ಹೈದರಾಬಾದ್: ನಾಲ್ಕನೇ ತಲೆಮಾರಿನ ಮಾರುತಿ ಡಿಸೈರ್ ಕಾರು ಭಾರತದಲ್ಲಿ ಅನಾವರಣಗೊಂಡ ಕೆಲವೇ ದಿನಗಳಲ್ಲಿ, ಹೊಸ ಕಾಂಪ್ಯಾಕ್ಟ್ ಸೆಡಾನ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಪೂರ್ಣ ಅಂಕಗಳನ್ನು ಗಳಿಸಿದೆ.
ಹೊಸ ಮಾರುತಿ ಡಿಸೈರ್ ಕಾರು ವಯಸ್ಕರ ರಕ್ಷಣೆಗಾಗಿ (AOP) ಪ್ರಭಾವಶಾಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಮತ್ತು ಮಕ್ಕಳ ರಕ್ಷಣೆಗಾಗಿ (COP) 4-ಸ್ಟಾರ್ ಅಂಕಗಳನ್ನು ಪಡೆದುಕೊಂಡಿದೆ. ಇದು ಗ್ಲೋಬಲ್ NCAP ನಿಂದ 5-ಸ್ಟಾರ್ ರೇಟಿಂಗ್ ಪಡೆದ ಮೊದಲ ಮಾರುತಿ ಕಾರ್ ಆಗಿದೆ.
ವಿಶ್ವಾಸ ಹೆಚ್ಚಿಸಲು ಮಾರುತಿ ಮಹತ್ವದ ನಿರ್ಧಾರ: ಮಾರುತಿ ಸುಜುಕಿ ತನ್ನ ಕಾರುಗಳ ಕಳಪೆ ಸುರಕ್ಷತಾ ರೇಟಿಂಗ್‌ಗಾಗಿ ದೀರ್ಘಕಾಲದವರೆಗೆ ಟೀಕೆಗಳನ್ನು ಎದುರಿಸುತ್ತಿದೆ. ಆದರೆ, ನಂತರ ಸ್ವಯಂ ಪ್ರೇರಣೆಯಿಂದ ಮಾರುತಿ ತನ್ನ ಹೊಸ ಡಿಸೈರ್ ಅನ್ನು ಗ್ಲೋಬಲ್ ಎನ್‌ಸಿಎಪಿಗೆ ಕ್ರ್ಯಾಶ್ ಪರೀಕ್ಷೆಗಾಗಿ ಕಳುಹಿಸಿತು. ಇದು ಅದರ ಸುರಕ್ಷತೆಯ ಕಾರ್ಯಕ್ಷಮತೆಯಲ್ಲಿ ಮಾರುತಿಯ ವಿಶ್ವಾಸವನ್ನು ತೋರಿಸುತ್ತದೆ.
ಮೂರನೇ ತಲೆಮಾರಿನ ಡಿಸೈರ್ ಕಾರು ವಯಸ್ಕ ಮತ್ತು ಮಕ್ಕಳ ರಕ್ಷಣೆಗಾಗಿ 2-ಸ್ಟಾರ್ ರೇಟಿಂಗ್ ಅನ್ನು ಪಡೆದಿತ್ತು. ಬಾಡಿಶೆಲ್ ಮತ್ತು ಫುಟ್‌ವೆಲ್ ಪ್ರದೇಶವನ್ನು ಸಹ ಅಸ್ಥಿರವೆಂದು ರೇಟ್ ಮಾಡಲಾಗಿದೆ. ಭಾರತದಲ್ಲಿ ಕಾರುಗಳಲ್ಲಿನ ಸುರಕ್ಷತೆಯ ಬಗೆಗಿನ ಚರ್ಚೆಯು ವೇಗವನ್ನು ಪಡೆಯುತ್ತಿದೆ. ಇದನ್ನ ಮಾರುತಿ ಸುಜುಕಿ ಗಮನಿಸಿದೆ.
ಮಾರುತಿ ಸುಜುಕಿ ಡಿಸೈರ್ ಕಾರು ವಯಸ್ಕರ ಸುರಕ್ಷತೆಗಾಗಿ 34 ರಲ್ಲಿ 31.24 ಅಂಕಗಳನ್ನು ಗಳಿಸಿದೆ. ಚಾಲಕ ಮತ್ತು ಪ್ರಯಾಣಿಕರಿಗೆ ತಲೆ ಮತ್ತು ಕುತ್ತಿಗೆ ರಕ್ಷಣೆ ಉತ್ತಮವಾಗಿದೆ ಎಂದು ಗ್ಲೋಬಲ್ ಎನ್‌ಸಿಎಪಿ ವರದಿ ಹೇಳಿದೆ. ಆದಾಗ್ಯೂ, ಚಾಲಕನ ಎದೆಯ ರಕ್ಷಣೆ ಅತ್ಯಲ್ಪವಾಗಿದೆ. ಆದರೆ, ಮುಂಭಾಗದ ಪ್ರಯಾಣಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಾಲಕ ಮತ್ತು ಪ್ರಯಾಣಿಕರ ಮೊಣಕಾಲುಗಳಿಗೆ ಉತ್ತಮ ರಕ್ಷಣೆ ನೀಡಲಾಗಿದೆ ಎಂದು ಎಜೆನ್ಸಿ ತಿಳಿಸಿದೆ.
ಮಾರುತಿ ಸುಜುಕಿ ಡಿಸೈರ್‌ನಲ್ಲಿ ಮಕ್ಕಳ ಸುರಕ್ಷತೆ ರೇಟಿಂಗ್: ಮಕ್ಕಳ ಸುರಕ್ಷತೆಗಾಗಿ ಡಿಸೈರ್ 42 ರಲ್ಲಿ 39.20 ಅಂಕಗಳನ್ನು ಗಳಿಸಿದೆ. ISOFIX ಆಂಕಾರೇಜ್‌ಗಳನ್ನು ಬಳಸಿಕೊಂಡು ರಚಿಸಿದ ಸೀಟ್ (ಆಸನ) ಘರ್ಷಣೆಯ ಸಮಯದಲ್ಲಿ ಅತಿಯಾಗಿ ಮುಂದಕ್ಕೆ ಬಾಗುವುದನ್ನ ತಡೆಯಲು ಸಾಧ್ಯವಾಯಿತು. ಇದರಲ್ಲಿ ತಲೆ ಮತ್ತು ಎದೆಯ ಭಾಗಕ್ಕೆ ಸಂಪೂರ್ಣ ರಕ್ಷಣೆ ಸಿಕ್ಕಿತು. ಆದರೆ, ಕುತ್ತಿಗೆಗೆ ಸೀಮಿತ ರಕ್ಷಣೆ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ISOFIX ಆಂಕಾರೇಜ್‌ಗಳನ್ನು ಬಳಸಿಕೊಂಡು ರಚಿಸಲಾದ ಸೀಟ್ನಲ್ಲಿ 18-ತಿಂಗಳ ವಯಸ್ಸಿನ ಮಗುವಿಗೆ ಹಿಂಬದಿಯ ಮಗುವಿನ ಆಸನವು ಮುಂಭಾಗದ ಘರ್ಷಣೆಯ ಸಮಯದಲ್ಲಿ ತಲೆಗೆ ಅಪಾಯವಾಗದಂತೆ ತಡೆಯಲು ಸಾಧ್ಯವಾಯಿತು. ಅಪಘಾತದ ಸಮಯದಲ್ಲಿ CRS ರಚನೆಯು 18 ತಿಂಗಳ ಮಗು ಮತ್ತು 3 ವರ್ಷದ ಮಗುವಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಿದೆ ಎಂದು ಸುರಕ್ಷತಾ ರೇಟಿಂಗ್ ಪರೀಕ್ಷೆಯಲ್ಲಿ ತಿಳಿದು ಬಂದಿದೆ.
ಮಾರುತಿ ಸುಜುಕಿ ಡಿಸೈರ್ನ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು: ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದ ವೇಳೆ ಮಾರುತಿ ಡಿಸೈರ್ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಎಲ್ಲ ಆಸನಗಳಿಗೆ ಜ್ಞಾಪನೆಯೊಂದಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಔಟ್‌ಬೋರ್ಡ್ ಸೀಟ್‌ಗಳಿಗೆ ಐಎಸ್‌ಒಫಿಕ್ಸ್ ಆರೋಹಣಗಳು ಮತ್ತು ಮುಂಭಾಗದ ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳು ಮತ್ತು ಲೋಡ್ ಲಿಮಿಟರ್‌ಗಳು ತೊಡಗಿಸಿಕೊಂಡಿವೆ. ಡಿಸೈರ್ ಯುಎನ್ 127 ಪಾದಚಾರಿ ಸುರಕ್ಷತಾ ಮಾನದಂಡಗಳನ್ನು ಸಹ ಅನುಸರಿಸಿದೆ. ಪರೀಕ್ಷಿಸಿದ ಮಾದರಿಯನ್ನು ದೇಶೀಯ ಮಾರುಕಟ್ಟೆಗಾಗಿ ಭಾರತದಲ್ಲಿ ತಯಾರಿಸಲಾಗಿದೆ.
ಇದನ್ನೂ ಓದಿ : ನ್ಯೂ ಜನರೇಷನ್ ಮಾರುತಿ ಸುಜುಕಿ ಡಿಜೈರ್ ಬಿಡುಗಡೆ ದಿನಾಂಕ ಘೋಷಣೆ: ಇದರ ವೈಶಿಷ್ಟ್ಯ, ವಿನ್ಯಾಸ ಹೇಗಿದೆ ಗೊತ್ತಾ?