ಮುಂಬೈ:ಭವಿಷ್ಯದಲ್ಲಿ ಯಾವುದಾದರು ಗಂಡಾಂತರಗಳು ಸಂಭವಿಸಿದರೆ ಆಗ, ಭಾರತದ ಸಾಲ ಹಾಗೂ ಜಿಡಿಪಿ ನಡುವಣ ಅನುಪಾತ ಶೇ 100ರ ಗಡಿ ದಾಟಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಭಾರತ ಸರ್ಕಾರ, ತನ್ನ ಸರ್ಕಾರಿ ವೆಚ್ಚಗಳನ್ನು ಅನಿವಾರ್ಯವಾಗಿ ಕಡಿತಗೊಳಿಸಬೇಕಾಗುತ್ತದೆ ಎಂದು ಐಎಂಎಫ್ ಹೇಳಿತ್ತು. ಆದರೆ ಇಂಟರ್ನಾಷನಲ್ ಮಾನಿಟರ್ ಫಂಡ್ನ ಅಭಿಪ್ರಾಯವನ್ನು ಆರ್‌ಬಿಐ ತಳ್ಳಿಹಾಕಿದೆ.
ಆರ್‌ಬಿಐ ಬುಲೆಟಿನ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಆರ್‌ಬಿಐ ಡೆಪ್ಯೂಟಿ ಗವರ್ನರ್ ಮೈಕೆಲ್ ಪಾತ್ರಾ ಸೇರಿದಂತೆ ಅರ್ಥಶಾಸ್ತ್ರಜ್ಞರು ಐಎಂಎಫ್ ನೋಟವನ್ನು ತಿರಸ್ಕರಿಸಿದ್ದಾರೆ. ಸಾಮಾನ್ಯ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಭಾರತ ತನ್ನ ಇತ್ತೀಚಿನ ಆರ್ಟಿಕಲ್ IV ಸಮಾಲೋಚನಾ ವರದಿಯಲ್ಲಿ IMF ನಿಗದಿಪಡಿಸಿದ ಯೋಜಿತ ಮಾರ್ಗಕ್ಕಿಂತ ಕೆಳಗಿದೆ ಎಂಬುದನ್ನು ನಮ್ಮ ಅಂಕಿ- ಅಂಶಗಳು ಹೇಳುತ್ತಿವೆ ಎಂದಿದ್ದಾರೆ. ಹೀಗಾಗಿ ಭಾರತಕ್ಕೆ ಅಂತಹ ಯಾವುದೇ ಪ್ರಮೇಯ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಅನಿರೀಕ್ಷಿತ ಗಂಡಂತರಗಳು ಬಂದರೆ, ಸರ್ಕಾರಿ ವೆಚ್ಚದ ಮರುಮಾಪನದೊಂದಿಗೆ ಸಾಮಾನ್ಯವಾಗಿ ಸರ್ಕಾರದ ಸಾಲ ಮತ್ತು ಜಿಡಿಪಿ ಅನುಪಾತವು 2030 - 31 ರ ವೇಳೆಗೆ ಶೇ 73.4 ಪ್ರತಿಶತಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ. ಇದು IMF ನ ಯೋಜಿತ ಪಥದ 78.2 ಶೇಕಡಾಕ್ಕಿಂತ ಸುಮಾರು 5 ಶೇಕಡಾ ಕಡಿಮೆಯಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಸಾಲ ಮತ್ತು ಜಿಡಿಪಿ ಅನುಪಾತವು 2023 ರಲ್ಲಿ 112.1 ಶೇಕಡಾದಿಂದ 2028 ರಲ್ಲಿ 116.3 ಶೇಕಡಾಕ್ಕೆ ಏರಿಕೆಯಾಗಿದೆ ಎಂದೂ ಲೇಖನದಲ್ಲಿ ಹೇಳಲಾಗಿದೆ. ಐತಿಹಾಸಿಕ ಗಂಡಾಂತರಗಳು ಸಂಭವಿಸಿದರೆ, ಭಾರತದ ಸಾಮಾನ್ಯ ಸರ್ಕಾರದ ಸಾಲವು ಮಧ್ಯಮಾವಧಿಯಲ್ಲಿ GDP 100 ಪ್ರತಿಶತವನ್ನು ಮೀರುತ್ತದೆ ಮತ್ತು ಆದ್ದರಿಂದ ವೆಚ್ಚಗಳ ಮೇಲೆ ಬಿಗಿ ಹಿಡಿತ ಸಾಧಿಸಬೇಕು ಎಂಬ IMF ವಾದವನ್ನು ನಾವು ತಿರಸ್ಕರಿಸುತ್ತೇವೆ ಎಂದು RBI ಅರ್ಥಶಾಸ್ತ್ರಜ್ಞರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.