ಹೈದರಾಬಾದ್: ಮಾರುತಿ ಸುಜುಕಿ ಎಂಬುದು ಭಾರತೀಯರಿಗೆ ಅತ್ಯಾಪ್ತ ಹೆಸರು. ಹೀಗಾಗಿಯೇ ಅದಕ್ಕೆ ಮಾರ್ಕೆಟ್ ಲೀಡರ್ ಅಂತಾರೆ. ಇದೇ ಕಾರಣಕ್ಕೆ ಸಂಸ್ಥೆ ಪ್ರತಿ ವರ್ಷ ಕಾರುಗಳ ಮಾರಾಟದಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ಮಾರುತಿ ಇದೀಗ ಮತ್ತೆ 12 ಹೊಸ ಮಾದರಿ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಇಂಜಿನ್ ಲಕ್ಷಣಗಳೊಂದಿಗೆ ಈ ಹೊಸ ಮಾದರಿ ಕಾರುಗಳು ಮಾರುಕಟ್ಟೆ ಬರಲು ಸಜ್ಜಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾರುತಿ ಡಿಸೈರ್ 2024:1.3 ಲೀಟರ್, 3 ಸಿಲಿಂಗಡ್ ಮೈಲ್ಡ್ ಹೈಬ್ರಿಡ್ ಇಂಜಿನ್ ಇದರಲ್ಲಿದೆ. 82 ಪಿಎಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಇದು ಉತ್ಪಾದಿಸುತ್ತದೆ. ಪುಶ್ - ಬಟನ್ ಸ್ಟಾರ್ಟ, ಸ್ಟಾಪ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ವೈಶಿಷ್ಟ್ಯಗಳು ಸೇರಿವೆ. ಜೂನ್ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಮಾದರಿ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಲಿದೆ.
- ಹಿಂದಿನ ಶೋರೂಂ ದರ: ಆರಂಭಿಕ 7 ಲಕ್ಷ ರೂ.
- ಇಂಜಿನ್: 1197ಸಿಸಿ
- ಟ್ರಾನ್ಸ್ಮಿಷನ್: ಮ್ಯಾನ್ಯುಯಲ್
- ಇಂಧನ; ಪೆಟ್ರೋಲ್
- ಬಾಡಿ ಟೈಪ್: ಸೆಡಾನ್
ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್: ಇದೇ ಸೆಪ್ಟೆಂಬರ್‌ನಲ್ಲಿ ಇದು ಮಾರುಕಟ್ಟೆಗೆ ಬರಲಿದೆ. ಪೆಟ್ರೋಲ್ ಎಂಜಿನ್ ಆಗಿದ್ದು, 13.5 ಪಿಎಸ್ ಶಕ್ತಿಯೊಂದಿಗೆ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ವೆಂಟಿಲೇಟೆಡ್ ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್, ಫ್ರಂಟ್ ಸೀಟ್‌ಗಳು ಸೇರಿದಂತೆ ಹೊಸ ವೈಶಿಷ್ಟ್ಯಗಳಿರಲಿದೆ.
- ಹಿಂದಿನ ಶೋರೂಂ ಬೆಲೆ: ಆರಂಭಿಕ ದರ 10 ಲಕ್ಷ ರೂ.
- ಇಂಜಿನ್: 1197ಸಿಸಿ
- ಮೈಲೇಜ್: 23 ಕಿ,ಮೀ
- ಸೀಟಿಂಗ್ ಸಾಮರ್ಥ್ಯ: 5
- ಟ್ರಾನ್ಸ್ಮಿಷನ್: ಮ್ಯಾನ್ಯುಯಲ್
- ಇಂಧನ; ಪೆಟ್ರೋಲ್
- ಬಾಡಿ ಟೈಪ್: ಹಚ್ಬ್ಯಾಕ್
ಮಾರುತಿ ಸುಜುಕಿ ಇವಿಎಕ್ಸ್: ಇದು ವರ್ಷಾಂತ್ಯದಲ್ಲಿ ಅಂದರೆ, ಡಿಸೆಂಬರ್ನಲ್ಲಿ ಮಾರುಕಟ್ಟೆಗೆ ಬರಲಿದೆ. ಡ್ಯುಯಲ್ ಎಲೆಕ್ಟ್ರಿಕ್ ಮೋಟರ್ ಇದರಲ್ಲಿ ಲಭ್ಯವಿದೆ. ಎಲ್ಇಡಿ ಲೈಟ್, ಆ್ಯಂಡ್ರೋಯ್ಡ್ ಆಟೋ, ಆಪಲ್ ಕಾರ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಜೊತೆಗೆ ದೊಡ್ಡ ಟಚ್‌ಸ್ಕ್ರೀನ್ ಡಿಸ್ಪ್ಲೇ ಈ ಕಾರಿನ ವೈಶಿಷ್ಟ್ಯಗಳಾಗಿವೆ.
- ಹಿಂದಿನ ಶೋರೂಂ ಬೆಲೆ: ಆರಂಭಿಕ ದರ 22 ಲಕ್ಷ ರೂ.
- ರೇಂಜ್: 550 ಕಿ.ಮೀಗಿಂತ ಹೆಚ್ಚು
- ಮೈಲೇಜ್: 32 ಕಿ,ಮೀ
- ಸೀಟಿಂಗ್ ಸಾಮರ್ಥ್ಯ: 5
- ಬ್ಯಾಟರಿ ಸಾಮರ್ಥ್ಯ: 60ಕಿ.ವ್ಯಾಟ್
- ಟ್ರಾನ್ಸ್ಮಿಷನ್: ಆಟೋಮೆಟಿಕ್
- ಇಂಧನ; ಎಲೆಕ್ಟ್ರಿಕ್
- ಬಾಡಿ ಟೈಪ್: ಎಸ್ಯುವಿ
ಮಾರುತಿ ಸುಜುಕಿ ಎಕ್ಸ್ಎಲ್ 5: ಬಜೆಟ್ನಲ್ಲಿ ಕಾರು ಹುಡುಕುತ್ತಿದ್ದರೆ, ಇದು ಉತ್ತಮ ಆಯ್ಕೆ. ಎಲ್ಇಡಿ ಡಿಆರ್ಎಲ್ ಜೊತೆ ಹೆಡ್ಲ್ಯಾಂಪ್ಸ್ ಹೊಸ ಪ್ರಾಜೆಕ್ಟರ್ನೊಂದಿಗೆ ಈ ಮಾದರಿ ಕಾಣಬಹುದಾಗಿದೆ. ಕಾರು ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ಪುಡ್ ಬಟನ್ ಇದ್ದು, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್ ಇರಲಿದೆ. ಸೆಪ್ಟೆಂಬರ್‌ನಲ್ಲಿ ಇದು ಮಾರುಕಟ್ಟೆಗೆ ಬರಲಿದೆ.
- ಹಿಂದಿನ ಶೋರೂಂ ಬೆಲೆ: ಆರಂಭಿಕ ದರ 5 ಲಕ್ಷ ರೂ
- ಇಂಜಿನ್: 998ಸಿಸಿ
- ಮೈಲೇಜ್: 20.52 ಕಿ,ಮೀ
- ಸೀಟಿಂಗ್ ಸಾಮರ್ಥ್ಯ: 5
- ಟ್ರಾನ್ಸ್ಮಿಷನ್: ಮ್ಯಾನ್ಯುಯಲ್
- ಇಂಧನ; ಪೆಟ್ರೋಲ್
- ಬಾಡಿ ಟೈಪ್: ಹಚ್ಬ್ಯಾಕ್
ಮಾರುತಿ ಸುಜುಕಿ ವ್ಯಾಗನಾರ್: ಗ್ಯಾಸಲೈನ್ ಪವರ್ನೊಂದಿಗೆ ಇದು ಚಲಿಸಲಿದೆ. ಉದ್ದದ ಹಾಗೂ ಬಾಕ್ಸಿ ಡಿಸೈನ್ ಹೊಂದಿದೆ. ರಿಗೆನೆರೇಟಿವ್ ಬ್ರೇಕಿಂಗ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ಕಾರು ಸ್ಟಾರ್ಟ್ ಮತ್ತು ಸ್ಟಾಪ್ ಮಾಡಲು ಪುಡ್ ಬಟನ್ , ಮುಂದೆ ಬಂಪರ್ ಕಾಣಬಹುದಾಗಿದೆ. ಇದು 2026ರ ಜನವರಿಯಲ್ಲಿ ಮಾರುಟ್ಟೆಗೆ ಬರುವ ಸಾಧ್ಯತೆ ಇದೆ.
- ಹಿಂದಿನ ಶೋರೂಂ ಬೆಲೆ: ಆರಂಭಿಕ ದರ 8.5 ಲಕ್ಷ
- ಸೀಟಿಂಗ್ ಸಾಮರ್ಥ್ಯ: 5
- ಬಾಡ್ ಟೈಪ್: ಹಚ್ಬ್ಯಾಕ್
ಮಾರುತಿ ಫ್ಯೂಚುರಾ-ಇ:ಆಟೋ ಎಕ್ಸ್‌ಪೋ 2020 ನಲ್ಲಿಯೇ ಈ ಕಾರಿನ ಪರಿಚಯ ನಡೆಸಲಾಗಿದೆ. ಈ ಕಾರನ್ನು ನೀಲಿ ಮತ್ತು ಐವರಿ ಬಣ್ಣದಲ್ಲಿ ಸಂಸ್ಥೆ ವಿನ್ಯಾಸಗೊಳಿಸಲಿದೆ. ಈ ಕಾರು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬ ಕುರಿತು ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
- ಹಿಂದಿನ ಶೋರೂಂ ಬೆಲೆ: ಆರಂಭಿಕ ದರ 15 ಲಕ್ಷ
- ಸೀಟಿಂಗ್ ಸಾಮರ್ಥ್ಯ: 5
- ಟ್ರಾನ್ಸ್ಮಿಷನ್: ಮ್ಯಾನ್ಯುಯಲ್
- ಇಂಧನ; ಎಲೆಕ್ಟ್ರಿಕಲ್
- ಬಾಡಿ ಟೈಪ್: ಎಸ್ಯುವಿ