ETV Bharat / business

ಚುನಾವಣೆ ಬಗ್ಗೆ ಸಿಇಒ ಜುಕರ್ ಬರ್ಗ್​ ಹೇಳಿಕೆ: ಭಾರತ ಸರ್ಕಾರದ ಕ್ಷಮೆಯಾಚಿಸಿದ ಮೆಟಾ - CEO ZUCKERBERG REMARK

ಮಾರ್ಕ್ ಜುಕರ್ ಬರ್ಗ್ ಅವರ ಹೇಳಿಕೆಗಾಗಿ ಮೆಟಾ ಭಾರತ ಸರ್ಕಾರದ ಕ್ಷಮೆಯಾಚಿಸಿದೆ.

ಸಿಇಒ ಮಾರ್ಕ್ ಜುಕರ್ ಬರ್ಗ್
ಸಿಇಒ ಮಾರ್ಕ್ ಜುಕರ್ ಬರ್ಗ್ (ians)
author img

By ETV Bharat Karnataka Team

Published : Jan 15, 2025, 5:10 PM IST

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆ ಕುರಿತು ತನ್ನ ಸಹ - ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್ ಬರ್ಗ್ ನೀಡಿದ ಹೇಳಿಕೆಗೆ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಬುಧವಾರ ಭಾರತ ಸರಕಾರದ ಕ್ಷಮೆಯಾಚಿಸಿದೆ. ಜುಕರ್ ಬರ್ಗ್ ಅವರ ಹೇಳಿಕೆ ಅಜಾಗರೂಕತನದಿಂದಾದ ತಪ್ಪು ಮತ್ತು ಭಾರತವು ಕಂಪನಿಯ ದೃಷ್ಟಿಕೋನದಲ್ಲಿ ಪ್ರಮುಖ ರಾಷ್ಟ್ರವಾಗಿ ಮುಂದುವರಿಯಲಿದೆ ಎಂದು ಮೆಟಾ ಹೇಳಿದೆ.

ಕಂಪನಿಯ ಸ್ಥಾಪಕ ಜುಕರ್ ಬರ್ಗ್ ಅವರ ತಪ್ಪು ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳಿಗಾಗಿ ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಸಂಸದೀಯ ಸಮಿತಿಯು ಕಂಪನಿಗೆ ಸಮನ್ಸ್ ನೀಡಲು ಸಜ್ಜಾಗಿರುವ ಮಧ್ಯೆ ಮೆಟಾ ಭಾರತ ಸರ್ಕಾರದ ಕ್ಷಮೆಯಾಚಿಸಿರುವುದು ಗಮನಾರ್ಹ.

"ಹಿಂದೆ ಅಧಿಕಾರದಲ್ಲಿರುವ ಪಕ್ಷಗಳು 2024 ರ ಚುನಾವಣೆಯಲ್ಲಿ ಮರು ಆಯ್ಕೆಯಾಗಿಲ್ಲ ಎಂಬ ಮಾರ್ಕ್ ಅವರ ಅವಲೋಕನವು ವಿಶ್ವದ ಇತರ ದೇಶಗಳಿಗೆ ಅನ್ವಯಿಸುತ್ತದೆ, ಆದರೆ ಭಾರತಕ್ಕಲ್ಲ" ಎಂದು ಮೆಟಾ ಇಂಡಿಯಾ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

"ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತಿದ್ದೇವೆ. ಭಾರತವು ಮೆಟಾ ಪಾಲಿಗೆ ಅತ್ಯಂತ ಪ್ರಮುಖ ದೇಶವಾಗಿ ಮುಂದುವರೆದಿದೆ ಮತ್ತು ಅದರ ಹೊಸ ಭವಿಷ್ಯದ ಹೃದಯಭಾಗದಲ್ಲಿರಲು ನಾವು ಬಯಸುತ್ತೇವೆ" ಎಂದು ಕಂಪನಿ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಬಹುತೇಕ ರಾಷ್ಟ್ರಗಳಲ್ಲಿನ ಆಡಳಿತಾರೂಢ ಸರ್ಕಾರಗಳು ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡವು ಮತ್ತು ಅಂತಿಮವಾಗಿ 2024ರ ಚುನಾವಣೆಗಳಲ್ಲಿ ಅಂಥ ಸರ್ಕಾರಗಳು ಅಧಿಕಾರ ಕಳೆದುಕೊಂಡವು ಎಂದು ಜುಕರ್ ಬರ್ಗ್ ಇತ್ತೀಚೆಗೆ ಪಾಡ್ ಕಾಸ್ಟ್ ಒಂದರಲ್ಲಿ ಹೇಳಿರುವುದು ಭಾರತವನ್ನು ಕೆರಳಿಸಿದೆ.

ಭಾರತದ ಚುನಾವಣೆಗಳ ಬಗ್ಗೆ ಮಾರ್ಕ್ ಜುಕರ್ ಬರ್ಗ್ ಅವರ ಹೇಳಿಕೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಖಂಡಿಸಿದ್ದಾರೆ. ಜುಕರ್ ಬರ್ಗ್ ಅವರ ಹೇಳಿಕೆಯನ್ನು ಒರೆಗೆ ಹಚ್ಚಿದ ಅವರು, ವಾಸ್ತವದಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಭಾರತೀಯರು ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೇಲೆ ದಾಖಲೆಯ ಮೂರನೇ ಬಾರಿಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ, ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ತಮ್ಮ ನೇತೃತ್ವದ ಸಂಸದೀಯ ಸಮಿತಿಯು ಶೀಘ್ರದಲ್ಲೇ ಮೆಟಾಗೆ ನೋಟಿಸ್ ನೀಡಲಿದೆ ಮತ್ತು ಕ್ಷಮೆಯಾಚಿಸುವಂತೆ ತಿಳಿಸಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ಕ್ರೆಡಿಟ್​ ಸ್ಕೋರ್​, RBI ನಿಂದ ಹೊಸ ನಿಯಮ: ಇನ್ನು ಹಾಗೆ ಮಾಡುವುದು ಕಷ್ಟ - CREDIT SCORE NEW RULES

ETV Bharat Logo

Copyright © 2025 Ushodaya Enterprises Pvt. Ltd., All Rights Reserved.