ETV Bharat / business

ಮಂದಗತಿಯಲ್ಲಿ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ - STOCK MARKET

ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ಕೊನೆಗೊಂಡಿವೆ.

ಮಂದಗತಿಯಲ್ಲಿ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 425 ಅಂಶ ಕುಸಿತ, 75,112ಕ್ಕಿಳಿದ ನಿಫ್ಟಿ
ಮಂದಗತಿಯಲ್ಲಿ ಷೇರು ಮಾರುಕಟ್ಟೆ (ANI)
author img

By ANI

Published : Feb 21, 2025, 5:12 PM IST

ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ವಾರದ ಕೊನೆಯ ವಹಿವಾಟು ದಿನದಂದು ಇಳಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 424.90 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಕುಸಿದು 75,311.06 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ದಿನದಲ್ಲಿ 75,748.72 ರಿಂದ 75,112.41 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ ಗರಿಷ್ಠ 22,921 ಅನ್ನು ದಾಖಲಿಸಿದರೆ, ದಿನದ ಕನಿಷ್ಠ 22,720 ಆಗಿತ್ತು.

ನಿಫ್ಟಿ 50 ಯ 50 ಘಟಕ ಷೇರುಗಳ ಪೈಕಿ 35 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿಯಲ್ಲಿ ಮಹೀಂದ್ರಾ & ಮಹೀಂದ್ರಾ, ಅದಾನಿ ಪೋರ್ಟ್ಸ್, ಬಿಪಿಸಿಎಲ್, ಟಾಟಾ ಮೋಟಾರ್ಸ್ ಮತ್ತು ವಿಪ್ರೋ ಷೇರುಗಳು ಶೇಕಡಾ 6.20 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳು ಶುಕ್ರವಾರ ಕ್ರಮವಾಗಿ ಶೇಕಡಾ 1.32 ಮತ್ತು ಶೇಕಡಾ 0.70 ರಷ್ಟು ನಷ್ಟದೊಂದಿಗೆ ಕೊನೆಗೊಂಡವು.

ನಿಫ್ಟಿ ಮೆಟಲ್ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ನಷ್ಟ ಅನುಭವಿಸಿದವು. ನಿಫ್ಟಿ ಆಟೋ ಅತಿ ಹೆಚ್ಚು ನಷ್ಟ ಅನುಭವಿಸಿದೆ. ಇದು ಶೇಕಡಾ 2.58 ರಷ್ಟು ಕುಸಿದಿದೆ. ನಿಫ್ಟಿ ಪಿಎಸ್ ಯು ಬ್ಯಾಂಕ್, ಹೆಲ್ತ್ ಕೇರ್, ರಿಯಾಲ್ಟಿ, ಫಾರ್ಮಾ ಮತ್ತು ಒಎಂಸಿ ಸೂಚ್ಯಂಕಗಳು ತಲಾ ಶೇಕಡಾ 1 ಕ್ಕಿಂತ ಹೆಚ್ಚು ನಷ್ಟದೊಂದಿಗೆ ಸ್ಥಿರಗೊಂಡವು.

ರೂಪಾಯಿ ಮೌಲ್ಯ ಕುಸಿತ: ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಶುಕ್ರವಾರ ದುರ್ಬಲವಾಗಿ ಕೊನೆಗೊಂಡಿತು. ಬ್ಲೂಮ್ ಬರ್ಗ್ ಪ್ರಕಾರ, ಭಾರತೀಯ ರೂಪಾಯಿ ಡಾಲರ್ ವಿರುದ್ಧ 5 ಪೈಸೆ ಕುಸಿದು 86.71 ರೂ.ಗೆ ತಲುಪಿದೆ. ಯುರೋ 1.05001 ಕ್ಕೆ ಏರುತ್ತಿದ್ದಂತೆ ಡಾಲರ್ ಸೂಚ್ಯಂಕವು 106.44 ಕ್ಕೆ ಇಳಿದಿದೆ. ಗ್ರೇಟ್ ಬ್ರಿಟಿಷ್ ಪೌಂಡ್ 1.2670 ಕ್ಕೆ ಏರಿಕೆಯಾಗಿದೆ. ಜಪಾನ್ ಹಣದುಬ್ಬರದ ಏರಿಕೆಯ ಹೊರತಾಗಿಯೂ ಯೆನ್ 150.44 ರಲ್ಲಿ ಸ್ಥಿರವಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆ: ಯುಎಸ್ ಗ್ಯಾಸೋಲಿನ್ ಮತ್ತು ಡಿಸ್ಟಿಲೇಟ್ ದಾಸ್ತಾನುಗಳು ಕುಸಿಯುತ್ತಿರುವುದರಿಂದ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶುಕ್ರವಾರ ಬ್ಯಾರೆಲ್ ಗೆ 76.38 ಡಾಲರ್​ಗೆ ಏರಿಕೆಯಾಗಿದೆ.

ಇನ್ನಷ್ಟು ಓದಿ: ಶುಭಸುದ್ದಿ: ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ: ಯಾವ ಬ್ಯಾಂಕ್‌ನಲ್ಲಿ ಎಷ್ಟು Interest? - PNB SLASHES RETAIL LOANS RATES

ETV Bharat Logo

Copyright © 2025 Ushodaya Enterprises Pvt. Ltd., All Rights Reserved.