ಕರ್ನಾಟಕ

karnataka

ETV Bharat / business

ಅಮೆರಿಕದ ಮಾರುಕಟ್ಟೆಗಳಲ್ಲಿ ಕುಸಿತ: ಭಾರತೀಯ ಷೇರುಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ, ಈ ಷೇರುಗಳಲ್ಲಿ ಭರ್ಜರಿ ಲಾಭ - Nifty Sensex open flat - NIFTY SENSEX OPEN FLAT

ಎನ್ವಿಡಿಯಾ ಷೇರುಗಳಲ್ಲಿ ಇಳಿಕೆ ಕಂಡು ಬಂದಿದ್ದರಿಂದ ಅಮೆರಿಕದ ಷೇರು ಮಾರುಕಟ್ಟೆ ಬುಧವಾರದ ವ್ಯವಹಾರಗಳಲ್ಲಿ ಕುಸಿತ ಕಂಡಿವೆ. ಈ ಮೂಲಕ ಇಂದು ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಕಂಡು ಬಂದಿದೆ. ಆದಾಗ್ಯೂ ಸೆನ್ಸೆಕ್ಸ್ ಅಲ್ಪ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.

nifty-sensex-open-flat-amid-decline-in-global-indices
ಅಮೆರಿಕ ಮಾರುಕಟ್ಟೆಗಳಲ್ಲಿ ಕುಸಿತ: ಭಾರತೀಯ ಷೇರುಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ, ಈ ಷೇರುಗಳಲ್ಲಿ ಭರ್ಜರಿ ಲಾಭ (ANI)

By ANI

Published : Aug 29, 2024, 10:06 AM IST

ಮುಂಬೈ, ಮಹಾರಾಷ್ಟ್ರ: ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಪ್ಲಾಟ್​ ಆಗಿ ಬೆಳಗಿನ ವ್ಯವಹಾರ ಆರಂಭಿಸಿವೆ. ನಿಫ್ಟಿ ಫಿಪ್ಟಿ ಸೂಚ್ಯಂಕವು 17 ಪಾಯಿಂಟ್‌ಗಳ ಕುಸಿತದೊಂದಿಗೆ ಅಂದರೆ 25,035.30 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿದೆ. ಆದರೆ, ಸೆನ್ಸೆಕ್ಸ್ 35 ಪಾಯಿಂಟ್‌ಗಳ ಅಲ್ಪ ಏರಿಕೆ 81,822.56 ಪಾಯಿಂಟ್‌ಗಳಲ್ಲಿ ಶುಭಾರಂಭ ಮಾಡಿದೆ.

ತ್ರೈಮಾಸಿಕ ಫಲಿತಾಂಶ ಪ್ರಕಟಿಸಿರುವ ಎನ್ವಿಡಿಯಾ ಕಂಪನಿ ಹೂಡಿಕೆದಾರರನ್ನು ನಿರಾಶೆಗೊಳಿಸಿದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಷೇರು ಮಾರುಕಟ್ಟೆಗಳು ಒತ್ತಡದಲ್ಲಿವೆ. ಆದಾಗ್ಯೂ, ಕಂಪನಿಯು ಉತ್ತಮ ತ್ರೈಮಾಸಿಕ ಫಲಿತಾಂಶವನ್ನೇ ನೀಡಿದೆ ಎಂದು ತಜ್ಞರು ಹೇಳಿದ್ದಾರೆ.

AI ಮತ್ತು ಸೆಮಿಕಂಡಕ್ಟರ್ ಷೇರುಗಳು ಕುಸಿತವನ್ನು ಕಂಡಿವೆ,. MSCI ಏಷ್ಯಾವು ಮಾರುಕಟ್ಟೆ ಶೇಕಡಾ 0.5 ರಷ್ಟು ಕುಸಿತ ಕಂಡಿದೆ. Nvidia ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಶೇ 8 ರಷ್ಟು ಕುಸಿತ ದಾಖಲಿಸಿದೆ ಎಂದು ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಹೇಳಿದ್ದಾರೆ.

ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಬುಧವಾರ ಭಾರತೀಯ ಮಾರುಕಟ್ಟೆಗಳಲ್ಲಿ ಸುಮಾರು 483 ಕೋಟಿ ರೂ ಹೂಡಿಕೆ ಮಾಡಿದ್ದರು. ಇನ್ನು ಭಾರತೀಯ ಷೇರುಮಾರುಕಟ್ಟೆ ಮತ್ತೊಂದು ಬ್ರೇಕ್​ಔಟ್​​​ ನಿರೀಕ್ಷೆಯಲ್ಲಿದೆ. ಮತ್ತೊಂದುಕಡೆ ಹೂಡಿಕೆದಾರರು ಲಾಭದ ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದು ಬಗ್ಗಾ ಅಭಿಪ್ರಾಯಪಟ್ಟಿದ್ದಾರೆ.

ಈ ಒಲಯದ ಷೇರುಗಳಲ್ಲಿ ಲಾಭ:ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್​​ಎಸ್​​​​ಸಿಯಲ್ಲಿ ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಐಟಿ ಮತ್ತು ನಿಫ್ಟಿ ಎಫ್‌ಎಂಸಿಜಿ ಷೇರುಗಳು ಮಾರಾಟದ ಒತ್ತಡವನ್ನು ಎದುರಿಸಿದ್ದರಿಂದ ಬೆಳಗಿನ ವಹಿವಾಟನ್ನು ಕೆಂಪು ಬಣ್ಣದಲ್ಲಿ ತೆರೆಯಲು ಕಾರಣವಾದವು. ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಮೀಡಿಯಾ ಷೇರುಗಳು ಲಾಭದಲ್ಲಿ ಶುಭಾರಂಭ ಮಾಡಿವೆ.

ವಿಶಾಲ ಮಾರುಕಟ್ಟೆ ಸೂಚ್ಯಂಕಗಳಲ್ಲಿ, ನಿಫ್ಟಿ ನೆಕ್ಸ್ಟ್ 50, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇ 0.6ರಷ್ಟು ಅಲ್ಪ ಲಾಭದೊಂದಿಗೆ ವಹಿವಾಟು ಪ್ರಾರಂಭಿಸಿದವು. ನಿಫ್ಟಿ 50 ಟಾಪ್ ಲಾಭಮಾಡಿಕೊಂಡ ಷೇರುಗಳ ಪಟ್ಟಿಯಲ್ಲಿ, ಸಿಪ್ಲಾ, ಅಪೊಲೊ ಆಸ್ಪತ್ರೆ ಮತ್ತು ಸನ್ ಫಾರ್ಮಾ ಸ್ಥಾನ ಪಡೆದುಕೊಂಡಿವೆ.

ಏಷ್ಯಾ ಮಾರುಕಟ್ಟೆಗಳಲ್ಲಿ ಒತ್ತಡ:ಏಷ್ಯನ್ ಷೇರು ಮಾರುಕಟ್ಟೆಗಳಾದ ಜಪಾನ್ ನ ನಿಕ್ಕಿ ಸೂಚ್ಯಂಕ ಶೇ.0.45ರಷ್ಟು ಕುಸಿದರೆ, ಹಾಂಕಾಂಗ್ ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ.0.55ರಷ್ಟು ಇಳಿಕೆ ಕಂಡಿದೆ. ತೈವಾನ್‌ನ ತೈವಾನ್ ಸೂಚ್ಯಂಕವು ಪ್ರಮುಖ ಏಷ್ಯನ್ ಮಾರುಕಟ್ಟೆಗಳಲ್ಲಿ ಅತಿದೊಡ್ಡ ನಷ್ಟವನ್ನು ಅನುಭವಿಸಿದೆ, ಈ ಮಾರುಕಟ್ಟೆ ಶೇಕಡಾ 1.32 ರಷ್ಟು ಕುಸಿದಿದೆ. ಬುಧವಾರ ಅಮೆರಿಕದ ಮಾರುಕಟ್ಟೆಗಳಲ್ಲಿ ಕುಸಿತ ಕಂಡು ಬಂದಿದ್ದರಿಂದ ಇಂದು ಏಷ್ಯಾದ ಮಾರುಕಟ್ಟೆಗಳು ಒತ್ತಡವನ್ನು ಎದುರಿಸಿದವು.

ಇದನ್ನು ಓದಿ:ಸೆಪ್ಟೆಂಬರ್​ 9ರಂದು ಜಿಎಸ್​ಟಿ ಕೌನ್ಸಿಲ್ ಸಭೆ: ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚೆ - GST COUNCIL

ABOUT THE AUTHOR

...view details