ನವದೆಹಲಿ: ವಾರಾಂತ್ಯ ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಅಲ್ಪ ಏರಿಕೆಯೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 33.02 ಪಾಯಿಂಟ್ಸ್ ಅಥವಾ ಶೇಕಡಾ 0.04 ರಷ್ಟು ಏರಿಕೆ ಕಂಡು 81,086.21 ರಲ್ಲಿ ಕೊನೆಗೊಂಡರೆ, ವಿಶಾಲ ನಿಫ್ಟಿ50 11.65 ಪಾಯಿಂಟ್ಸ್ ಅಥವಾ ಶೇಕಡಾ 0.05 ರಷ್ಟು ಏರಿಕೆ ಕಂಡು 24,823.15 ರಲ್ಲಿ ಕೊನೆಗೊಂಡಿದೆ.
ಬಿಎಸ್ಇ ಸೆನ್ಸೆಕ್ಸ್ನಲ್ಲಿ ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಭಾರ್ತಿ ಏರ್ ಟೆಲ್, ಬಜಾಜ್ ಫಿನ್ ಸರ್ವ್ ಮತ್ತು ಐಸಿಐಸಿಐ ಬ್ಯಾಂಕ್ ಹೆಚ್ಚು ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಎಚ್ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್, ಟೈಟನ್ ಮತ್ತು ಇನ್ಫೋಸಿಸ್ ನಷ್ಟಕ್ಕೀಡಾದವು. ಬಿಎಸ್ಇ ಸೆನ್ಸೆಕ್ಸ್ನ 30 ಷೇರುಗಳ ಪೈಕಿ 13 ಇಳಿಕೆಯಲ್ಲಿ ಕೊನೆಗೊಂಡವು.
ಹಾಗೆಯೇ, ವಿಶಾಲ ನಿಫ್ಟಿ 50 ಯಲ್ಲಿ ಬಜಾಜ್ ಆಟೋ, ಕೋಲ್ ಇಂಡಿಯಾ, ಭಾರ್ತಿ ಏರ್ ಟೆಲ್, ಟಾಟಾ ಮೋಟಾರ್ಸ್ ಮತ್ತು ಸನ್ ಫಾರ್ಮಾ ಹೆಚ್ಚು ಲಾಭ ಗಳಿಸಿದರೆ, ಎಲ್ಟಿಐ, ವಿಪ್ರೋ, ಒಎನ್ಜಿಸಿ, ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದವು. ಆಟೋ ಮಾತ್ರ ವಲಯ ಲಾಭ ಗಳಿಸಿದ್ದು, ಶೇಕಡಾ 1.12 ರಷ್ಟು ಏರಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಿಯಾಲ್ಟಿ ಸೂಚ್ಯಂಕವು ಶೇಕಡಾ 2.24 ರಷ್ಟು ಕುಸಿದರೆ, ಮಾಧ್ಯಮ ಮತ್ತು ಐಟಿ ಸೂಚ್ಯಂಕಗಳು ಶೇಕಡಾ 1 ರಷ್ಟು ಕುಸಿದವು.