ಕರ್ನಾಟಕ

karnataka

ETV Bharat / business

ಭಾರತದ ಬಿಎಫ್​ಎಸ್​ಐ ವಲಯ: ನಾಲ್ಕರಲ್ಲಿ ಓರ್ವ ಮಹಿಳೆ ಲಿಂಗ ತಾರತಮ್ಯ ಸಂತ್ರಸ್ತೆ - Gender Disparity - GENDER DISPARITY

ಬಿಎಫ್​ಎಸ್​ಐ ವಲಯದಲ್ಲಿ ಮಹಿಳಾ ಉದ್ಯೋಗಿಗಳು ಅವಕಾಶದ ಕೊರತೆ ಹೊಂದಿದ್ದು, ಇದು ಲಿಂಗ ಅಸಮಾನತೆಯನ್ನು ಸೂಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

study-shows-opportunity-gap-for-women-employees-in-the-bfsi-sector
study-shows-opportunity-gap-for-women-employees-in-the-bfsi-sector

By ETV Bharat Karnataka Team

Published : Apr 12, 2024, 4:32 PM IST

ನವದೆಹಲಿ:ಭಾರತೀಯ ಬ್ಯಾಂಕಿಂಗ್​, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್​ಎಸ್​ಐ) ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿ ನಾಲ್ಕರಲ್ಲಿ ಒಬ್ಬ ಮಹಿಳೆ ಲಿಂಗ ಅಸಮಾನತೆಯ ಸಂತ್ರಸ್ತೆಯಾಗಿದ್ದಾಗಿದ್ದಾರೆ. ಇವರು ಗುರುತಿಸುವಿಕೆ, ವೇತನ, ಕೆಲಸದ ಸಾಮರ್ಥ್ಯದಲ್ಲಿ ತಾರತಮ್ಯ ಹೊಂದಿದ್ದಾರೆ ಎಂಬ ಸಂಗತಿ ಗ್ರೇಟ್​ ಪ್ಲೇಸ್​ ಟು ವರ್ಕ್​ ಇಂಡಿಯಾದ ವರದಿಯಲ್ಲಿ ಪ್ರಕಟವಾಗಿದೆ.

ಈ ಅಧ್ಯಯನಕ್ಕಾಗಿ, ಉದ್ಯೋಗ ಸ್ಥಳದಲ್ಲಿ ಮೌಲ್ಯಮಾಪನ ಮತ್ತು ಗುರುತಿಸಲ್ಪಟ್ಟ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಬಿಎಫ್​ಎಸ್​ಐ ವಲಯದಲ್ಲಿನ 167 ಸಂಸ್ಥೆಗಳ 12 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಿಗಳ ಪ್ರತಿಕ್ರಿಯೆ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.

ಬಿಎಫ್​ಎಸ್​ಐ ವಲಯದಲ್ಲಿನ ಮಹಿಳಾ ಉದ್ಯೋಗಿಗಳು ಅವಕಾಶದ ಕೊರತೆ ಹೊಂದಿದ್ದು, ಇದು ಲಿಂಗ ಅಸಮಾನತೆಯನ್ನು ಸೂಚಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ಉದ್ಯೋಗ ಸ್ಥಳದ ಗುಣಮಟ್ಟಕ್ಕೆ ಹೋಲಿಕೆ ಮಾಡಿದಾಗ ಪುರುಷರಿಗಿಂತ ಮಹಿಳೆಯರು ಕಡಿಮೆ ತೃಪ್ತಿ ಹೊಂದಿದ್ದಾರೆ.

ಜೆನ್​ ಜೆಡ್​ನ ಶೇ.21ರಷ್ಟು ಮತ್ತು 51ರಷ್ಟು ಮಿಲೆನ್ನಿಯಲ್​ ಉದ್ಯೋಗಿಗಳು ತಮ್ಮ ಉದ್ಯೋಗದ ಪಾತ್ರ ಮತ್ತು ಅರ್ಥಪೂರ್ಣ ಕೆಲಸ ಹುಡುಕುವ ಬಯಕೆಯಿಂದ ತಮ್ಮ ಆದ್ಯತೆ ಮತ್ತು ನಿರೀಕ್ಷೆಗಳಲ್ಲಿ ಬದಲಾವಣೆ ತೋರಿಸಿದ್ದಾರೆ.

ವಿಶಿಷ್ಟ ಪ್ರಯೋಜನಗಳು ಮತ್ತು ಆರೋಗ್ಯಕರ ಲಾಭ-ಹಂಚಿಕೆಯ ಅಭ್ಯಾಸಗಳನ್ನು ನೀಡುವುದರ ಹೊರತಾಗಿಯೂ, ಬಿಎಫ್​ಎಸ್​ಐ ಕೆಲಸದ ಸ್ಥಳಗಳಲ್ಲಿ ಸಂಬಂಧಿಸಿದ ಪ್ರವೃತ್ತಿ ಹೊರಹೊಮ್ಮುತ್ತದೆ. ವಿಶೇಷವಾಗಿ ಫಿನ್‌ಟೆಕ್, ಆರೋಗ್ಯ ಮತ್ತು ಸಾಮಾನ್ಯ ವಿಮೆ ಮತ್ತು ಹೂಡಿಕೆಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮಿಲೇನಿಯಂ ಮತ್ತು ಜೆನ್​ ಜೆಡ್​​​ ಮ್ಯಾನೇಜರ್‌ಗಳಲ್ಲಿ ನಂಬಿಕೆಯ ಕುಸಿತ ಮತ್ತು ಸಂಪರ್ಕ ಕಡಿತದ ಭಾವನೆಯೊಂದಿಗೆ ಉದ್ಯೋಗಿಗಳ ಭಾವನೆ ಕುಸಿದಿದೆ. ಹೆಚ್ಚು ಕಾಳಜಿಯುಳ್ಳ ಮತ್ತು ಪೂರಕ ವಾತಾವರಣಕ್ಕಾಗಿ ಅವರ ಆಕಾಂಕ್ಷೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಗ್ರೇಟ್​ ಪ್ಲೇಸ್​​ ಟು ವರ್ಕ್​ನ ಸಿಇಒ ಯಶಸ್ವಿನಿ ರಾಮಸ್ವಾಮಿ ತಿಳಿಸಿದ್ದಾರೆ. (ಐಎಎನ್​ಎಸ್)

ಇದನ್ನೂ ಓದಿ: ಫಿನ್​ಟೆಕ್​ ಫಂಡಿಂಗ್ ಶೇ 59ರಷ್ಟು ಹೆಚ್ಚಳ: ಜಾಗತಿಕವಾಗಿ 3ನೇ ಸ್ಥಾನದಲ್ಲಿ ಭಾರತ

ABOUT THE AUTHOR

...view details