ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (ಡಿಇಐ) ಪರಿಹಾರಗಳಲ್ಲಿ ಭಾರತದ ಪ್ರವರ್ತಕ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಕೆಲಸದ ಸಂಸ್ಕೃತಿ ಹೇಗಿದೆ ಎಂಬುದರ ಸಮೀಕ್ಷೆ ನಡೆಸುವ ಭಾರತದ ಪ್ರಮುಖ ಸಲಹಾ ಸಂಸ್ಥೆಯಾದ ಅವತಾರ್ ಗ್ರೂಪ್ 'ಭಾರತದಲ್ಲಿ ಮಹಿಳೆಯರಿಗಾಗಿ ಅತ್ಯುತ್ತಮ ನಗರಗಳು (ಟಿಸಿಡಬ್ಲ್ಯುಐ)' ಸೂಚ್ಯಂಕದ ಮೂರನೇ ಆವೃತ್ತಿಯನ್ನು ಪ್ರಕಟಿಸಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು, ಉದ್ಯೋಗಸ್ಥ ಮಹಿಳೆಯರಿಗೆ ಅತ್ಯಂತ ಒಳಗೊಳ್ಳುವಿಕೆಯ, ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ನಗರವಾಗಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಗಳಿಸಿದೆ. ಮಹಿಳೆಯರಿಗೆ ಕೌಶಲ್ಯ ಮತ್ತು ಉದ್ಯೋಗ, ಮೂಲಸೌಕರ್ಯ ಮತ್ತು ಆರೈಕೆಗಳ ಬೆಂಬಲದಲ್ಲಿ ಬೆಂಗಳೂರು ಹೆಚ್ಚಿನ ಅಂಕಗಳನ್ನು ಗಳಿಸಿದೆ.
2024 ರ ಅಧ್ಯಯನದಲ್ಲಿ ಒಳಗೊಳ್ಳುವಿಕೆ ಸಾಮರ್ಥ್ಯ ಮತ್ತು ಲಿಂಗ ಸಮಾನತೆಯ ವ್ಯವಸ್ಥೆಯನ್ನು ಬೆಂಬಲಿಸುವ ಆಧಾರದ ಮೇಲೆ 120 ನಗರಗಳ ಸಮೀಕ್ಷೆ ನಡೆಸಲಾಗಿದೆ. ಪ್ರತಿ ನಗರಕ್ಕೆ ಸಿಐಎಸ್ ಅನ್ನು ನಿಗದಿಪಡಿಸಲಾಗಿತ್ತು. ಈ ಸಿಐಎಸ್ ಎರಡು ಅಂಶಗಳಿಂದ ಪಡೆಯಲಾಗಿದೆ: ಸಾಮಾಜಿಕ ಸೇರ್ಪಡೆ ಸ್ಕೋರ್ (ಎಸ್ಐಎಸ್) ಮತ್ತು ಕೈಗಾರಿಕಾ ಸೇರ್ಪಡೆ ಸ್ಕೋರ್ (ಐಐಎಸ್). ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಗರವು ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಕೇಂದ್ರವಾಗಿದೆ.
TCWI ಸೂಚ್ಯಂಕ ಎಂದರೇನು?: ಟಾಪ್ ಸಿಟೀಸ್ ಫಾರ್ ವುಮೆನ್ ಇನ್ ಇಂಡಿಯಾ (ಟಿಸಿಡಬ್ಲ್ಯುಐ) ಸೂಚ್ಯಂಕವು ಮಾದರಿ ನಗರಗಳು ಮತ್ತು ಉತ್ತಮ ವ್ಯವಸ್ಥೆಗಳನ್ನು ಗುರುತಿಸುತ್ತದೆ, ನಗರಗಳಲ್ಲಿ ಸಮಗ್ರ ಅಭಿವೃದ್ಧಿ ಉತ್ತೇಜಿಸಲು ಸಂಸ್ಥೆಗಳು, ನೀತಿ ನಿರೂಪಕರು ಮತ್ತು ವ್ಯಕ್ತಿಗಳಿಗೆ ಚೌಕಟ್ಟನ್ನು ಒದಗಿಸುತ್ತದೆ. ಈ ಎಲ್ಲ ಅಂಶಗಳು ರಾಷ್ಟ್ರವ್ಯಾಪಿ ಮಹಿಳಾ ಪ್ರಗತಿಗೆ ಪ್ರಮುಖ ಚಾಲಕವಾಗಿವೆ. ಅವತಾರ್ ಸಂಸ್ಥೆಯ ಪ್ರಾಥಮಿಕ ಸಂಶೋಧನೆಯ ಜೊತೆಗೆ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ), ವಿಶ್ವ ಬ್ಯಾಂಕ್, ಅಪರಾಧ ದಾಖಲೆಗಳು ಮತ್ತು ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ ಸೇರಿದಂತೆ ವಿವಿಧ ದತ್ತಾಂಶ ಮೂಲಗಳನ್ನು ಸಂಯೋಜಿಸುವ ಮೂಲಕ ಸೂಚ್ಯಂಕ ತಯಾರಿಸಲಾಗಿದೆ. ಅವತಾರ್ ಸಂಶೋಧನೆಯು ಎಫ್ಜಿಡಿಗಳು ಮತ್ತು ಫೆಬ್ರವರಿ 2024 ರಿಂದ ನವೆಂಬರ್ 2024 ರವರೆಗೆ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಒಳಗೊಂಡಿದೆ. ಇದರಲ್ಲಿ 60 ನಗರಗಳ 1672 ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ಉದ್ಯೋಗವನ್ನು ಸಕ್ರಿಯಗೊಳಿಸುವಲ್ಲಿ ನಗರಗಳು ವಹಿಸುವ ಪಾತ್ರವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು ಅವತಾರ್ 2022 ರಲ್ಲಿ ಟಿಸಿಡಬ್ಲ್ಯುಐ ಸೂಚ್ಯಂಕವನ್ನು ಪ್ರಾರಂಭಿಸಿತು.
- ಭಾರತದ ಮಹಿಳೆಯರಿಗಾಗಿ ಟಾಪ್ 10 ನಗರಗಳಿಗೆ ನಗರ ಸೇರ್ಪಡೆ ಸ್ಕೋರ್
- ಸಾಮಾಜಿಕ ಸೇರ್ಪಡೆ ಸ್ಕೋರ್ ಮತ್ತು ಕೈಗಾರಿಕಾ ಸೇರ್ಪಡೆ ಸ್ಕೋರ್ ವಾರು ಟಾಪ್ ನಗರಗಳ ಶ್ರೇಯಾಂಕ
- ಕರ್ನಾಟಕ ನಗರಗಳ ರ‍್ಯಾಂಕಿಂಗ್ ಹೋಲಿಕೆ - 2024 ಮತ್ತು 2023
- ದೊಡ್ಡ ನಗರಗಳಲ್ಲಿ ಸೇರ್ಪಡೆ ಅನುಭವದ ಮಹಿಳಾ ರೇಟಿಂಗ್
- ಮಾದರಿ ನಗರಗಳು: ಬೆಂಗಳೂರು ಮಾದರಿ ನಗರ
- ಟಿಸಿಡಬ್ಲ್ಯುಐ 2024 ಗೆ ಪರಿಗಣಿಸಲಾದ ಕರ್ನಾಟಕದ ನಗರಗಳ ಶ್ರೇಯಾಂಕ
- ಪ್ರಾದೇಶಿಕ ಒಳಗೊಳ್ಳುವಿಕೆ ಒಳನೋಟಗಳು
- ಅತಿ ಹೆಚ್ಚು ಸರಾಸರಿ ನಗರ ಸೇರ್ಪಡೆ ಸ್ಕೋರ್ ಹೊಂದಿರುವ ಭಾರತೀಯ ರಾಜ್ಯಗಳು
1. ಭಾರತದಲ್ಲಿ ಮಹಿಳೆಯರಿಗಾಗಿ ಟಾಪ್ 10 ನಗರಗಳಿಗೆ ನಗರ ಸೇರ್ಪಡೆ ಸ್ಕೋರ್
2024 ರ ರ‍್ಯಾಂಕ್ | ನಗರ | ರಾಜ್ಯ | ನಗರ ಸೇರ್ಪಡೆ ಸ್ಕೋರ್ |
1 | ಬೆಂಗಳೂರು | ಕರ್ನಾಟಕ | 47.15 |
2 | ಚೆನ್ನೈ | ತಮಿಳುನಾಡು | 46.31 |
3 | ಮುಂಬೈ | ಮಹಾರಾಷ್ಟ್ರ | 41.11 |
4 | ಹೈದರಾಬಾದ್ | ತೆಲಂಗಾಣ | 38.89 |
5 | ಪುಣೆ | ಮಹಾರಾಷ್ಟ್ರ | 36.88 |
6 | ಕೋಲ್ಕತಾ | ಪಶ್ಚಿಮ ಬಂಗಾಳ | 34.18 |
7 | ಅಹ್ಮದಾಬಾದ್ | ಗುಜರಾತ್ | 30.56 |
8 | ದೆಹಲಿ | ದೆಹಲಿ | 28.50 |
9 | ಗುರುಗ್ರಾಮ | ಹರಿಯಾಣ | 25.52 |
10 | ಕೊಯಮತ್ತೂರು | ತಮಿಳುನಾಡು | 24.10 |
ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತಾ, ಅಹಮದಾಬಾದ್, ದೆಹಲಿ, ಗುರುಗ್ರಾಮ್, ಕೊಯಮತ್ತೂರು 2024 ರಲ್ಲಿ ಮಹಿಳೆಯರಿಗಾಗಿ ಕೆಲಸ ಮಾಡಲು ಟಾಪ್ 10 ನಗರಗಳಾಗಿವೆ.
ಚೆನ್ನೈ (46.31), ಮುಂಬೈ (41.11), ಹೈದರಾಬಾದ್ (38.89), ಪುಣೆ (36.88), ಕೋಲ್ಕತಾ (34.18), ಅಹಮದಾಬಾದ್ (30.56), ದೆಹಲಿ (28.5), ಗುರುಗ್ರಾಮ್ (25.52) ಮತ್ತು ಕೊಯಮತ್ತೂರು (24.4) ನಂತರದ ಸ್ಥಾನಗಳಲ್ಲಿವೆ.
2. 2024ರ ಸಾಮಾಜಿಕ ಸೇರ್ಪಡೆ ಮತ್ತು ಕೈಗಾರಿಕಾ ಸೇರ್ಪಡೆ ಸ್ಕೋರ್
ಸ್ಕೋರ್ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಉತ್ಕೃಷ್ಟವಾಗಿರುವ ನಗರಗಳು ಕೈಗಾರಿಕಾ ಸೇರ್ಪಡೆಯಲ್ಲಿ ಮುಂಚೂಣಿಯಲ್ಲಿರುವ ನಗರಗಳಿಗಿಂತ ಭಿನ್ನವಾಗಿವೆ. ಈ ಆಯಾಮಗಳಲ್ಲಿ ಅವು ಅನನ್ಯ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತವೆ.
ಅ.ಸಂ. | SIS ಗಾಗಿ ಪ್ರಮುಖ ನಗರಗಳು | %SIS | IIS ಗೆ ಟಾಪ್ ನಗರಗಳು | % IIS |
1 | ಚೆನ್ನೈ | 45.31 | ಬೆಂಗಳೂರು | 81.33 |
2 | ಪುಣೆ | 37.73 | ಮುಂಬೈ | 62.96 |
3 | ಬೆಂಗಳೂರು | 36.72 | ಚೆನ್ನೈ | 61.40 |
4 | ಹೈದರಾಬಾದ್ | 36.59 | ಹೈದರಾಬಾದ್ | 54.12 |
5 | ಮುಂಬೈ | 35.84 | ಪುಣೆ | 45.11 |
6 | ಕೋಲ್ಕತಾ | 34.55 | ಕೋಲ್ಕತಾ | 42.55 |
7 | ಅಹಮದಾಬಾದ್ | 34.24 | ದೆಹಲಿ | 36.65 |
8 | ದೆಹಲಿ | 28.06 | ಗುರುಗ್ರಾಮ | 35.22 |
9 | ಗುರುಗ್ರಾಮ | 24.32 | ಅಹ್ಮದಾಬಾದ್ | 31.32 |
10 | ಕೊಯಮತ್ತೂರು | 30.23 | ಕೊಯಮತ್ತೂರು | 18.23 |
(ಸಾಮಾಜಿಕ ಸೇರ್ಪಡೆ ಸ್ಕೋರ್ (ಎಸ್ಐಎಸ್), ಕೈಗಾರಿಕಾ ಸೇರ್ಪಡೆ ಸ್ಕೋರ್ (ಐಐಎಸ್)
ನಗರಗಳಲ್ಲಿ ಮಹಿಳಾ ಸಬಲೀಕರಣವನ್ನು ಬಲಪಡಿಸಲು ಸಾಮಾಜಿಕ ಮತ್ತು ಕೈಗಾರಿಕಾ ಸೇರ್ಪಡೆಗೆ ಸಮತೋಲಿತ ವಿಧಾನದ ಮಹತ್ವವನ್ನು ವಿಶ್ಲೇಷಣೆ ಎತ್ತಿ ತೋರಿಸಿದೆ. ಚೆನ್ನೈ 45.31 ರ ಅತ್ಯಧಿಕ ಸಾಮಾಜಿಕ ಸೇರ್ಪಡೆ ಸ್ಕೋರ್ (ಎಸ್ಐಎಸ್) ಮತ್ತು 61.40 ರ ಬಲವಾದ ಕೈಗಾರಿಕಾ ಸೇರ್ಪಡೆ ಸ್ಕೋರ್ (ಐಐಎಸ್) ನೊಂದಿಗೆ ಮುಂಚೂಣಿಯಲ್ಲಿದೆ. ಇದು ಸಾಮಾಜಿಕ ಯೋಗಕ್ಷೇಮ ಮತ್ತು ಕೈಗಾರಿಕಾ ಬೆಂಬಲ ಎರಡಕ್ಕೂ ಉತ್ತಮ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಕೈಗಾರಿಕಾ ಸೇರ್ಪಡೆ ಶ್ರೇಯಾಂಕದಲ್ಲಿ ಬೆಂಗಳೂರಿನ ಮಟ್ಟ 81.33 ರಷ್ಟಿದ್ದು, 36.72 ಎಸ್ಐಎಸ್ ಬೆಂಬಲದೊಂದಿಗೆ ಅಗ್ರಸ್ಥಾನದಲ್ಲಿದೆ. ಇದು ಬಲವಾದ ಕೈಗಾರಿಕಾ ಸೇರ್ಪಡೆಯನ್ನು ಸೂಚಿಸುತ್ತದೆ ಮತ್ತು ಸಮತೋಲನವನ್ನು ಸಾಧಿಸಲು ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಹೆಚ್ಚಿನ ಪ್ರಗತಿಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಪುಣೆ ಮತ್ತು ಹೈದರಾಬಾದ್ನಂತಹ ನಗರಗಳು ಸಮತೋಲಿತ ಸೇರ್ಪಡೆ ಪ್ರೊಫೈಲ್ ಅನ್ನು ಹೊಂದಿವೆ. ಅವುಗಳ ಎಸ್ಐಎಸ್ ಮತ್ತು ಐಐಎಸ್ ನಡುವೆ ಸಣ್ಣ ಅಂತರಗಳಿವೆ, ಇದು ಎರಡೂ ಆಯಾಮಗಳಲ್ಲಿ ಒಗ್ಗಟ್ಟಿನ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಕೈಗಾರಿಕಾ ಸೇರ್ಪಡೆ ಅಂಕಗಳಿಗೆ ಹೋಲಿಸಿದರೆ ಅಹಮದಾಬಾದ್ ಮತ್ತು ಕೊಯಮತ್ತೂರು ಹೆಚ್ಚಿನ ಸಾಮಾಜಿಕ ಸೇರ್ಪಡೆ ಅಂಕಗಳನ್ನು ಹೊಂದಿವೆ. ಇದು ಬಲವಾದ ಸಾಮಾಜಿಕ ಒಳಗೊಳ್ಳುವಿಕೆ ಚೌಕಟ್ಟುಗಳನ್ನು ಹೊಂದಿರುವ ನಗರಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಸಂಸ್ಥೆಗಳಿಗೆ ಅವಕಾಶವನ್ನು ಎತ್ತಿ ತೋರಿಸುತ್ತದೆ.
3. ಕರ್ನಾಟಕ ನಗರಗಳ ಶ್ರೇಯಾಂಕದ ಹೋಲಿಕೆ - 2024 ಮತ್ತು 2023
ನಗರಗಳು | 2024 | 2023 |
ಬೆಂಗಳೂರು | 01 | 02 |
ಮಂಗಳೂರು | 24 | 28 |
ಕರ್ನಾಟಕ ನಗರಗಳ 2024 ರ ಶ್ರೇಯಾಂಕವು 2023 ಕ್ಕೆ ಹೋಲಿಸಿದರೆ ಗಮನಾರ್ಹ ಬದಲಾವಣೆಗಳಾಗಿರುವುದನ್ನು ಸೂಚಿಸುತ್ತದೆ. ಇದು ಸುಧಾರಣೆಗಳು ಮತ್ತು ಕುಸಿತಗಳನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರು 1ನೇ ಸ್ಥಾನದಲ್ಲಿದ್ದರೆ, ಮಂಗಳೂರು 24ನೇ ಸ್ಥಾನದಲ್ಲಿದೆ.
4. ದೊಡ್ಡ ನಗರಗಳಲ್ಲಿ ಸೇರ್ಪಡೆ ಅನುಭವದ ಮಹಿಳಾ ರೇಟಿಂಗ್
ನಗರ | ಕೌಶಲ್ಯ & ಉದ್ಯೋಗ | ಆರೈಕೆ ಬೆಂಬಲ | ಮೂಲಸೌಕರ್ಯ | ಸರ್ಕಾರಿ ಸಂಸ್ಥೆಗಳ ದಕ್ಷತೆ | ಜೀವನದ ಗುಣಮಟ್ಟ | ಸುರಕ್ಷತೆ |
ಬೆಂಗಳೂರು | 7.54 | 7.44 | 7.52 | 6.83 | 6.97 | 6.17 |
ಚೆನ್ನೈ | 7.09 | 7.36 | 7.58 | 6.68 | 7.05 | 6.48 |
ಮುಂಬೈ | 7.60 | 7.08 | 7.64 | 6.99 | 6.67 | 7.19 |
ಹೈದರಾಬಾದ್ | 6.95 | 7.56 | 8.01 | 6.85 | 6.63 | 6.95 |
ಪುಣೆ | 7.14 | 7.20 | 7.02 | 7.06 | 7.50 | 6.71 |
ಕೌಶಲ್ಯ ಮತ್ತು ಉದ್ಯೋಗ: 2024 ರಲ್ಲಿ ದೊಡ್ಡ ನಗರಗಳಲ್ಲಿ ಬೆಂಗಳೂರು (7.54), ಮುಂಬೈ (7.60) ಮತ್ತು ದೃಢವಾದ ಉದ್ಯೋಗ ಮಾರುಕಟ್ಟೆಗಳಾಗಿದ್ದು, ಕೌಶಲ್ಯ ಅವಕಾಶಗಳ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ. ಚೆನ್ನೈ (7.09) ಮತ್ತು ಹೈದರಾಬಾದ್ (6.95) ಸ್ವಲ್ಪ ಹಿಂದುಳಿದಿವೆ. ಆದಾಗ್ಯೂ, ಸ್ಕೋರ್ ಗಳ ನಡುವಿನ ವ್ಯತ್ಯಾಸಗಳು 1 ಪಾಯಿಂಟ್ ಗಿಂತ ಕಡಿಮೆ ಎಂಬುದನ್ನು ಗಮನಿಸುವುದು ಮುಖ್ಯ.