ಕರ್ನಾಟಕ

karnataka

ETV Bharat / business

IIFL ಫೈನಾನ್ಸ್‌ಗೆ ಚಿನ್ನದ ಸಾಲ ನೀಡದಂತೆ ತಾಕೀತು ಮಾಡಿದ ಆರ್​ಬಿಐ! - Reserve Bank of India

IIFL Finance: IIFL ಫೈನಾನ್ಸ್‌ಗೆ ಹೊಸ ಚಿನ್ನದ ಸಾಲ ನೀಡುವುದನ್ನು RBI ನಿಷೇಧಿಸಿದೆ. ಆದರೂ ಈಗಾಗಲೇ ನೀಡಿರುವ ಚಿನ್ನದ ಸಾಲಗಳು ಮುಂದುವರಿಯಲಿವೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ. ಏನಿದು ಪ್ರಕರಣ ಎಂಬುದು ನೋಡೋಣ ಬನ್ನಿ.

IIFL Finance  gold loan business  Reserve Bank of India  yellow metal
IIFL ಫೈನಾನ್ಸ್‌ಗೆ ಚಿನ್ನದ ಸಾಲ ನೀಡದಂತೆ ತಾಕೀತು ಮಾಡಿದ ಆರ್​ಬಿಐ!

By PTI

Published : Mar 4, 2024, 8:04 PM IST

Updated : Mar 5, 2024, 10:40 AM IST

ಮುಂಬೈ (ಮಹಾರಾಷ್ಟ್ರ): ತಕ್ಷಣವೇ ಜಾರಿಗೆ ಬರುವಂತೆ ಚಿನ್ನದ ಸಾಲ ವಿತರಣೆ ನಿಲ್ಲಿಸುವಂತೆ ಐಐಎಫ್‌ಎಲ್ ಫೈನಾನ್ಸ್‌ಗೆ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. ಯಾವುದೇ ಹೊಸ ಚಿನ್ನದ ಸಾಲಗಳನ್ನು ಅನುಮೋದಿಸುವುದನ್ನು ನಿಲ್ಲಿಸುವಂತೆ ಕಂಪನಿಗೆ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಕಂಪನಿ ತನ್ನ ಯಾವುದೇ ಚಿನ್ನದ ಸಾಲವನ್ನು ಹಂಚಿಕೆ/ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ. ಆದರೂ ರಿಸರ್ವ್ ಬ್ಯಾಂಕ್ ತನ್ನ ಪ್ರಸ್ತುತ ಸಾಲಕ್ಕಾಗಿ ಸೇವೆಗಳನ್ನು ಮುಂದುವರಿಸಲು ಕಂಪನಿಗೆ ಅನುಮತಿ ನೀಡಿದೆ.

RBI ಏಕೆ ನಿರ್ಬಂಧಗಳನ್ನು ವಿಧಿಸಲಾಗಿದೆ?: ಕಂಪನಿಯನ್ನು ಮಾರ್ಚ್ 31, 2023 ರಂತೆ ಅದರ ಹಣಕಾಸಿನ ಸ್ಥಿತಿಗತಿಗಳ ಬಗ್ಗೆ ರಿಸರ್ವ್ ಬ್ಯಾಂಕ್ ಪರಿಶೀಲನೆಗೆ ಒಳಪಡಿಸಿತ್ತು. ಕಂಪನಿಯ ಚಿನ್ನದ ಸಾಲದ ಪೋರ್ಟ್‌ಫೋಲಿಯೊದಲ್ಲಿ ಕೆಲವು ಮಹತ್ವದ ಅಂಶಗಳನ್ನು ಗುರುತಿಸಿತ್ತು. ಇದರಲ್ಲಿ ಸಾಲ ಮಂಜೂರಾತಿ ಸಮಯದಲ್ಲಿ ಚಿನ್ನದ ಶುದ್ಧತೆ ಮತ್ತು ನಿವ್ವಳ ತೂಕವನ್ನು ಪರೀಕ್ಷಿಸುವಲ್ಲಿ ಮತ್ತು ಪ್ರಮಾಣೀಕರಿಸುವಲ್ಲಿ ಗಂಭೀರ ಅಕ್ರಮಗಳು ಮತ್ತು ಹರಾಜಿನ ಸಮಯದಲ್ಲಿ ಕೆಲವೊಂದು ತಪ್ಪುಗಳು ಆರ್​ಬಿಐ ಗಮನಕ್ಕೆ ಬಂದಿದ್ದವು.

ಸಾಲದ ಮೌಲ್ಯದ ಅನುಪಾತದಲ್ಲಿ ಉಲ್ಲಂಘನೆ;ಪ್ರಮಾಣಿತ ಹರಾಜು ವಿಧಾನವನ್ನು ಅನುಸರಿಸದೇ, ಮಿತಿಗಿಂತ ಹೆಚ್ಚಿನ ನಗದು ರೂಪದಲ್ಲಿ ಸಾಲದ ವಿತರಣೆ ಮತ್ತು ಸಂಗ್ರಹಣೆ ಹಾಗೂ ಗ್ರಾಹಕರ ಖಾತೆಗಳ ಮೇಲೆ ವಿಧಿಸುವ ಶುಲ್ಕಗಳಲ್ಲಿ ಪಾರದರ್ಶಕತೆಯ ಕೊರತೆ ಸೇರಿದಂತೆ ಇತ್ಯಾದಿಗಳಲ್ಲಿ ದೋಷ ಕಂಡುಬಂದಿದ್ದರಿಂದ ಆರ್​ಬಿಐ ಈ ಕ್ರಮ ಕೈಗೊಂಡಿದೆ.

ಆರ್‌ಬಿಐ ಯಾವ ಅಕ್ರಮಗಳನ್ನು ಪತ್ತೆ ಮಾಡಿದೆ?: ಕಂಪನಿಯನ್ನು ಮಾರ್ಚ್ 31, 2023 ರಂತೆ ಅದರ ಆರ್ಥಿಕ ಸ್ಥಿತಿ-ಗತಿಯನ್ನು ಉಲ್ಲೇಖಿಸಿ ಪರಿಶೀಲನೆ ನಡೆಸಲಾಗಿದೆ. ಕಂಪನಿಯ ಚಿನ್ನದ ಸಾಲದ ಪೋರ್ಟ್‌ಫೋಲಿಯೊದಲ್ಲಿ ಗಮನಿಸಲಾದ ಕೆಲವು ಮಹತ್ವದ ಅಂಶಗಳಲ್ಲಿ ದೋಷ ಕಂಡು ಬಂದಿದೆ. ಸಾಲ ಮಂಜೂರಾತಿ ಮತ್ತು ಡೀಫಾಲ್ಟ್ ಹರಾಜು ಸಮಯದಲ್ಲಿ ಚಿನ್ನದ ಶುದ್ಧತೆಯಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಹೆಚ್ಚುವರಿಯಾಗಿ ಚಿನ್ನದ ನಿವ್ವಳ ತೂಕವನ್ನು ಪರಿಶೀಲಿಸುವಲ್ಲಿ ಮತ್ತು ಪ್ರಮಾಣೀಕರಿಸುವಲ್ಲಿ ಗಂಭೀರ ಅಕ್ರಮಗಳು ಒಳಗೊಂಡಿವೆ. ಸಾಲ ಮತ್ತು ಮೌಲ್ಯದ ಅನುಪಾತದಲ್ಲಿ ಉಲ್ಲಂಘನೆ, ಪ್ರಮಾಣಿತ ಹರಾಜು ಪ್ರಕ್ರಿಯೆಯನ್ನು ಅನುಸರಿಸದಿರುವುದು ಗಂಭೀರ ಅಕ್ರಮಗಳಲ್ಲಿ ಒಂದಾಗಿದೆ. ಮಿತಿ ಮೀರಿದ ಸಾಲದ ಮೊತ್ತವನ್ನು ನಗದು ರೂಪದಲ್ಲಿ ವಿತರಿಸುವುದು ಮತ್ತು ಸಂಗ್ರಹಣೆಯಲ್ಲಿ ಅಕ್ರಮಗನ್ನು ಎಸಗಿರುವುದು ಆರ್​ಬಿಐ ಪರಿಶೀಲನೆ ವೇಳೆ ಕಂಡು ಬಂದಿದೆ. ಗ್ರಾಹಕರ ಖಾತೆಗಳಿಗೆ ವಿಧಿಸಲಾಗುವ ಶುಲ್ಕಗಳಲ್ಲಿ ಪಾರದರ್ಶಕತೆ ಕೊರತೆ ಸಹ ಎದ್ದು ಕಂಡಿದೆ.

ಇದು ನಿಯಂತ್ರಕ ಉಲ್ಲಂಘನೆ ಹೊರತಾಗಿ, ಗ್ರಾಹಕರ ಹಿತಾಸಕ್ತಿಗಳ ಮೇಲೆ ಗಮನಾರ್ಹ ಮತ್ತು ಪ್ರತಿಕೂಲ ಪರಿಣಾಮ ಬೀರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ರಿಸರ್ವ್ ಬ್ಯಾಂಕ್ ಈ ನ್ಯೂನತೆಗಳ ಬಗ್ಗೆ ಕಂಪನಿಯ ಹಿರಿಯ ನಿರ್ವಹಣೆ ಮತ್ತು ಲೆಕ್ಕಪರಿಶೋಧಕರೊಂದಿಗೆ ಚರ್ಚಿಸುತ್ತಿರುವುದು ಗಮನಾರ್ಹ.

ಆದರೂ ಕಂಪನಿಯು ಇದುವರೆಗೂ ಯಾವುದೇ ಅರ್ಥಪೂರ್ಣ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದ್ದರಿಂದ, ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡ ಆರ್​ಬಿಐ ತಕ್ಷಣವೇ ಜಾರಿಗೆ ಬರುವಂತೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ.

ಓದಿ:ಭಾರತ $7 ಟ್ರಿಲಿಯನ್ ಆರ್ಥಿಕತೆಯಾಗಲು ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳ ಅಗತ್ಯ

Last Updated : Mar 5, 2024, 10:40 AM IST

ABOUT THE AUTHOR

...view details