ್ಶೆಡ್ಜಿ ಟಾಟಾ ಅವರ ಮರಣದ ನಂತರ, ಅವರ ವ್ಯಾಪಾರದ ಹೊಣೆಗಾರಿಕೆ ಅವರ ಮಗ ದೊರಾಬ್ಜಿ ಟಾಟಾಗೆ ಹಸ್ತಾಂತರಿಸಲಾಯಿತು.
ಜಮ್ಶೆಡ್ಜಿ ಟಾಟಾ ಅವರು ಮಾಡಿದ ಬಿಸಿನೆಸ್ಗಳು- ಹತ್ತಿ, ಉಕ್ಕು, ಜವಳಿ
ದೊರಾಬ್ಜಿ ಟಾಟಾ: ದೊರಾಬ್ಜಿ ಟಾಟಾ ಅವರು 1959ರಲ್ಲಿ ಜನಿಸಿದರು. ಅವರು ತಮ್ಮ ತಂದೆ ಜಮ್ಶೆಡ್ಜಿ ಟಾಟಾ ಅವರ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುಂದುವರಿಸಿದರು. ದೊರಾಬ್ಜಿ ತಮ್ಮ ತಂದೆಯವರ ಬಿಸಿನೆಸ್ನಲ್ಲಿ ಅಪಾರ ಅಭಿವೃದ್ಧಿ ಸಾಧಿಸಲು ಬಯಸಿದ್ದರು, ಬಳಿಕ ಎಲ್ಲವನ್ನೂ ಸಾಧಿಸಿದರೂ ಕೂಡಾ. ಈ ವೇಳೆ ಅವರು ಟಾಟಾ ಗ್ರೂಪ್ ಅನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು. ದೊರಾಬ್ಜಿ ಟಾಟಾ ಅವರು ಕ್ರೀಡೆಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಅದಕ್ಕಾಗಿಯೇ 1924ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಿದ್ದ ಭಾರತ ತಂಡಕ್ಕೆ ಆರ್ಥಿಕ ನೆರವು ನೀಡಿದ್ದರು. ಪತ್ನಿಯ ಮರಣದ ನಂತರ ಅವರು ಟ್ರಸ್ಟ್ ಸ್ಥಾಪಿಸಿದರು. ಟ್ರಸ್ಟ್ನಿಂದ ಜಾತಿ, ಜನಾಂಗ, ಧರ್ಮದ ಭೇದವಿಲ್ಲದೇ ಎಲ್ಲರಿಗೂ ಸಹಾಯ ಮಾಡುತ್ತಿದೆ. ಇದು ಸಂಶೋಧನೆ ಮತ್ತು ವಿಪತ್ತು ತಗ್ಗಿಸುವ ಚಟುವಟಿಕೆಗಳನ್ನು ಸಹ ನಡೆಸುತ್ತದೆ. ಇದನ್ನು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಎಂದು ಕರೆಯಲಾಯಿತು.
ದೊರಾಬ್ಜಿ ಟಾಟಾ ಮಾಡಿದ ಬಿಸಿನೆಸ್ಗಳು- ಟಾಟಾ ಪವರ್, ನ್ಯೂ ಇಂಡಿಯಾ ಅಶ್ಯೂರೆನ್ಸ್ (ಇದನ್ನು ಸರ್ಕಾರ ಈಗ ನಡೆಸುತ್ತಿದೆ)
ರತನ್‌ಜಿ ಟಾಟಾ: ಜಮ್ಶೆಡ್ಜಿ ಟಾಟಾ ಅವರ ಕಿರಿಯ ಮಗ ರತನ್‌ಜಿ ಟಾಟಾ ಕೂಡ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಸಾಕಷ್ಟು ಉಪಕಾರ ಮಾಡುವ ಗುಣ ಹೊಂದಿದ್ದರು. ರತನ್‌ಜಿ ಟಾಟಾ ಅವರು ವಿಪತ್ತು ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು, ಆರೋಗ್ಯ ರಕ್ಷಣೆಗಾಗಿ ಫಂಡ್ ನೀಡಿದ್ದರು. ಉತ್ಖನನಕ್ಕೆ ಪುರಾತತ್ವ ಇಲಾಖೆಗೂ ಹಣ ನೀಡಲಾಗಿತ್ತು. 1916 ರಲ್ಲಿ ಅವರು ತಮ್ಮ ಸಂಪತ್ತಿನ ಗಮನಾರ್ಹ ಭಾಗವನ್ನು ದಾನ ದತ್ತಿ ಕಾರ್ಯಗಳಿಗೆ ನೀಡಿದ್ದರು. ಸರ್ ರತನ್ ಟಾಟಾ ಟ್ರಸ್ಟ್ ಅನ್ನು 1919 ರಲ್ಲಿ ಸ್ಥಾಪಿಸಲಾಗಿತ್ತು. ರತನ್‌ಜಿ ಟಾಟಾ ಅವರ ನಿಧನದ ನಂತರ ಅವರ ಪತ್ನಿ ನವಾಜ್ ಭಾಯ್ ಸೆಟ್ ಕೆಲ ಕಾಲ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.
ನೇವಲ್ ಟಾಟಾ: ನೇವಲ್ ಟಾಟಾ ರತನ್‌ಜಿ ಟಾಟಾ ಅವರ ಮಗ. ಬಿಸಿನೆಸ್ ಕ್ಷೇತ್ರದಲ್ಲೂ ಮಿಂಚಿದ್ದರು. ನೇವಲ್ ಟಾಟಾ ಅವರ ಮಗ ಪ್ರಮುಖ ಉದ್ಯಮಿ ರತನ್ ಟಾಟಾ. ನೇವಲ್ ಟಾಟಾ ಉಕ್ಕು ಮತ್ತು ಟಾಟಾ ಪವರ್ ವ್ಯವಹಾರಗಳನ್ನು ಯಶಸ್ಸಿನತ್ತ ಮುನ್ನಡೆಸಿದ್ದರು.