ಮುಂಬೈ: ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳದ ಮಧ್ಯೆ ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ಬಲವಾದ ಖರೀದಿಯಿಂದಾಗಿ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಹೊಸ ಜೀವಮಾನದ ಗರಿಷ್ಠ ಮಟ್ಟಕ್ಕೆ ಏರಿದವು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 141.34 ಪಾಯಿಂಟ್ಸ್ ಅಥವಾ ಶೇಕಡಾ 0.18 ರಷ್ಟು ಏರಿಕೆ ಕಂಡು 77,478.93 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಇದು 305.5 ಪಾಯಿಂಟ್ ಅಥವಾ ಶೇಕಡಾ 0.39 ರಷ್ಟು ಏರಿಕೆ ಕಂಡು 77,643.09 ಕ್ಕೆ ತಲುಪಿತ್ತು.
ಎನ್ಎಸ್ಇ ನಿಫ್ಟಿ 51 ಪಾಯಿಂಟ್ಸ್ ಅಥವಾ ಶೇಕಡಾ 0.22 ರಷ್ಟು ಏರಿಕೆ ಕಂಡು 23,567 ರಲ್ಲಿ ಕೊನೆಗೊಂಡಿದೆ. ದಿನ ವಹಿವಾಟಿನ ಮಧ್ಯದಲ್ಲಿ ನಿಫ್ಟಿ 108 ಪಾಯಿಂಟ್ ಅಥವಾ ಶೇಕಡಾ 0.45ರಷ್ಟು ಏರಿಕೆ ಕಂಡು 23,624ಕ್ಕೆ ತಲುಪಿತ್ತು.
ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಜೆಎಸ್ ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಎನ್ ಟಿಪಿಸಿ, ವಿಪ್ರೋ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪವರ್ ಗ್ರಿಡ್ ನಷ್ಟ ಅನುಭವಿಸಿದವು.