ETV Bharat / bharat

ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ನಾಲ್ವರು ಸಾವು - DEWAS FIRE ACCIDENT 4 DIED

ಮಧ್ಯಪ್ರದೇಶದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ.

Dewas fire accident 4 died
ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ನಾಲ್ವರು ಸಾವು (ETV Bharat)
author img

By ETV Bharat Karnataka Team

Published : 2 hours ago

ದೇವಾಸ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ನಗರದ ನಯಾಪುರ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಮನೆಯೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಘಟನೆ ಬೆಳಗಿನ ಜಾವ 4.30ಕ್ಕೆ ನಡೆದಿದೆ. ಅಪಘಡದಲ್ಲಿ ಮೃತಪಟ್ಟ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ದೊರೆತ ತಕ್ಷಣ ದೇವಾಸ್ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಸಾಕಷ್ಟು ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಇಲ್ಲಿ ವಾಸಿಸುತ್ತಿದ್ದ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಹೀಗಿದೆ: ನಯಾಪುರ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದೊಳಗೆ ಬೆಂಕಿ ದೊಡ್ಡ ಸ್ವರೂಪವನ್ನು ಪಡೆದುಕೊಂಡಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆಯಲ್ಲಿ ಇರಿಸಲಾಗಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಇಡೀ ಪ್ರದೇಶಕ್ಕೆ ಪ್ರತಿಧ್ವನಿಸಿದೆ. ಸ್ಫೋಟದ ಸದ್ದಿನಿಂದ ಅಕ್ಕಪಕ್ಕದವರು ಎಚ್ಚೆತ್ತುಕೊಂಡು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 3 ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ, ಈ ದುರಂತದಲ್ಲಿ ನಿವಾಸಿಗಳಾದ ದಿನೇಶ್ ಕಾರ್ಪೆಂಟರ್ (35), ಗಾಯತ್ರಿ ಕಾರ್ಪೆಂಟರ್ (30), ಇಶಿಕಾ (10) ಮತ್ತು ಚಿರಾಗ್ (7) ಸಾವನ್ನಪ್ಪಿದ್ದಾರೆ.

ಸ್ಥಳದಲ್ಲಿ ಬೀಡುಬಿಟ್ಟ ಎಸ್​​​ಪಿ: ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಜಿಲ್ಲಾಡಳಿತ ತಂಡಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಡ್ ಸ್ಥಳಕ್ಕೆ ಧಾವಿಸಿದರು. ಬೆಂಕಿಯನ್ನು ನಿಯಂತ್ರಿಸಿದ ನಂತರ, ರಕ್ಷಣಾ ತಂಡಗಳು ಒಳಗೆ ಹೋಗಿ ನೋಡಿದಾಗ ದಿನೇಶ್ ಕಾರ್ಪೆಂಟರ್ ಅವರ ಇಡೀ ಕುಟುಂಬ ಸುಟ್ಟು ಭಸ್ಮವಾಗಿರುವುದು ಗೊತ್ತಾಗಿದೆ. ಇದ್ದಕ್ಕಿದ್ದಂತೆ ಹರಡಿದ ಬೆಂಕಿಯಿಂದಾಗಿ ಎಲ್ಲರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಘಟನೆ ಬಗ್ಗೆ ಪೊಲೀಸ್​ ವರಿಷ್ಠಾಧಿಕಾರಿ ಹೇಳಿದ್ದಿಷ್ಟು: ಡೈರಿ ನಿರ್ವಾಹಕರಾಗಿ ದಿನೇಶ್‌ ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದು, ಇದೇ ಕಟ್ಟಡದಲ್ಲಿ ಕೆಳಗೆ ಅಂಗಡಿ ನಡೆಸುತ್ತಿದ್ದು, ಮೇಲಿನ ಮಹಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅಗ್ನಿ ಅನಾಹುತಕ್ಕೆ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಪುನೀತ್‌ ಗೆಹ್ಲೋಡ್‌ ತಿಳಿಸಿದ್ದಾರೆ.

ಇದನ್ನು ಓದಿ: ಕೋಟಾದಲ್ಲಿ ಮುಂದುವರಿದ ಸಾವಿನ ಸರಣಿ: ಬಿಹಾರದ 16 ವರ್ಷದ ವಿದ್ಯಾರ್ಥಿ ಶವವಾಗಿ ಪತ್ತೆ

ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿ ಮಾರ್ಗದರ್ಶಿ ಚಿಟ್​ಫಂಡ್​ನ 121ನೇ ಶಾಖೆ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.