ETV Bharat / business

ಚಿನ್ನದ ದರದ ದಿಢೀರ್​ ಏರಿಕೆಗೆ ಕಾರಣ ಏನು?; ಹೀಗಿದೆ ಇಂದಿನ ಬಂಗಾರದ ದರ.. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ! - TODAY GOLD AND SILVER PRICES

ಆಭರಣ ಚಿನ್ನದ ಬೆಲೆಯಲ್ಲಿ 250 ರೂ ಏರಿಕೆ ಆಗಿದ್ದರೆ, 24 ಕ್ಯಾರೆಟ್​​ ಬಂಗಾರದ ಬೆಲೆಯಲ್ಲಿ ಅಂದಾಜು 270 ರೂಗಳ ಹೆಚ್ಚಳ ಕಂಡು ಬಂದಿದೆ.

experts-predict-further-correction-in-gold-and-silver-prices
ಮೂರು ದಿನಗಳಿಂದ ಕುಸಿದಿದ್ದ ಬಂಗಾರದ ಬೆಲೆಯಲ್ಲಿ ಇಂದು ದಿಢೀರ್​ ಏರಿಕೆ.. ಕಾರಣ ಏನು? (GETTY IMAGE)
author img

By ETV Bharat Karnataka Team

Published : Nov 27, 2024, 3:57 PM IST

ನವದೆಹಲಿ: ಕಳೆದ ಮೂರು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರ ಇಂದು ಏರಿಕೆ ಕಂಡಿದೆ. ನವೆಂಬರ್ 25 ಮತ್ತು 26 ರಂದು ಎರಡು ದಿನಗಳು ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಆ ಬಳಿಕ ಚಿನ್ನದ ದರದಲ್ಲಿ ಚೇತರಿಕೆ ಕಂಡು ಬಂದಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಈಗ ಚಿನ್ನದ ಬೆಲೆ 22 ಕ್ಯಾರೆಟ್​ನ ಒಂದು ಗ್ರಾಂ ಚಿನ್ನಕ್ಕೆ 7,105 ರೂ. ಮತ್ತು 24-ಕ್ಯಾರೆಟ್ ಚಿನ್ನಕ್ಕೆ 7,751 ರೂ. ಇದೆ. 22 ಕ್ಯಾರೆಟ್​ನ 100 ಗ್ರಾಂ ಚಿನ್ನದ ಬೆಲೆ ಮಂಗಳವಾರ 7,08,000 ರೂ ಇತ್ತು. ಆದರೆ ಬುಧವಾರ 2,500 ರೂ. ಏರಿಕೆ ಕಾಣುವ ಮೂಲಕ 7,10,500 ರೂ.ಗೆ ಹೆಚ್ಚಳ ಕಂಡಿದೆ. ಅದೇ 22ಕ್ಯಾರೆಟ್​ನ 10 ಗ್ರಾಂ ಬಂಗಾರಕ್ಕೆ ಇಂದು ರೂ.71,050 ದರ ಇದೆ. ನಿನ್ನೆ ಇದೇ ದರ 70,800 ರೂ ಆಗಿತ್ತು. ಇಂದು 10 ಗ್ರಾಂ ಆಭರಣ ಚಿನ್ನಕ್ಕೆ 250 ರೂ ಏರಿಕೆ ಆಗಿದೆ.

24 ಕ್ಯಾರೆಟ್​ ಬಂಗಾರದ ದರ ಹೀಗಿದೆ; ಇನ್ನು 24 ಕ್ಯಾರೆಟ್​​ನ ಶುದ್ಧ 100 ಗ್ರಾಂ ಹಳದಿ ಲೋಹದ ಬೆಲೆ 2,700 ರೂ. ಏರಿಕೆ ಕಂಡಿದ್ದು, ಬುಧವಾರ 7,75,100 ರೂಗೆ ಮಾರಾಟವಾಗುತ್ತಿದೆ. ಮಂಗಳವಾರ 100 ಗ್ರಾಂ 24 ಕ್ಯಾರೆಟ್​ ಬಂಗಾರಕ್ಕೆ 7,72,400 ರೂ. ಇತ್ತು. ಅಂದರೆ 100 ಗ್ರಾಂಗೆ 2,700 ರೂ.ಗಳ ಹೆಚ್ಚಳವಾದಂತಾಗಿದೆ.

ಮತ್ತೊಂದು ಕಡೆ 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ ಬುಧವಾರ 77,510 ರೂ.ಗೆ ತಲುಪಿದೆ. ನಿನ್ನೆ 77,240 ರೂ ದರ ಇತ್ತು. ಒಟ್ಟು 270 ರೂ.ಗಳ ಬೆಲೆ ಏರಿಕೆಯನ್ನು ದಾಖಲಿಸಿದೆ.

ಹೂಡಿಕೆದಾರರು ಪ್ರಮುಖವಾಗಿ ಅಮೆರಿಕದ ಹಣದುಬ್ಬರದ ದತ್ತಾಂಶಕ್ಕಾಗಿ ಕಾಯುತ್ತಿರುವುದರಿಂದ ಚಿನ್ನದ ಬೆಲೆಗಳು ಬುಧವಾರ ಸಣ್ಣ ಪ್ರಮಾಣದದಲ್ಲಿ ಏರಿಳಿತ ಕಂಡಿವೆ. ಇನ್ನು ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ $2,635.56 ನಲ್ಲಿ ಸ್ಥಿರವಾಗಿದೆ.

ದೇಶದಲ್ಲಿ ಬೆಳ್ಳಿ ದರ ಹೇಗಿದೆ?: ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಹಾಗೂ ರಷ್ಯಾ- ಉಕ್ರೇನ್​​ ಉದ್ವಿಗ್ನತೆಯ ನಡುವೆ ಬೆಳ್ಳಿಯ ಬೆಲೆಗಳು ದೇಶದಲ್ಲಿ ಸ್ಥಿರವಾಗಿವೆ. ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ರೂ 89.50 ಮತ್ತು ಪ್ರತಿ ಕಿಲೋ ಗ್ರಾಂಗೆ ರೂ 89,500 ದರ ನಿಗದಿಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 89,500 ರೂ.ನಲ್ಲಿ ಸ್ಥಿರವಾಗಿ ಉಳಿದಿದ್ದರೆ, ಇಂದು 10 ಗ್ರಾಂ ಬೆಳ್ಳಿ ಬೆಲೆ 895 ರೂ. ಇದ್ದರೆ, 100 ಗ್ರಾಂ ಬೆಳ್ಳಿ 8,950 ರೂ. ನಿಗದಿಯಾಗಿದೆ.

ಇದನ್ನು ಓದಿ: PAN 2.0 ಯೋಜನೆಗೆ ಕೇಂದ್ರ ಒಪ್ಪಿಗೆ: ಇನ್ಮುಂದೆ QR ಕೋಡ್‌ ಜೊತೆ ಬರಲಿದೆ ಪ್ಯಾನ್ ಕಾರ್ಡ್‌; ಏನಿದರ ಉದ್ದೇಶ?

ಮಾರಾಟದಲ್ಲಿ ಅದ್ಭುತ ಸಾಧನೆ ಮಾಡಿದ ಟಾಟಾ ಮೋಟಾರ್ಸ್​​ನ ಈ ಕಾರು ಗ್ರಾಹಕರಿಗೆ ಅಚ್ಚುಮೆಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.