ಕರ್ನಾಟಕ

karnataka

ETV Bharat / business

ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್ ಶೀಘ್ರದಲ್ಲೇ ಬಿಡುಗಡೆ: ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ಮೈಲೇಜ್​; ಬೆಲೆ ಎಷ್ಟು ಅಂತೀರಾ? - Tata Curvv EV car - TATA CURVV EV CAR

ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಎಲೆಕ್ಟ್ರಿಕ್ ಕಾರನ್ನು ನಯವಾದ ಹಾಗೂ ಗಮನ ಸೆಳೆಯುವ ವಿನ್ಯಾಸದೊಂದಿಗೆ ತಯಾರಿಸಲಾಗಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ಮೈಲೇಜ್ ನೀಡಲಿದೆಯಂತೆ. ಕಂಪನಿಯು ಶೀಘ್ರದಲ್ಲೇ ಈ ಕಾರ್​ ಬಿಡುಗಡಗೊಳಿಸಲು ತಯಾರಿ ನಡೆಸುತ್ತಿದೆ. ಈ ಎಲೆಕ್ಟ್ರಿಕ್ ಕಾರ್​ನ ಫೀಚರ್ಸ್​, ವಿಶೇಷತೆಗಳು, ಬೆಲೆ ವಿವರಗಳನ್ನು ನೋಡೋಣ ಬನ್ನಿ.

Tata Motors  Automobile  Tata Curvv EV Features  Tata Curvive EV car price
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್ ಶೀಘ್ರದಲ್ಲೇ ಬಿಡುಗಡೆ: ಒಂದೇ ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ಮೈಲೇಜ್​ ನೀಡುವ ಕಾರ್​ನ ಬೆಲೆ ಎಷ್ಟು?

By ETV Bharat Karnataka Team

Published : Apr 22, 2024, 8:24 AM IST

ದೇಶೀಯ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಹೊಸ ವಿನ್ಯಾಸದೊಂದಿಗೆ ಕರ್ವ್ ಎಲೆಕ್ಟ್ರಿಕ್ ಕಾರ್​ ತಯಾರಿಸುತ್ತಿದೆ. ಕೂಪ್ ಮಾದರಿಯ ರೂಫ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಸದ್ಯ ಎಲ್ಲರ ಗಮನ ಈ ಎಸ್​ಯುವಿ ಮೇಲೆಯೇ ಇದೆ. ವಾಸ್ತವವಾಗಿ, ಟಾಟಾ ಕಂಪನಿಯು ಮಾದರಿಯನ್ನು 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2024' ನಲ್ಲಿಯೇ ಅನಾವರಣಗೊಳಿಸಿದೆ.

’ಟಾಟಾ ಕರ್ವ್ ಇವಿ’ ವೈಶಿಷ್ಟ್ಯಗಳು:ಟಾಟಾ ಕರ್ವ್ ಇವಿ ಹೆಚ್ಚಿನ ಹೊಳಪಿನ ಡಾರ್ಕ್​ ರೆಡ್​ ಪ್ರೀಮಿಯಂ ಲುಕ್​ ಹೊಂದಿದೆ. ಒಳಾಂಗಣವು ತುಂಬಾ ಐಷಾರಾಮಿ ಮತ್ತು ಪ್ರೀಮಿಯಂ ಫಿನಿಶಿಂಗ್‌ನೊಂದಿಗೆ ರೂಪಿಸಲಾಗಿದೆ. ಭಾರವಾದ ಸಾಮಗ್ರಿಗಳನ್ನು ಸಾಗಿಸಲು ಸೂಕ್ತವಾದ ಬೂಟ್ ಸ್ಪೇಸ್ ಕೂಡಾ ಹೊಂದಿದೆ.

ಈ ಟಾಟಾ ಕರ್ವ್ ಇವಿ ಅತಿದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿದೆ. ಇದನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 500 ಕಿ.ಮೀ ವರೆಗೆ ಕ್ರಮಿಸಬಹುದಾಗಿದೆ ಎಂದು ಹೇಳಲಾಗಿದೆ. ಟಾಟಾ ಕಂಪನಿಯು ಈ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಒಳಭಾಗವನ್ನು ಹೊಸ ವಿನ್ಯಾಸದೊಂದಿಗೆ ತಯಾರಿಸುತ್ತಿದೆ. ಇದರಲ್ಲಿ ಸುಧಾರಿತ ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗುತ್ತಿದೆ.

ಟಾಟಾ ಕರ್ವ್ ಇವಿ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಇದು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಟು-ಸ್ಪೋಕ್ ಸ್ಟೀರಿಂಗ್ ವೀಲ್, ಆಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೆಪ್ಯಾಸಿಟಿವ್ ಕಂಟ್ರೋಲ್ ಲೆವೆಲ್-2 ಎಡಿಎಎಸ್, ಪನೋರಮಿಕ್ ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಇದೆ. ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಈ ಎಲೆಕ್ಟ್ರಿಕ್ ಕಾರಿನಲ್ಲಿ 6 - ಏರ್ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಏರೋ ಬ್ಲೇಡ್ ವಿನ್ಯಾಸದೊಂದಿಗೆ ಕಾರ್​ನ ಚಕ್ರಗಳು ಉತ್ತಮ ಅನುಭವವನ್ನು ನೀಡುತ್ತವೆ.

ಈ ಕಾರಿನಲ್ಲಿ ಹೊಸ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದನ್ನು ಮ್ಯಾನ್ಯುವಲ್ ಟ್ರಾನ್ಸ್ಮಿಷನ್​ಗೆ ಜೋಡಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್‌ಗೆ ಕಠಿಣ ಸ್ಪರ್ಧೆಯನ್ನು ನೀಡುವ ಸಾಧ್ಯತೆ ಇದೆ.

ಟಾಟಾ ಕರ್ವ್ ಇವಿ ಬೆಲೆ ಎಷ್ಟಿದೆ?:ಟಾಟಾ ಕಂಪನಿಯು ಈ ವರ್ಷದ ಮಧ್ಯದಲ್ಲಿ ಈ ಟಾಟಾ ಕರ್ವ್ ಇವಿ ಕಾರ್​ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರ ಬೆಲೆ 15 ಲಕ್ಷ ರೂಪಾಯಿಯಿಂದ 16 ಲಕ್ಷ ರೂಪಾಯಿ ಬೆಲೆಯ ವ್ಯಾಪ್ತಿಯಲ್ಲಿರಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ಈ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇದನ್ನೂ ಓದಿ:ನೀವು ಟಾಪ್​​ ಕ್ರೀಡಾ ಬೈಕ್​​​​​​​​ ಖರೀದಿ ಮಾಡಬೇಕು ಎಂಬ ಬಯಕೆ ಹೊಂದಿದ್ದೀರಾ?; ಹಾಗಾದರೆ ಇಲ್ಲಿವೆ ಐದು ಬೆಸ್ಟ್​ ಆಯ್ಕೆಗಳು - TOP 5 SPORTS BIKES IN INDIA

ABOUT THE AUTHOR

...view details