ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ಮಂದಗತಿ ವ್ಯವಹಾರ: ನಿಫ್ಟಿ 21 ಅಂಕ ಏರಿಕೆ, ಸೆನ್ಸೆಕ್ಸ್​ 53 ಅಂಕ ಕುಸಿತ - Share Market - SHARE MARKET

ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಮಿಶ್ರ ಪ್ರವೃತ್ತಿಯೊಂದಿಗೆ ವಹಿವಾಟು ಕೊನೆಗೊಳಿಸಿವೆ.

ನಿಫ್ಟಿ 21 ಅಂಕ ಏರಿಕೆ, ಸೆನ್ಸೆಕ್ಸ್​ 53 ಅಂಕ ಕುಸಿತ (ಸಾಂದರ್ಭಿಕ ಚಿತ್ರ
ನಿಫ್ಟಿ 21 ಅಂಕ ಏರಿಕೆ, ಸೆನ್ಸೆಕ್ಸ್​ 53 ಅಂಕ ಕುಸಿತ (ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Jul 5, 2024, 7:55 PM IST

ಮುಂಬೈ: ಎಚ್​ಡಿಎಫ್​ಸಿ ಬ್ಯಾಂಕ್, ಟೈಟಾನ್ ಕಂಪನಿ, ಟಾಟಾ ಸ್ಟೀಲ್ ಮತ್ತು ಎಂ & ಎಂ ಷೇರುಗಳು ಶುಕ್ರವಾರ ಇಳಿಕೆಯಲ್ಲಿ ಕೊನೆಗೊಂಡವು. ಇಂಟ್ರಾಡೇ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸರಿಸುಮಾರು ಶೇ 0.6 ರಷ್ಟು ಕುಸಿದರೂ, ರಿಲಯನ್ಸ್ ಇಂಡಸ್ಟ್ರೀಸ್ ನೇತೃತ್ವದಲ್ಲಿ ಚೇತರಿಕೆಯ ಮಧ್ಯೆ ಫ್ಲಾಟ್ ಆಗಿ ಕೊನೆಗೊಂಡವು.

ಶುಕ್ರವಾರದ ವಹಿವಾಟಿನಲ್ಲಿ ಎನ್ಎಸ್ಇ ನಿಫ್ಟಿ 50 21.70 ಪಾಯಿಂಟ್ಸ್ ಅಥವಾ 0.09% ಏರಿಕೆ ಕಂಡು 24,323.10 ಕ್ಕೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ 53.07 ಪಾಯಿಂಟ್ಸ್ ಅಥವಾ 0.07% ಕುಸಿದು 79,996.60 ಕ್ಕೆ ತಲುಪಿದೆ. ವಿಶಾಲ ಸೂಚ್ಯಂಕಗಳು ಮಿಶ್ರ ಪ್ರವೃತ್ತಿಯೊಂದಿಗೆ ಕೊನೆಗೊಂಡವು. ಲಾರ್ಜ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳು ಲಾಭ ಗಳಿಸಿದವು.

ಬ್ಯಾಂಕ್ ನಿಫ್ಟಿ ಸೂಚ್ಯಂಕ 443.35 ಪಾಯಿಂಟ್ ಅಥವಾ ಶೇಕಡಾ 0.83 ರಷ್ಟು ಕುಸಿದು 52,660.35 ಕ್ಕೆ ತಲುಪಿದೆ. ಇಂಧನ ಮತ್ತು ಫಾರ್ಮಾ ಷೇರುಗಳು ಇತರ ವಲಯ ಸೂಚ್ಯಂಕಗಳಲ್ಲಿ ಉತ್ತಮವಾಗಿ ಲಾಭ ಗಳಿಸಿದರೆ, ಹಣಕಾಸು ಸೇವೆಗಳು ಮತ್ತು ಬ್ಯಾಂಕಿಂಗ್ ಷೇರುಗಳು ಕುಸಿದವು.

ದೇಶೀಯ ಷೇರುಗಳ ಸ್ತಬ್ಧತೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯು ರೂಪಾಯಿಯ ಏರಿಕೆಯನ್ನು ಮಿತಿಗೊಳಿಸಿದ್ದರಿಂದ ರೂಪಾಯಿ ಶುಕ್ರವಾರ ಅಮೆರಿಕ ಡಾಲರ್ ವಿರುದ್ಧ 83.49 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ರೂಪಾಯಿ 83.48 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಅಮೆರಿಕನ್​ ಕರೆನ್ಸಿಯ ವಿರುದ್ಧ 83.45 ರ ಗರಿಷ್ಠ ಮತ್ತು 83.50 ರ ಕನಿಷ್ಠವನ್ನು ತಲುಪಿತು.

ಇದು ಅಂತಿಮವಾಗಿ ಡಾಲರ್ ವಿರುದ್ಧ 83.49 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಹೆಚ್ಚಾಗಿದೆ. ಡಾಲರ್ ಸೂಚ್ಯಂಕವು 105ರ ಮಟ್ಟಕ್ಕೆ ಕುಸಿದಿದೆ ಮತ್ತು ಯುಎಸ್ 10 ವರ್ಷಗಳ ಬಾಂಡ್ ಇಳುವರಿ ಶೇಕಡಾ 4.35 ಕ್ಕೆ ಇಳಿದಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

ಜಾಗತಿಕ ತೈಲ ದರಗಳ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್​ ಶೇಕಡಾ 0.19 ರಷ್ಟು ಇಳಿದು ಬ್ಯಾರೆಲ್​ಗೆ 87.26 ಡಾಲರ್​ಗೆ ತಲುಪಿದೆ. ಏತನ್ಮಧ್ಯೆ, ಆರು ಕರೆನ್ಸಿಗಳ ವಿರುದ್ಧ ಡಾಲರ್ ಶಕ್ತಿಯನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.16 ರಷ್ಟು ಕುಸಿದು 104.96ರಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ : ಬಜಾಜ್ 'ಫ್ರೀಡಂ 125' ಸಿಎನ್​ಜಿ ಬೈಕ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - CNG motorcycle

For All Latest Updates

ABOUT THE AUTHOR

...view details