ನವದೆಹಲಿ: ತನ್ನ ಆ್ಯಪ್ಗೆ ಭಾರತದ ಆಪಲ್ ಆ್ಯಪ್ ಸ್ಟೋರ್ ನಲ್ಲಿ 6.4 ಮಿಲಿಯನ್ ರೇಟಿಂಗ್ಗಳು ಸಿಕ್ಕಿವೆ ಎಂದು ಫೋನ್ ಪೇ ಘೋಷಿಸಿದೆ. ಈ ಮೂಲಕ ಯೂಟ್ಯೂಬ್, ಇನ್ ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ಅನ್ನು ಹಿಂದಿಕ್ಕಿ ದೇಶದ ಐಒಎಸ್ ಆಪ್ ಸ್ಟೋರ್ ನಲ್ಲಿ ರೇಟಿಂಗ್ಗಳ ಪ್ರಮಾಣದಲ್ಲಿ ಟಾಪ್-ರೇಟೆಡ್ ಅಪ್ಲಿಕೇಶನ್ ಆಗಿ ಹೊರಹೊಮ್ಮಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ.
ಉತ್ಕೃಷ್ಟ ಬಳಕೆದಾರ ಇಂಟರ್ ಫೇಸ್ ಮತ್ತು ಅನುಭವ (ಯುಎಕ್ಸ್ ಮತ್ತು ಯುಐ), ಅತ್ಯುನ್ನತ ವಹಿವಾಟು ಯಶಸ್ಸಿನ ದರಗಳು, ವಹಿವಾಟಿನ ವೇಗ ಮತ್ತು ಅದರ ಲಕ್ಷಾಂತರ ಬಳಕೆದಾರರಲ್ಲಿ ಫೋನ್ ಪೇ ಪ್ಲಾಟ್ ಫಾರ್ಮ್ಗೆ ಬಲವಾದ ಆದ್ಯತೆಯ ಹಿನ್ನೆಲೆಯಲ್ಲಿ ಬಳಕೆದಾರರು ಫೋನ್ ಪೇ ಗೆ ರೇಟಿಂಗ್ಗಳನ್ನು ನೀಡಿದ್ದಾರೆ.
ರೇಟಿಂಗ್ ಬಗ್ಗೆ ಫೋನ್ ಪೇ ಹೇಳಿದ್ದೇನು?:"ಆ್ಯಪ್ ಸ್ಟೋರ್ನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ರೇಟಿಂಗ್ ಸಿಕ್ಕಿರುವುದಕ್ಕೆ ರೋಮಾಂಚನಗೊಂಡಿದ್ದೇವೆ. ನಮ್ಮ ಅನೇಕ ಬಳಕೆದಾರರು ಫೋನ್ ಪೇ ಐಒಎಸ್ ಅಪ್ಲಿಕೇಶನ್ ಅನ್ನು ಪ್ರೀತಿಸುವುದಕ್ಕೆ ಮತ್ತು ನಮ್ಮ ಸೇವೆಗಳಲ್ಲಿ ನಂಬಿಕೆ ಇಟ್ಟಿರುವುದಕ್ಕೆ ಕೃತಜ್ಞರಾಗಿದ್ದೇವೆ. ಟೆಕ್-ಫಸ್ಟ್ ಪ್ಲಾಟ್ ಫಾರ್ಮ್ ಎಂದು ನಾವು ಹೆಮ್ಮೆಪಡುತ್ತೇವೆ ಮತ್ತು ಫೋನ್ ಪೇ ಬಗ್ಗೆ ನಮ್ಮ ಎಲ್ಲಾ 575+ ಮಿಲಿಯನ್ ಬಳಕೆದಾರರೊಂದಿಗೆ ಅನುರಣಿಸುವ ಒಂದು ವಿಷಯವಿದ್ದರೆ, ಅದು ಅಪ್ಲಿಕೇಶನ್ ನ ಸರಳತೆ ಮತ್ತು ವಿಶ್ವಾಸಾರ್ಹತೆ "ಎಂದು ಫೋನ್ ಪೇ ಸಹ-ಸಂಸ್ಥಾಪಕ ಮತ್ತು ಸಿಟಿಒ ರಾಹುಲ್ ಚಾರಿ ಹೇಳಿದರು.