Samsung Galaxy S25 Series Update: ಇನ್ನು ಕೆಲವೇ ದಿನಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್25 ಸೀರಿಸ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಕಂಪನಿಯು ಜನವರಿ 22 ರಂದು ಈ ಸೀರಿಸ್ ಅನ್ನು ಪ್ರಾರಂಭಿಸಬಹುದು. ಈ ಸೀರಿಸ್ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್25, ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್25+ ಮತ್ತು ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಅಲ್ಟ್ರಾ ಫೋನ್‌ಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್25 ಬಿಗ್ RAM ಪಡೆಯಲಿದೆ ಎಂದು ಬಹಿರಂಗಪಡಿಸಿದೆ. ಅಸ್ತಿತ್ವದಲ್ಲಿರುವ S24 ಸರಣಿಗೆ ಹೋಲಿಸಿದರೆ ಇದು ದೊಡ್ಡ ಬದಲಾವಣೆಯಾಗಿದೆ.
Samsung Galaxy S25: ಗ್ಯಾಲೆಕ್ಸಿ ಎಸ್25 ಸೀರಿಸ್ 12GB RAM ಪ್ರಮಾಣಿತವಾಗಿರುತ್ತದೆ ಎಂದು ಇತ್ತೀಚಿನ ಮಾಹಿತಿಗಳು ಬಹಿರಂಗಪಡಿಸಿವೆ. ಈ ಸೀರಿಸ್ ಯಾವುದೇ ಮಾದರಿಯು ಪ್ರಸ್ತುತ ಎಸ್24 ಸರಣಿಯಂತೆ 8GB RAM ಅನ್ನು ಹೊಂದಿರುವುದಿಲ್ಲ. ಕಂಪನಿಯು ಪ್ರಸ್ತುತ ಎಸ್24 ನಲ್ಲಿ 8GB RAM ಹೊಂದಿದ್ದು, ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಆದರೆ, S24 ಪ್ಲಸ್ ಮತ್ತು ಅಲ್ಟ್ರಾ ಮಾದರಿಗಳು 12GB RAM ನೊಂದಿಗೆ ಬರುತ್ತವೆ. ಎಸ್25ನ ಮೂಲ ರೂಪಾಂತರವು 12GB RAM ಮತ್ತು 256GB ಸ್ಟೋರೇಜ್ ಬರಲಿದೆ ಎಂದು ವರದಿಯಾಗಿದೆ.
ಊಹಾಪೋಹ: ಎಸ್25 ಅಲ್ಟ್ರಾದಲ್ಲಿ 16GB RAM ಅನ್ನು ಕಾಣಬಹುದು ಎಂಬ ಊಹಾಪೋಹಗಳೂ ಇವೆ. ಹೆಚ್ಚಿದ RAM ಜೊತೆಗೆ, AI ವೈಶಿಷ್ಟ್ಯಗಳನ್ನು ಈ ಫೋನ್‌ಗಳಲ್ಲಿ ಉತ್ತಮವಾಗಿ ಸಂಯೋಜಿಸಬಹುದು. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ವೈಶಿಷ್ಟ್ಯಗಳು ಮತ್ತು ಬೆಲೆ: Qualcomm ನ Snapdragon 8 Elite ಚಿಪ್‌ಸೆಟ್ ಮುಂಬರುವ ಸರಣಿಯಲ್ಲಿ ಕಾಣಬಹುದು. 5G ಕನೆಕ್ಟಿವಿ ಹೊಂದಿರುವ ಎಲ್ಲ ಮೂರು ಫೋನ್‌ಗಳು Android 15 ನಲ್ಲಿ ರನ್ ಆಗುತ್ತವೆ. ಎಸ್24 ಸರಣಿಗೆ ಹೋಲಿಸಿದರೆ, S25 ಸರಿಣಿ ಉತ್ತಮ ಕ್ಯಾಮೆರಾ ಹೊಂದಿರುತ್ತದೆ. ಪ್ರಸ್ತುತ 12MP ಗೆ ಬದಲಾಗಿ ಗ್ಯಾಲೆಕ್ಸಿ ಎಸ್25 ಅಲ್ಟ್ರಾದಲ್ಲಿ 50MP ಅಲ್ಟ್ರಾ-ವೈಡ್ ಸೆನ್ಸಾರ್ ಕಾಣಬಹುದು.
ಬೆಲೆಯ ಬಗ್ಗೆ ಮಾತನಾಡುವುದಾದರೆ ಹೊಸ ಗ್ಯಾಲೆಕ್ಸಿ ಎಸ್25 ಸರಣಿಯ ಫೋನ್‌ಗಳ ಬೆಲೆಯು ಗ್ಯಾಲೆಕ್ಸಿ ಎಸ್24 ಸರಣಿಗಿಂತ 5,000-7,000 ಹೆಚ್ಚು ದುಬಾರಿಯಾಗಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ನ ಮೂಲ ಮಾದರಿಯು 12GB + 128GB ರೂಪಾಂತರಕ್ಕಾಗಿ ಸುಮಾರು $799 (ಅಂದಾಜು ರೂ. 68,000) ರಿಂದ ಪ್ರಾರಂಭವಾಗಬಹುದು. Galaxy S25+ ಸುಮಾರು $999 ರಿಂದ ಪ್ರಾರಂಭವಾಗಬಹುದು (ಸುಮಾರು ರೂ. 85,000) ಜೊತೆಗೆ 256GB ಸ್ಟೋರೇಜ್ ಹೊಂದಿದೆ. ಪ್ರಮುಖ ಮಾದರಿ, Galaxy S25 Ultra, 12GB + 256GB ಬೇಸ್ ಕಾನ್ಫಿಗರೇಶನ್‌ಗಾಗಿ ಸುಮಾರು $1,299 (ಅಂದಾಜು ರೂ. 1.10 ಲಕ್ಷ) ರಿಂದ ಪ್ರಾರಂಭವಾಗಬಹುದು.
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್25 ಜನವರಿ 22, 2025 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಬ್ರ್ಯಾಂಡ್‌ನ ಪ್ರಧಾನ ಕಚೇರಿಯಿಂದ ತನ್ನ X ಪೋಸ್ಟ್ ಮೂಲಕ ಪೋಸ್ಟ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದೆ.