ಭಾರತದಲ್ಲಿ ಎಲ್ಲಾ ಕ್ರೀಡೆಗಳಿಗೆ ಹೋಲಿಕೆ ಮಾಡಿದರೆ ಕ್ರಿಕೆಟ್ ಮೇಲೆ ಜನರಿಗೆ ಅತೀ ಹೆಚ್ಚು ಕ್ರೇಜ್ ಇದೆ. ಇದನ್ನು ಆರಾಧಿಸುವವರ ಸಂಖ್ಯೆಯೂ ದಿನೇ ದಿನೆ ಏರುತ್ತಲೇ ಇದೆ. ಅದರಲ್ಲೂ ಐಪಿಎಲ್ ಬಂದರೆ ಸಾಕು ಎರಡು ತಿಂಗಳ ಕಾಲ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವೇ ಸರಿ. ಇಂತಹ ಐಪಿಎಲ್ ಪಂದ್ಯಗಳನ್ನು ಅನ್ಲೈನ್ನಲ್ಲಿ ಅತೀ ಕಡಿಮೆ ದರದಲ್ಲಿ ಯಾವುದೇ ಅಡೆತಡೆಯಿಲ್ಲದೇ ವೀಕ್ಷಿಸಲೆಂದು ರಿಲಾಯನ್ಸ್ ಜಿಯೋ ಕಂಪೆನಿ ಅತೀ ಕಡಿಮೆ ಬೆಲೆಯ ಹೊಸ ಪ್ಲಾನ್ವೊಂದನ್ನು ಜಾರಿಗೆ ತಂದಿದೆ.
ವಾಸ್ತವವಾಗಿ ಇದು ಆಡ್-ಆನ್ ಡೇಟಾ ಯೋಜನೆಯಾಗಿದೆ. ನೀವು ಕೇವಲ 49 ರೂಪಾಯಿಗೆ 25 GB 4G ಡೇಟಾ ಪಡೆಯಬಹುದು. ಇದರ ವ್ಯಾಲಿಡಿಟಿ 24 ಗಂಟೆಗಳಾಗಿರಲಿದೆ. 25 GB ಡೇಟಾ ಸಂಪೂರ್ಣವಾಗಿ ಬಳಕೆಯಾದ ನಂತರ 64kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಈ ಜಿಯೋ ಕ್ರಿಕೆಟ್ ಯೋಜನೆ ಕೇವಲ ಡೇಟಾ ಯೋಜನೆ ಎಂಬುದು ನಿಮಗೆ ತಿಳಿದಿರಲಿ. ಇದರಲ್ಲಿ ಯಾವುದೇ ಕರೆ ಮತ್ತು SMS ಸೇವೆಗಳು ಲಭ್ಯವಿರುವುದಿಲ್ಲ. ಇದಲ್ಲದೆ ಇದರ ವ್ಯಾಲಿಡಿಟಿ ಕೇವಲ 24 ಗಂಟೆಗಳಾಗಿರುವುದರಿಂದ ಕ್ಯಾರಿ ಫಾರ್ವರ್ಡ್ ಸಾಧ್ಯವಿಲ್ಲ.
ಟಾಟಾ ಐಪಿಎಲ್ 2024 ಟೂರ್ನಿ ಹಿನ್ನೆಲೆಯಲ್ಲಿ ಜಿಯೋ ಕ್ರಿಕೆಟ್ ಯೋಜನೆ ತಂದಿದೆ. ಇದರೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರವಲ್ಲದೆ ನಿಮ್ಮ ಲ್ಯಾಪ್‌ಟಾಪ್ ಮತ್ತು ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗಿರುವ ಸ್ಮಾರ್ಟ್ ಟಿವಿಯಲ್ಲಿಯೂ ಪಂದ್ಯಗಳನ್ನು ಆನಂದಿಸಬಹುದು. ಈ ಡೇಟಾ ಪ್ಲಾನ್ ಮೂಲಕ ಬಳಕೆದಾರರು 4K ರೆಸಲ್ಯೂಶನ್‌ನಲ್ಲಿ IPL ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಿದೆ.