Fixed Deposit Interest Rates In Banks ಅನೇಕರು ತನ್ನ ಉಳಿತಾಯದ ಹಣವನ್ನು ಎಫ್ ಡಿ ಮಾಡಲು ಇಷ್ಟ ಪಡುತ್ತಾರೆ. ಯಾಕೆಂದರೆ ಇದು ಹಣ ಹೂಡಿಕೆಯ ಸುರಕ್ಷಿತ ವಿಧಾನ ಎಂಬುದು ಹಲವರ ನಂಬಿಕೆಯಾಗಿದೆ. ಅಷ್ಟೇ ಅಲ್ಲ ಯಾವುದೇ ಅಪಾಯ ಇಲ್ಲದೇ ನಿಗದಿತ ಆದಾಯ ನೀಡುತ್ತವೆ ಎನ್ನುವ ಕಾರಣಕ್ಕೆ ಬಹುತೇಕರು ಸ್ಥಿರ ಠೇವಣಿಗಳ ಮೊರೆ ಹೋಗುತ್ತಾರೆ.
ವಿಶೇಷವಾಗಿ ಹಿರಿಯ ನಾಗರಿಕರಿಗೆ ಇದು ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಸಾಮಾನ್ಯ ಠೇವಣಿದಾರರಿಗೆ ಹೋಲಿಸಿದರೆ ಹಿರಿಯ ನಾಗರಿಕರು 0.50ರ ವರೆಗೆ ಹೆಚ್ಚುವರಿ ಬಡ್ಡಿದರ ಪಡೆಯಬಹುದು. ಮಾರುಕಟ್ಟೆಯ ಏರಿಳಿತಗಳನ್ನು ಲೆಕ್ಕಿಸದೇ ತಮ್ಮ ಹೂಡಿಕೆಯ ಮೊತ್ತವನ್ನು ರಕ್ಷಿಸಲು ಹಿರಿಯ ನಾಗರಿಕರು FD ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇನ್ನು ಬ್ಯಾಂಕ್‌ಗಳು ಸಹ ಎಫ್‌ಡಿಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ.
ಬಹುತೇಕ ಬ್ಯಾಂಕ್ ಗಳಲ್ಲಿನ ಬಡ್ಡಿದರಗಳಲ್ಲಿನ ವ್ಯತ್ಯಾಸ ದೊಡ್ಡದಾಗಿಲ್ಲದಿದ್ದರೂ 10 -20 ಬೇಸಿಸ್ ಪಾಯಿಂಟ್‌ಗಳ ಸಣ್ಣ ವ್ಯತ್ಯಾಸವು ಒಟ್ಟು ಆದಾಯದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡಬಹುದು. ಉದಾಹರಣೆಗೆ ರೂ.10 ಲಕ್ಷರೂ. ಎಫ್‌ಡಿಯಲ್ಲಿ, 20 ಬೇಸಿಸ್ ಪಾಯಿಂಟ್‌ಗಳ ವ್ಯತ್ಯಾಸದೊಂದಿಗೆ ಒಂದು ವರ್ಷದಲ್ಲಿ 2,000 ರೂಪಾಯಿ ಹೆಚ್ಚುವರಿ ಬಡ್ಡಿ ಪಡೆಯಬಹುದು.
ನೀವು ಮೂರು ವರ್ಷಗಳವರೆಗೆ ಹಣವನ್ನು ಇರಿಸಿದರೆ, ಈ ಹೆಚ್ಚುವರಿ ಉಳಿತಾಯವು 6,000ರೂಪಾಯಿಗೆ ಹೆಚ್ಚಾಗುತ್ತದೆ. ಠೇವಣಿ ಮೊತ್ತ ಇನ್ನೂ 10 ಲಕ್ಷ ರೂ. ಹೆಚ್ಚಾದರೆ ಒಟ್ಟು ಉಳಿತಾಯ ರೂ.12,000ಕ್ಕೆ ಏರಬಹುದು. ಹೀಗಾಗಿ ನೀವು ನೀವು ಉಳಿತಾಯ ಮಾಡಿದ ಹಣವನ್ನು ಠೇವಣಿ ಇಡುವ ಮುನ್ನ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಇದೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ FD ಗಳ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡುತ್ತಿರುವ ಟಾಪ್ 7 ಬ್ಯಾಂಕ್‌ಗಳ ವಿವರಗಳು ನಿಮಗಾಗಿ!
ಬ್ಯಾಂಕ್‌ಗಳ ಹೆಸರು | ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರ | ಹಿರಿಯ ನಾಗರಿಕರಿಗೆ ನೀಡಲಾಗುವ ಬಡ್ಡಿದರ |
ಹೆಚ್ಡಿಎಫ್ಸಿ | 7 | 7.5 |
ಐಸಿಐಸಿಐ | 7 | 7.5 |
ಆಕ್ಸಿಸ್ ಬ್ಯಾಂಕ್ | 7 | 7.75 |
ಯೆಸ್ ಬ್ಯಾಂಕ್ | 7.25 | 8 |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | 6.5 | 7.5 |
ಬ್ಯಾಂಕ್ ಆಫ್ ಬರೋಡಾ | 6.8 | 7.4 |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 6.5 | 7 |
- ಮೇಲೆ ನೀಡಲಾದ ವಿವರಗಳ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರಿಗೆ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7 ಮತ್ತು 7.5 ರಷ್ಟು ಬಡ್ಡಿಯನ್ನು ನೀಡುತ್ತದೆ.
- ಐಸಿಐಸಿಐ ಬ್ಯಾಂಕ್ ಐದು ವರ್ಷಗಳ ಠೇವಣಿಗಳ ಮೇಲೆ ಇದೇ ರೀತಿಯ ಬಡ್ಡಿದರಗಳನ್ನು ನೀಡುತ್ತದೆ.
- ಆಕ್ಸಿಸ್ ಬ್ಯಾಂಕ್ ತನ್ನ ಐದು ವರ್ಷಗಳ ಅವಧಿಯ ಠೇವಣಿಗಳ ಮೇಲೆ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7 ಮತ್ತು 7.75 ರಷ್ಟು ನೀಡುತ್ತದೆ.
- ಯೆಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡಾ 7.25 ಮತ್ತು ಹಿರಿಯ ನಾಗರಿಕರಿಗೆ ಶೇ 8ರಷ್ಟು ಬಡ್ಡಿದರವನ್ನು ನೀಡುತ್ತದೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಐದು ವರ್ಷಗಳ FDಗಳಲ್ಲಿ ಸಾಮಾನ್ಯ ನಾಗರಿಕರ ಗೆ 6.5 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇ 7.5 ರಷ್ಟು ಇಂಟ್ರೆಸ್ಟ್ ನೀಡುತ್ತಿದೆ.
- ಜನವರಿ 1, 2025 ರಿಂದ ಅನ್ವಯವಾಗುವ ದರಗಳ ಪ್ರಕಾರ, PNB ಸಾಮಾನ್ಯ ನಾಗರಿಕರಿಗೆ ಶೇಕಡಾ 6.5 ಮತ್ತು ಹಿರಿಯ ನಾಗರಿಕರಿಗೆ ಶೇ 7ರಷ್ಟು ಬಡ್ಡಿ ಕೊಡುತ್ತಿದೆ.
- ಬ್ಯಾಂಕ್ ಆಫ್ ಬರೋಡಾ ಸಾಮಾನ್ಯ ನಾಗರಿಕರಿಗೆ ಸ್ವಲ್ಪ ಹೆಚ್ಚು (6.8 ಶೇಕಡಾ) ಮತ್ತು ಹಿರಿಯ ನಾಗರಿಕರಿಗೆ ಶೇ 7.4ರಷ್ಟು ನೀಡುತ್ತಿದೆ.
ಇದನ್ನು ಓದಿ:ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೇ ಅಗ್ರಸ್ಥಾನ
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಭಾರತ: ಯುಎನ್