ಕರ್ನಾಟಕ

karnataka

ETV Bharat / business

ದಾಖಲೆಯ ಗರಿಷ್ಠ ಮಟ್ಟಕ್ಕೇರಿದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 194.07 ಅಂಕ ಏರಿಕೆ, 25,278ಕ್ಕೆ ತಲುಪಿದ ನಿಫ್ಟಿ - Stock Market - STOCK MARKET

ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ದಾಖಲೆಯ ಏರಿಕೆಯೊಂದಿಗೆ ಕೊನೆಗೊಂಡಿವೆ.

ಮುಂಬೈ ಸ್ಟಾಕ್ ಎಕ್ಸ್​ಚೇಂಜ್
ಮುಂಬೈ ಸ್ಟಾಕ್ ಎಕ್ಸ್​ಚೇಂಜ್ (IANS)

By ETV Bharat Karnataka Team

Published : Sep 2, 2024, 6:06 PM IST

ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ವಾರದ ಮೊದಲ ವಹಿವಾಟಿನ ದಿನದಂದು ದಾಖಲೆಯ ಗರಿಷ್ಠ ಮುಕ್ತಾಯ ಮಟ್ಟದಲ್ಲಿ ಕೊನೆಗೊಂಡಿವೆ. ಬಿಎಸ್ಇ ಸೆನ್ಸೆಕ್ಸ್ 194.07 ಪಾಯಿಂಟ್ಸ್ ಅಥವಾ ಶೇಕಡಾ 0.24 ರಷ್ಟು ಏರಿಕೆಯಾಗಿ 82,559.84 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂಟ್ರಾ - ಡೇ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ 82,725.28 ಕ್ಕೆ ತಲುಪಿತ್ತು.

ಹಾಗೆಯೇ ನಿಫ್ಟಿ ಫಿಫ್ಟಿ ಸಹ 42.80 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಏರಿಕೆಯಾಗಿ 25,278.70 ರಲ್ಲಿ ಕೊನೆಗೊಂಡಿದೆ. ಸೋಮವಾರದ ಇಂಟ್ರಾ - ಡೇ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ಗರಿಷ್ಠ 25,333.65 ಕ್ಕೆ ತಲುಪಿತ್ತು.

ನಿಫ್ಟಿ ಫಿಫ್ಟಿಯಲ್ಲಿ 27 ಷೇರುಗಳು ಏರಿಕೆಯೊಂದಿಗೆ ಕೊನೆಗೊಂಡವು, ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್, ಹೀರೋ ಮೋಟೊಕಾರ್ಪ್ ಮತ್ತು ಎಸ್ ಬಿಐ ಲೈಫ್ ಇನ್ಶೂರೆನ್ಸ್ ಶೇಕಡಾ 3.31 ರಷ್ಟು ಲಾಭ ಗಳಿಸಿದವು. ಏತನ್ಮಧ್ಯೆ, ಹಿಂಡಾಲ್ಕೊ ಇಂಡಸ್ಟ್ರೀಸ್, ಡಾ. ರೆಡ್ಡೀಸ್ ಲ್ಯಾಬ್ಸ್, ಟಾಟಾ ಮೋಟಾರ್ಸ್, ಎನ್ ಟಿಪಿಸಿ ಮತ್ತು ಒಎನ್​ಜಿಸಿ ಸೂಚ್ಯಂಕದಲ್ಲಿ ಶೇಕಡಾ 2.55 ರಷ್ಟು ಕುಸಿದವು.

ಬಿಎಸ್ಇಯಲ್ಲಿ ಲಿಸ್ಟ್​ ಆಗಿರುವ 30 ಷೇರುಗಳ ಪೈಕಿ 17 ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಶೇಕಡಾ 3.26 ರಷ್ಟು ಲಾಭ ಗಳಿಸಿದವು. ಎನ್​ಟಿಪಿಸಿ, ಟಾಟಾ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ ಮತ್ತು ಭಾರ್ತಿ ಏರ್ ಟೆಲ್ ಶೇಕಡಾ 1.51 ರಷ್ಟು ಕುಸಿತದೊಂದಿಗೆ ಕೊನೆಗೊಂಡವು.

ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಕ್ರಮವಾಗಿ ಶೇಕಡಾ 0.23 ಮತ್ತು ಶೇಕಡಾ 0.33 ರಷ್ಟು ಕುಸಿದಿವೆ. ವಲಯ ಸೂಚ್ಯಂಕಗಳಲ್ಲಿ, ಐಟಿ, ಬ್ಯಾಂಕಿಂಗ್, ಎಫ್ಎಂಸಿಜಿ ಮತ್ತು ಹಣಕಾಸು ಸೇವೆಗಳು ಏರಿಕೆಯಲ್ಲಿ ಕೊನೆಗೊಂಡರೆ ಲೋಹ, ಫಾರ್ಮಾ, ಆಟೋ, ಮಾಧ್ಯಮ ಮತ್ತು ಹೆಲ್ತ್ ಕೇರ್ ಸೋಮವಾರ ಇಳಿಕೆ ಕಂಡವು.

ದೇಶೀಯ ಸ್ಥೂಲ ಆರ್ಥಿಕ ಅಂಕಿ- ಅಂಶಗಳು ನಿರಾಶಾದಾಯಕವಾಗಿರುವ ಮಧ್ಯೆ ಸೋಮವಾರ ಡಾಲರ್ ಎದುರು ರೂಪಾಯಿ 7 ಪೈಸೆ ಕುಸಿದು 83.92 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ ಅಮೆರಿಕನ್ ಕರೆನ್ಸಿಯ ವಿರುದ್ಧ 2 ಪೈಸೆ ಕುಸಿದು 83.87 ರಲ್ಲಿ ಪ್ರಾರಂಭವಾಯಿತು. ಇದು ಇಂಟ್ರಾ-ಡೇಯಲ್ಲಿ ಗರಿಷ್ಠ 83.85 ಕ್ಕೆ ಏರಿಕೆಯಾಗಿತ್ತು. ನಂತರ ದಿನದ ಕನಿಷ್ಠ 83.93 ಕ್ಕೆ ಇಳಿದು ಯುಎಸ್ ಡಾಲರ್ ವಿರುದ್ಧ 83.92 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 7 ಪೈಸೆ ಕುಸಿತವಾಗಿದೆ.

ಇದನ್ನೂ ಓದಿ : ದೆಹಲಿ - ಲಂಡನ್ ಹೀಥ್ರೂ ಮಾರ್ಗದಲ್ಲಿ ಹೊಸ ಏರ್ ಬಸ್ ಎ 350 - 900 ವಿಮಾನಯಾನ ಆರಂಭಿಸಿದ ಏರ್​ ಇಂಡಿಯಾ - Airbus A350 aircraft

For All Latest Updates

ABOUT THE AUTHOR

...view details