ಕರ್ನಾಟಕ

karnataka

ETV Bharat / business

EPFO ನಿಯಮಗಳಲ್ಲಿ ಮತ್ತೆ ಬದಲಾವಣೆ: ಹಣ ಹಿಂಪಡೆಯುವ ಮೊದಲು ಹೊಸ ನಿಯಮಗಳ ಬಗ್ಗೆ ತಿಳಿಯಿರಿ

ಇಪಿಎಫ್‌ಒಗೆ ನಿಗದಿತ ಹಣವನ್ನು ಠೇವಣಿ ಮಾಡುವ ಮೂಲಕ ನೀವು ನಿವೃತ್ತಿಯ ನಂತರ ದೊಡ್ಡ ನಿಧಿ ಪಡೆದುಕೊಳ್ಳಬಹುದು. ಹೌದು ಇಪಿಎಫ್​ಒ ಹಣ ಪಡೆಯುವ ನಿಯಮಗಳಲ್ಲಿ ಕೆಲ ಬದಲಾವಣೆ ಆಗಿವೆ. ಇದನ್ನು ಗಮನಿಸಿ

EPFO ನಿಯಮಗಳು ಮತ್ತೆ ಬದಲಾವಣೆ: ಹಣವನ್ನು ಹಿಂಪಡೆಯುವ ಮೊದಲು ಹೊಸ ನಿಯಮ ತಿಳಿಯಿರಿ
EPFO ನಿಯಮಗಳು ಮತ್ತೆ ಬದಲಾವಣೆ: ಹಣವನ್ನು ಹಿಂಪಡೆಯುವ ಮೊದಲು ಹೊಸ ನಿಯಮ ತಿಳಿಯಿರಿ (ETV Bharat)

By ETV Bharat Karnataka Team

Published : Oct 18, 2024, 6:28 AM IST

ನವದೆಹಲಿ:ನೀವು ಕೆಲಸ ಮಾಡುತ್ತಿದ್ದರೆ ಪ್ರತಿ ತಿಂಗಳು ನಿಮ್ಮ ಸಂಬಳದ ನಿಗದಿತ ಮೊತ್ತವನ್ನು ಇಪಿಎಫ್‌ಒನಲ್ಲಿ ಠೇವಣಿ ಮಾಡಬೇಕಾಗುತ್ತದೆ ಮತ್ತು ಮಾಡಲಾಗುತ್ತಿರುತ್ತದೆ. EPFO ನಲ್ಲಿ ಠೇವಣಿ ಮಾಡಿದ ಮೊತ್ತವು ನಿವೃತ್ತಿಯ ನಂತರ ಪಕ್ವವಾಗುತ್ತದೆ. ಆದರೆ ಅಗತ್ಯವಿರುವ ಸಮಯದಲ್ಲಿ EPFO ​​ನಿಂದ ಹಣವನ್ನು ನೀವು ಹಿಂಪಡೆಯಬಹುದು.

ಇಷ್ಟೇ ಅಲ್ಲ ಇಪಿಎಫ್‌ಒ ತನ್ನ ಸದಸ್ಯರಿಗೆ ಅಗತ್ಯವಿರುವ ಸಮಯದಲ್ಲಿ ಇಪಿಎಫ್ ನಿಧಿಯಿಂದ ಹಿಂಪಡೆಯಲು ಸೌಲಭ್ಯವನ್ನು ಒದಗಿಸುತ್ತದೆ. ಭಾಗಶಃ ಹಿಂಪಡೆಯುವಿಕೆಗೆ ಮಿತಿಯನ್ನು ಕೂಡಾ ಇದೀಗ ನಿಗದಿಪಡಿಸಲಾಗಿದೆ. ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ನೀವು ಯೋಚಿಸುತ್ತಿದ್ದರೆ, ಇಪಿಎಫ್‌ಒನ ಹಿಂಪಡೆಯುವ ನಿಯಮಗಳಳಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಲಾಗಿದೆ. ಅಂತಹ ಇತ್ತೀಚಿನ ತಿದ್ದುಪಡಿಗಳ ಬಗ್ಗೆ ತಿಳಿದಕೊಳ್ಳುವುದು ಅತಿ ಮುಖ್ಯವಾಗಿದೆ.

EPF ಹಣ ಹಿಂಪಡೆಯುವ ಹೊಸ ನಿಯಮಗಳು 2024 ಯಾವುವು?

  • ಇಪಿಎಫ್‌ನಿಂದ ಭಾಗಶಃ ಹಣ ಹಿಂಪಡೆಯಲು ಇಪಿಎಫ್ ಸದಸ್ಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಶಿಕ್ಷಣ, ಮನೆ ಖರೀದಿ ಅಥವಾ ಮನೆ ನಿರ್ಮಾಣ, ಮದುವೆ ಮತ್ತು ಚಿಕಿತ್ಸೆಗಾಗಿ ಮಾತ್ರ ಈ ಮೊತ್ತವನ್ನು ಹಿಂಪಡೆಯಬಹುದು.
  • EPFO ನ ಹಿಂತೆಗೆದುಕೊಳ್ಳುವ ನಿಯಮಗಳ ಪ್ರಕಾರ, EPF ಹೊಂದಿರುವವರು ನಿವೃತ್ತಿಯ ಒಂದು ವರ್ಷದ ಮೊದಲು ಶೇ 90 ಪ್ರತಿಶತದವರೆಗೆ ತಾವು ಡಿಪಾಸಿಟ್​ ಮಾಡಿದ ಹಣವನ್ನು ಹಿಂಪಡೆಯಬಹುದು. ಶೇ 90 ಪ್ರತಿಶತದಷ್ಟು ಹಣ ಹಿಂಪಡೆಯಲು, ಸದಸ್ಯರ ವಯಸ್ಸು 54 ವರ್ಷಗಳಿಗಿಂತ ಹೆಚ್ಚಿರಬೇಕಾಗುತ್ತದೆ.
  • ಈ ದಿನಗಳಲ್ಲಿ ಅನೇಕ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತವೆ. ಆದರೆ ಇಪಿಎಫ್‌ಒ ನಿಯಮಗಳ ಪ್ರಕಾರ, ನಿವೃತ್ತಿಯಾಗುವ ಮೊದಲು ಉದ್ಯೋಗಿ ನಿರುದ್ಯೋಗಿಯಾಗಿದ್ದರೆ ಆಗ ಅವರು ಇಪಿಎಫ್ ನಿಧಿಯಿಂದ ಹಣವನ್ನು ಹಿಂಪಡೆಯಬಹುದು.
  • ಇದರ ಹೊರತಾಗಿ, ಉದ್ಯೋಗಿ ಒಂದು ತಿಂಗಳ ನಿರುದ್ಯೋಗದ ನಂತರ ಶೇ 75ರಷ್ಟು ಹಣವನ್ನು ತಮ್ಮ ಖಾತೆಯಿಂದ ಹಿಂಪಡೆಯಬಹುದು. ಸತತ ಎರಡು ತಿಂಗಳು ನಿರುದ್ಯೋಗಿಯಾದ ನಂತರ ಸಂಪೂರ್ಣ ಮೊತ್ತವನ್ನು ತೆಗೆದುಕೊಳ್ಳಬಹುದು ಹಾಗೂ ಅದೇ ಸಮಯದಲ್ಲಿ ಹೊಸ ಉದ್ಯೋಗವನ್ನು ಪಡೆದ ನಂತರ ಉದ್ಯೋಗಿ ಉಳಿದ ಶೇ 25 ಪ್ರತಿಶತವನ್ನು ಹೊಸ ಇಪಿಎಫ್​ಒ ಖಾತೆಗೆ ವರ್ಗಾಯಿಸಿಕೊಳ್ಳಬಹುದು.
  • ಅಷ್ಟೇ ಅಲ್ಲ ಉದ್ಯೋಗಿಯು 5 ವರ್ಷಗಳವರೆಗೆ ನಿರಂತರವಾಗಿ ಇಪಿಎಫ್‌ಗೆ ಕೊಡುಗೆ ನೀಡಿದರೆ, ಹಣವನ್ನು ಹಿಂಪಡೆಯುವ ಸಮಯದಲ್ಲಿ ಆತ ಅಥವಾ ಅವಳು ತೆರಿಗೆ ಕಡಿತದಿಂದ ಪ್ರಯೋಜನ ಪಡೆದುಕೊಳ್ಳಬಹುದು. ಅದೇ ಸಮಯದಲ್ಲಿ ಮುಕ್ತಾಯದ ಮೊದಲು ಹಣವನ್ನು ನೀವೇನಾದರೂ ಹಣವನ್ನು ಹಿಂಪಡೆಯುತ್ತಿದ್ದರೆ ಅದರ ಮೇಲೆ TDS ಕಡಿತಗೊಳಿಸಲಾಗುತ್ತದೆ. ಆದಾಗ್ಯೂ, 50,000 ರೂ.ಗಿಂತ ಕಡಿಮೆ ಹಣವನ್ನು ಹಿಂತೆಗೆದುಕೊಂಡಾಗ TDS ಕಡಿತಗೊಳಿಸಲಾಗುವುದಿಲ್ಲ.

ಪಾನ್​ ಕಾರ್ಡ್​ ಸಲ್ಲಿಕೆ ಕಡ್ಡಾಯ: ಇಲ್ಲದಿದ್ದರೆ?:EPF ಸದಸ್ಯರು ತಮ್ಮ ಹಣವನ್ನು ಹಿಂಪಡೆಯಲು PAN ಕಾರ್ಡ್ ಸಲ್ಲಿಸಬೇಕಾಗುತ್ತದೆ. ಹೀಗೆ ಸಲ್ಲಿಸಿದರೆ ಕೇವಲ ನೀವು ಪಡೆಯುವ ಹಣಕ್ಕೆ ಶೇ 10 ಟಿಡಿಎಸ್​ ಕಡಿತವಾಗುತ್ತದೆ. ಅದೇ ಸಮಯದಲ್ಲಿ, ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಆಗ ಶೇಕಡಾ 30 ರಷ್ಟು ಹಣ ಕಡಿತವಾಗುತ್ತದೆ.

ಭಾಗಶಃ ಹಿಂಪಡೆಯುವಿಕೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು:EPF ಸದಸ್ಯರು EPF ಪೋರ್ಟಲ್ ಮತ್ತು Umang ಅಪ್ಲಿಕೇಶನ್‌ನಲ್ಲಿ ಭಾಗಶಃ ಹಿಂಪಡೆಯುವಿಕೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಉದ್ಯೋಗದಾತರಿಂದ ಅನುಮೋದನೆ ಪಡೆದ ನಂತರ, ಹಣವನ್ನು ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಭಾಗಶಃ ವಾಪಸಾತಿಗೆ ಅರ್ಜಿ ಸಲ್ಲಿಸಿದ ನಂತರ, ಸದಸ್ಯರು ಪೋರ್ಟಲ್​​ನಲ್ಲಿ ಅದರ ಸ್ಥಿತಿ-ಗತಿಗಳನ್ನು ಪರಿಶೀಲನೆ ಸಹ ಮಾಡಬಹುದಾಗಿದೆ.

ಇವುಗಳನ್ನು ಓದಿ:ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ

ದೀಪಾವಳಿಯಲ್ಲಿ Phonepay ಪ್ರಮುಖ ನಿರ್ಧಾರ: ಕೇವಲ 9 ರೂಪಾಯಿಗೆ ವಿಮೆ!: ಈ ಪಾಲಿಸಿ ಖರೀದಿಸುವುದು ಹೇಗೆ?

60 ಬಿಲಿಯನ್​ ಡಾಲರ್​ಗೆ ತಲುಪಲಿದೆ ಭಾರತದ ಆನ್​ಲೈನ್ ಗೇಮಿಂಗ್ ಉದ್ಯಮ: ವರದಿ

ABOUT THE AUTHOR

...view details