ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ನಿಲ್ಲದ ಕುಸಿತ: ಸೆನ್ಸೆಕ್ಸ್​ 110 ಪಾಯಿಂಟ್​ ಇಳಿಕೆ, 23,532ಕ್ಕೆ ತಲುಪಿದ ನಿಫ್ಟಿ, ಕಂಗಾಲಾದ ಹೂಡಿಕೆದಾರ - STOCK MARKET

ಗುರುವಾರದ ವಹಿವಾಟಿನಲ್ಲೂ ಷೇರು ಮಾರುಕಟ್ಟೆ ಇಳಿಕೆ ಕಂಡಿದೆ. ಕಳೆದೊಂದು ತಿಂಗಳಲ್ಲಿ ಷೇರುಮಾರುಕಟ್ಟೆ ಶೇ 8-10 ರಷ್ಟು ಕುಸಿತ ಕಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)

By PTI

Published : Nov 14, 2024, 5:26 PM IST

ಮುಂಬೈ: ವಿದೇಶಿ ಹೂಡಿಕೆದಾರರು ಷೇರುಮಾಟುಕಟ್ಟೆಗಳಲ್ಲಿ ಮಾರಾಟ ಮುಂದುವರೆಸಿದ್ದಾರೆ. ಈ ಪರಿಸ್ಥಿತಿ ಇಂದೂ ಕೂಡಾ ಮುಂದುವರೆಯಿತು. ನಿರಾಶಾದಾಯಕ ತ್ರೈಮಾಸಿಕ ಫಲಿತಾಂಶಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ ಇ) ಗುರುವಾರದ ವಹಿವಾಟಿನಲ್ಲಿ 110 ಪಾಯಿಂಟ್ ಗಳ ಕುಸಿತ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ 110.64 ಪಾಯಿಂಟ್ಸ್ ಅಥವಾ ಶೇಕಡಾ 0.14 ರಷ್ಟು ಕುಸಿದು 77,580.31 ರಲ್ಲಿ ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 266.14 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಕುಸಿದು 77,424.81 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 26.35 ಪಾಯಿಂಟ್ಸ್ ಅಥವಾ ಶೇಕಡಾ 0.11 ರಷ್ಟು ಕುಸಿದು 23,532.70 ರಲ್ಲಿ ಕೊನೆಗೊಂಡಿದೆ.

ಈ ಷೇರುಗಳಲ್ಲಿ ನಷ್ಟ:30 ಷೇರುಗಳ ಸೆನ್ಸೆಕ್ಸ್ ಪ್ಯಾಕ್​ನಲ್ಲಿ ಹಿಂದೂಸ್ತಾನ್ ಯೂನಿಲಿವರ್, ಎನ್​ಟಿಪಿಸಿ, ನೆಸ್ಲೆ, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಅದಾನಿ ಪೋರ್ಟ್ಸ್, ಟಾಟಾ ಮೋಟಾರ್ಸ್ ಮತ್ತು ಬಜಾಜ್ ಫಿನ್ ಸರ್ವ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ಈ ಎಲ್ಲ ಷೇರುಗಳಲ್ಲಿ ತುಸು ಲಾಭ:ರಿಲಯನ್ಸ್ ಇಂಡಸ್ಟ್ರೀಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ, ಮಹೀಂದ್ರಾ & ಮಹೀಂದ್ರಾ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಾಭ ಗಳಿಸಿದವು.

2500ಕೋಟಿಗೂ ಹೆಚ್ಚು ಷೇರುಗಳನ್ನ ಮಾರಾಟ ಮಾಡಿದ FIIs:ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ 2,502.58 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 6,145.24 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.

ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳು ಮತ್ತು ತಯಾರಿಸಿದ ಸರಕುಗಳ ಬೆಲೆಗಳು ದುಬಾರಿಯಾಗಿದ್ದರಿಂದ ಸಗಟು ಬೆಲೆ ಹಣದುಬ್ಬರವು ಅಕ್ಟೋಬರ್​ನಲ್ಲಿ ನಾಲ್ಕು ತಿಂಗಳ ಗರಿಷ್ಠವಾದ ಶೇಕಡಾ 2.36 ಕ್ಕೆ ಏರಿದೆ ಎಂದು ಗುರುವಾರ ಬಿಡುಗಡೆಯಾದ ಸರ್ಕಾರದ ಅಂಕಿ - ಅಂಶಗಳು ತಿಳಿಸಿವೆ. ಚಿಲ್ಲರೆ ಹಣದುಬ್ಬರವು ರಿಸರ್ವ್ ಬ್ಯಾಂಕಿನ ಮೇಲಿನ ಸಹಿಷ್ಣುತೆಯ ಮಟ್ಟವನ್ನು ಮೀರಿದೆ. ಇದು ಅಕ್ಟೋಬರ್​ನಲ್ಲಿ 14 ತಿಂಗಳ ಗರಿಷ್ಠವಾದ ಶೇಕಡಾ 6.21 ಕ್ಕೆ ಏರಿಕೆಯಾಗಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆಯೊಂದಿಗೆ ಕೊನೆಗೊಂಡರೆ, ಸಿಯೋಲ್ ಲಾಭದೊಂದಿಗೆ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಬುಧವಾರ ಮಿಶ್ರ ಟಿಪ್ಪಣಿಯಲ್ಲಿ ಕೊನೆಗೊಂಡವು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.06 ರಷ್ಟು ಇಳಿದು ಬ್ಯಾರೆಲ್​ಗೆ 72.24 ಡಾಲರ್ ಗೆ ತಲುಪಿದೆ.

ಇದನ್ನೂ ಓದಿ :ಅಮೆರಿಕದ ಇಂಧನ, ಮೂಲಸೌಕರ್ಯ ಯೋಜನೆಗಳಲ್ಲಿ ಅದಾನಿ ಗ್ರೂಪ್​ನಿಂದ​ $10 ಬಿಲಿಯನ್ ಹೂಡಿಕೆ

For All Latest Updates

ABOUT THE AUTHOR

...view details