ಕರ್ನಾಟಕ

karnataka

ETV Bharat / business

ಟಾರಿಫ್ ಹೆಚ್ಚಳದಿಂದ ಟೆಲಿಕಾಂ ಉದ್ಯಮಕ್ಕೆ 20 ಸಾವಿರ ಕೋಟಿ ಹೆಚ್ಚುವರಿ ಲಾಭ ಸಾಧ್ಯತೆ - Mobile Tariff Hike

ಮೊಬೈಲ್ ಟಾರಿಫ್ ಹೆಚ್ಚಳದಿಂದ ಟೆಲಿಕಾಂ ಉದ್ಯಮಕ್ಕೆ 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಬರುವ ನಿರೀಕ್ಷೆಯಿದೆ.

ಟಾರಿಫ್ ಹೆಚ್ಚಳದಿಂದ ಟೆಲಿಕಾಂ ಉದ್ಯಮಕ್ಕೆ 20 ಸಾವಿರ ಕೋಟಿ ಹೆಚ್ಚುವರಿ ಲಾಭ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jun 28, 2024, 5:01 PM IST

ನವದೆಹಲಿ: ಇತ್ತೀಚಿನ ಶೇಕಡಾ 15 ರಿಂದ 20 ರಷ್ಟು ಪ್ರಿಪೇಡ್​ ಮತ್ತು ಪೋಸ್ಟ್​ಪೇಡ್​ ಟಾರಿಫ್​ಗಳ ಹೆಚ್ಚಳದ ನಂತರ ಒಟ್ಟಾರೆಯಾಗಿ ಟೆಲಿಕಾಂ ಉದ್ಯಮವು (ಟೆಲಿಕಾಂ ಸೇವಾ ಪೂರೈಕೆದಾರರು -ಟಿಎಸ್​ಪಿಗಳು) ಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಕಾರ್ಯಾಚರಣೆ ಲಾಭ ಗಳಿಸಲಿವೆ ಎಂದು ಉದ್ಯಮದ ತಜ್ಞರು ಶುಕ್ರವಾರ ಹೇಳಿದ್ದಾರೆ.

ದರ ಏರಿಕೆಯ ನಂತರ ಭಾರ್ತಿ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಅತ್ಯಧಿಕ 'ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ' (ಎಆರ್​ಪಿಯು) ಗಳಿಸುವ ಸಾಧ್ಯತೆಯಿದೆ. ವೊಡಾಫೋನ್ ಐಡಿಯಾ ಈವರೆಗೂ ಮೊಬೈಲ್ ದರ ಹೆಚ್ಚಳ ಮಾಡಿಲ್ಲ.

"ಟಾರಿಫ್​ ಹೆಚ್ಚಳವು ಹೆಚ್ಚಿನ ಲಾಭ ತರಲಿದೆ. ಈ ಮೂಲಕ ಟೆಲಿಕಾಂ ಕಂಪನಿಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ನೆಟ್​ವರ್ಕ್​ ಕವರೇಜ್ ವಿಸ್ತರಿಸಲು ಸಹಾಯಕವಾಗಲಿದೆ" ಎಂದು ಐಸಿಆರ್​ಎ ಕಾರ್ಪೊರೇಟ್ ರೇಟಿಂಗ್​ ವಿಭಾಗದ ಉಪಾಧ್ಯಕ್ಷ ಮತ್ತು ಸೆಕ್ಟರ್ ಮುಖ್ಯಸ್ಥ ಅಂಕಿತ್ ಜೈನ್ ಹೇಳಿದರು.

2025ರ ಹಣಕಾಸು ವರ್ಷದಲ್ಲಿ ಉದ್ಯಮದ ಆದಾಯವು ಶೇಕಡಾ 12 ರಿಂದ 14 ರಷ್ಟು ಬೆಳವಣಿಗೆಯಾಗಬಹುದು ಎಂದು ಐಸಿಆರ್​ಎ ನಿರೀಕ್ಷಿಸಿದೆ. ಇದು ಕಾರ್ಯಾಚರಣೆಯ ಲಾಭವನ್ನು ಶೇಕಡಾ 14 ರಿಂದ 16 ರಷ್ಟು ವಿಸ್ತರಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಟೆಲಿಕಾಂ ಉದ್ಯಮವು 3.2 ರಿಮದ 3.3 ಲಕ್ಷ ಕೋಟಿ ರೂ.ಗಳ ಆದಾಯ ಗಳಿಸುವ ಸಾಧ್ಯತೆಯಿದೆ ಮತ್ತು 2025 ರ ಹಣಕಾಸು ವರ್ಷದಲ್ಲಿ 1.6 ರಿಂದ 1.7 ಲಕ್ಷ ಕೋಟಿ ರೂ.ಗಳ ಕಾರ್ಯಾಚರಣೆ ಲಾಭ ಗಳಿಸುವ ಸಾಧ್ಯತೆಯಿದೆ.

"ಕಾರ್ಯಾಚರಣೆಯ ಲಾಭದಲ್ಲಿನ ಸುಧಾರಣೆಯೊಂದಿಗೆ ಇತ್ತೀಚಿನ ಸ್ಪೆಕ್ಟ್ರಮ್ ಹರಾಜಿನಲ್ಲಿ ಕಡಿಮೆ ಮಟ್ಟದ ಭಾಗವಹಿಸುವಿಕೆ ಮತ್ತು ಕ್ಯಾಪೆಕ್ಸ್ ತೀವ್ರತೆಯಲ್ಲಿ ನಿರೀಕ್ಷಿತ ಮಿತಗೊಳಿಸುವಿಕೆಯೊಂದಿಗೆ ಕಂಪನಿಗಳ ಸಾಲದ ಮಟ್ಟವು ಮಾರ್ಚ್ 31, 2025 ರ ವೇಳೆಗೆ ಸುಮಾರು 6.2 ರಿಂದ 6.3 ಲಕ್ಷ ಕೋಟಿ ರೂ.ಗೆ ಇಳಿಯುವ ನಿರೀಕ್ಷೆಯಿದೆ" ಎಂದು ಐಸಿಆರ್​ಎ ಹೇಳಿದೆ.

ಭಾರತದ ಎರಡು ಪ್ರಮುಖ ಟೆಲಿಕಾಂ ಆಪರೇಟರ್​ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ ಟೆಲ್ ಎರಡೂ ಪರಸ್ಪರ ಕೆಲವೇ ಗಂಟೆಗಳ ಅಂತರದಲ್ಲಿ ಟಾರಿಫ್ ಹೆಚ್ಚಳವನ್ನು ಘೋಷಿಸಿವೆ. ಜಿಯೋ ತನ್ನ ಕೆಲವು ಪ್ರೀಮಿಯಂ ಯೋಜನೆಗಳ ಟಾರಿಫ್​ ಅನ್ನು ಶೇಕಡಾ 12 ರಿಂದ 25 ರಷ್ಟು ಹೆಚ್ಚಿಸಿದೆ. ಅತ್ಯಂತ ಜನಪ್ರಿಯ ಯೋಜನೆಯಾದ ದಿನಕ್ಕೆ 1.5 ಜಿಬಿ ಡೇಟಾ ಮತ್ತು 28 ದಿನಗಳ ಮಾನ್ಯತೆಯ ಯೋಜನೆಯ ಬೆಲೆಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ. ಏರ್ ಟೆಲ್ ಶೇಕಡಾ 11 ರಿಂದ 21 ರಷ್ಟು ಬೆಲೆ ಹೆಚ್ಚಿಸಿದೆ. ಹೊಸ ಬೆಲೆಗಳು ಜುಲೈ 3 ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ :ಜುಲೈ 3 ರಿಂದ ಏರ್​ಟೆಲ್​ ಟಾರಿಫ್​ ಹೆಚ್ಚಳ: ಯಾವ ಪ್ಲಾನ್​ಗೆ ಎಷ್ಟು ಏರಿಕೆ?: ಇಲ್ಲಿದೆ ಡಿಟೇಲ್ಸ್​​ - Airtel Tariff Hike

For All Latest Updates

ABOUT THE AUTHOR

...view details