ನವದೆಹಲಿ:ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಹೊಸ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡಲು ಇಚ್ಚಿಸುವವರು 12 ಲಕ್ಷದ ಆದಾಯ ತೆರಿಗೆ ರಿಯಾಯಿತಿ ಜೊತೆಗೆ 75 ಸಾವಿರ ರೂ ಸ್ಟ್ಯಾಡಂರ್ಡ್ ಡಿಡಕ್ಷನ್ ಸಿಗಲಿದೆ. ಇದರಿಂದ 12.75 ಸಾವಿರ ರೂವರೆಗೆ ಜಿರೋ ತೆರಿಗೆ ಇರಲಿದೆ. ಆದಾಯ ತೆರಿಗೆ ಪಾವತಿದಾರರಿಗೂ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದು ಈ ಕೆಳಗಿನಂತಿದೆ.
ಹೊಸ ತೆರಿಗೆ ಸ್ಲ್ಯಾಬ್ ಹೀಗಿದೆ:
4,00,000 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ
4,00,000ರೂ. ದಿಂದ 8,00,000 ರೂ -ಶೇ 5
8,00,0001 ರೂ - 12,00,000ರೂ. - ಶೇ10