ETV Bharat / business

ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ವಿಶ್ವದ 2ನೇ ಅತಿದೊಡ್ಡ ಮೊಟ್ಟೆ ಉತ್ಪಾದಕನಾದ ಭಾರತ - INDIAS MILK PRODUCTION

ಭಾರತದ ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಾಗಿದೆ.

ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ವಿಶ್ವದ 2ನೇ ಅತಿದೊಡ್ಡ ಮೊಟ್ಟೆ ಉತ್ಪಾದಕನಾದ ಭಾರತ
ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ವಿಶ್ವದ 2ನೇ ಅತಿದೊಡ್ಡ ಮೊಟ್ಟೆ ಉತ್ಪಾದಕನಾದ ಭಾರತ (IANS)
author img

By ETV Bharat Karnataka Team

Published : Nov 27, 2024, 4:22 PM IST

ನವದೆಹಲಿ: ಭಾರತದ ಹಾಲು ಉತ್ಪಾದನೆಯು 2023-24ನೇ ಸಾಲಿನಲ್ಲಿ ಶೇ 4ರಷ್ಟು ಏರಿಕೆಯಾಗಿ 239.3 ದಶಲಕ್ಷ ಟನ್​​ಗಳಿಗೆ ತಲುಪಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.

2022-23ರಲ್ಲಿ ದಿನಕ್ಕೆ 459 ಗ್ರಾಂ ಇದ್ದ ತಲಾ ಹಾಲಿನ ಲಭ್ಯತೆಯು 2023 - 24ರಲ್ಲಿ ದಿನಕ್ಕೆ 471 ಗ್ರಾಂಗೆ ಏರಿದೆ ಎಂದು ಕೇಂದ್ರ ಸಚಿವ ಸಿಂಗ್ ಹೇಳಿದರು. ಭಾರತದ ಹಾಲು ಉತ್ಪಾದನೆಯಲ್ಲಿ ಸರಾಸರಿ ಬೆಳವಣಿಗೆ ಶೇಕಡಾ 6 ರಷ್ಟಿದ್ದರೆ, ವಿಶ್ವದ ಸರಾಸರಿಯು ಶೇಕಡಾ 2 ರಷ್ಟಿದೆ ಎಂದು ಸಚಿವರು ತಿಳಿಸಿದರು.

ನವೆಂಬರ್ 26 ರಂದು ಆಚರಿಸಲಾಗುವ ರಾಷ್ಟ್ರೀಯ ಹಾಲು ದಿನ: ಶ್ವೇತ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರ ಗೌರವಾರ್ಥವಾಗಿ ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುವ ರಾಷ್ಟ್ರೀಯ ಹಾಲು ದಿನ 2024 ರ ಸಂದರ್ಭದಲ್ಲಿ ಸರ್ಕಾರವು ಮೂಲ ಪಶುಸಂಗೋಪನಾ ಅಂಕಿಅಂಶ 2024 ಅನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಹಾಲು ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಉತ್ಪಾದಕತೆಯಲ್ಲಿ ಸುಧಾರಣೆಯ ಹಿನ್ನೆಲೆಯಲ್ಲಿ 2023-24ರಲ್ಲಿ ಹಾಲು ಉತ್ಪಾದನೆ ಸುಮಾರು 239 ಮಿಲಿಯನ್ ಟನ್​ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.

ಹಾಲು ಉತ್ಪಾದನೆ ಶೇಕಡಾ 8 ರಷ್ಟು ಹೆಚ್ಚಳ: ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ವಿದೇಶಿ / ಮಿಶ್ರತಳಿ ಜಾನುವಾರುಗಳಿಂದ ಹಾಲು ಉತ್ಪಾದನೆ ಶೇಕಡಾ 8 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ಜಾನುವಾರುಗಳಿಂದ ಉತ್ಪಾದನೆಯು ಶೇಕಡಾ 44.76 ರಷ್ಟು ಹೆಚ್ಚಾಗಿದೆ. 2023-24ರಲ್ಲಿ ಒಟ್ಟು ಮೊಟ್ಟೆ ಉತ್ಪಾದನೆಯು ಶೇಕಡಾ 3.17 ರಷ್ಟು ಏರಿಕೆಯಾಗಿ 142.77 ಬಿಲಿಯನ್ ಡಾಲರ್ ಗೆ ತಲುಪಿದೆ ಎಂದು ವರದಿ ತಿಳಿಸಿದೆ. ಸದ್ಯ ವಾರ್ಷಿಕವಾಗಿ ತಲಾ ವ್ಯಕ್ತಿಯೊಬ್ಬರಿಗೆ 103 ಮೊಟ್ಟೆಗಳು ಲಭ್ಯವಿವೆ. ಮೊಟ್ಟೆ ಉತ್ಪಾದನೆಯಲ್ಲಿ ಭಾರತವು ವಿಶ್ವದ 2 ನೇ ಅತಿದೊಡ್ಡ ದೇಶವಾಗಿದೆ.

ದೇಶದ ಮಾಂಸ ಉತ್ಪಾದನೆಯು ಶೇಕಡಾ 4.95 ರಷ್ಟು ಏರಿಕೆಯಾಗಿದ್ದು, 2023-24ರಲ್ಲಿ 10.25 ಮೆಟ್ರಿಕ್ ಟನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಒಟ್ಟು ಉಣ್ಣೆ ಉತ್ಪಾದನೆಯನ್ನು 33.69 ಮಿಲಿಯನ್ ಕೆಜಿಗೆ ನಿಗದಿಪಡಿಸಲಾಗಿದೆ. ಹೈನುಗಾರರನ್ನು ಸಂಘಟಿತ ವಲಯಕ್ಕೆ ತರುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಡೈರಿ ಉತ್ಪನ್ನಗಳ ರಫ್ತನ್ನು ಹೆಚ್ಚಿಸುವ ಅಗತ್ಯದ ಬಗ್ಗೆಯೂ ಅವರು ಮಾತನಾಡಿದರು.

ತಮ್ಮ ಜಾನುವಾರುಗಳನ್ನು ರೋಗದಿಂದ ರಕ್ಷಿಸಲು ಸರ್ಕಾರ ಉಚಿತ ಲಸಿಕೆಗಳನ್ನು ನೀಡುತ್ತಿರುವುದರಿಂದ ಹೈನುಗಾರರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಸಚಿವರು ಮನವಿ ಮಾಡಿದರು. 2030 ರ ವೇಳೆಗೆ ಕಾಲು ಮತ್ತು ಬಾಯಿ ರೋಗ ಮತ್ತು ಬ್ರುಸೆಲ್ಲೋಸಿಸ್ ಅನ್ನು ದೇಶದಿಂದ ನಿರ್ಮೂಲನೆ ಮಾಡಲಾಗುವುದು ಮತ್ತು ಇದು ರಫ್ತು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : PAN 2.0 ಯೋಜನೆಗೆ ಕೇಂದ್ರ ಒಪ್ಪಿಗೆ: ಇನ್ಮುಂದೆ QR ಕೋಡ್‌ ಜೊತೆ ಬರಲಿದೆ ಪ್ಯಾನ್ ಕಾರ್ಡ್‌; ಏನಿದರ ಉದ್ದೇಶ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.