ಕರ್ನಾಟಕ

karnataka

ETV Bharat / business

ಕಳೆದ ದಶಕದಲ್ಲಿ ಭಾರತದ ತಲಾ ಹಣ್ಣು ಮತ್ತು ತರಕಾರಿ ಲಭ್ಯತೆ ಗಮನಾರ್ಹ ಹೆಚ್ಚಳ - FRUIT VEGETABLE PRODUCTION

ಭಾರತದ ತಲಾ ಹಣ್ಣು ಮತ್ತು ತರಕಾರಿ ಲಭ್ಯತೆ ಕಳೆದೊಂದು ದಶಕದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಕಳೆದ ದಶಕದಲ್ಲಿ ಭಾರತದ ತಲಾ ಹಣ್ಣು ಮತ್ತು ತರಕಾರಿ ಲಭ್ಯತೆ ಗಮನಾರ್ಹ ಹೆಚ್ಚಳ
ಕಳೆದ ದಶಕದಲ್ಲಿ ಭಾರತದ ತಲಾ ಹಣ್ಣು ಮತ್ತು ತರಕಾರಿ ಲಭ್ಯತೆ ಗಮನಾರ್ಹ ಹೆಚ್ಚಳ (IANS)

By ETV Bharat Karnataka Team

Published : 4 hours ago

ನವದೆಹಲಿ: ಕಳೆದೊಂದು ದಶಕದಲ್ಲಿ ಭಾರತದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ತಲಾ ಲಭ್ಯತೆ ಕ್ರಮವಾಗಿ 7 ಕೆಜಿ ಮತ್ತು 12 ಕೆಜಿಗಳಷ್ಟು ಹೆಚ್ಚಾಗಿದೆ ಎಂದು ಎಸ್​ಬಿಐ ಸಂಶೋಧನಾ ವರದಿ ತಿಳಿಸಿದೆ. ಪ್ರಮುಖವಾಗಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಹಣ್ಣು ಮತ್ತು ತರಕಾರಿಗಳ ತಲಾ ಉತ್ಪಾದನೆ ಹೆಚ್ಚಾಗಿದೆ.

ಭಾರತದಲ್ಲಿ ವರ್ಷಕ್ಕೆ ಒಬ್ಬ ವ್ಯಕ್ತಿಗೆ 227 ಕೆಜಿಯಷ್ಟು ಹಣ್ಣು ಮತ್ತು ತರಕಾರಿಗಳು ಉತ್ಪಾದನೆಯಾಗುತ್ತವೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬ ವರ್ಷಕ್ಕೆ ಕನಿಷ್ಠ 146 ಕೆಜಿ ಹಣ್ಣು ಮತ್ತು ತರಕಾರಿ ಸೇವಿಸಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ಆದಾಗ್ಯೂ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಹಾಳಾಗುವ ಸ್ವಭಾವದಿಂದಾಗಿ ಕೊಯ್ಲು, ಸಂಗ್ರಹಣೆ, ಗ್ರೇಡಿಂಗ್ ಮತ್ತು ಸಾಗಣೆಯ ಸಮಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಉತ್ಪನ್ನವು ನಾಶವಾಗುತ್ತದೆ.

ಆಹಾರ ಧಾನ್ಯಗಳ ಉತ್ಪಾದನೆಯ ಮೇಲೆ ಹವಾಮಾನ ವೈಪರೀತ್ಯಗಳು ಪ್ರತಿಕೂಲ ಪರಿಣಾಮ ಬೀರುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ತೀವ್ರ ಉಷ್ಣ ಅಲೆ ಮತ್ತು ಶೀತ ಅಲೆಗಳು ಕೃಷಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಬಹುತೇಕ ರಾಜ್ಯಗಳು ಆಹಾರ ಧಾನ್ಯ ಉತ್ಪಾದನೆ ಮತ್ತು ತೀವ್ರ ಹವಾಮಾನ ಪರಿಸ್ಥಿತಿಗಳ ನಡುವೆ ನಕಾರಾತ್ಮಕ ಸಂಬಂಧವನ್ನು ಹೊಂದಿವೆ ಎಂದು ವರದಿ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ ಪ್ರಕಾರ, ಧಾನ್ಯ ಕೊಯ್ಲು ಮಾಡುವ ಅವಧಿಯಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನದಲ್ಲಿ ಪ್ರತಿ 1 ಡಿಗ್ರಿ ಸೆಲ್ಸಿಯಸ್ ಏರಿಕೆಯು ಗೋಧಿ ಇಳುವರಿಯನ್ನು ಕಡಿಮೆ ಮಾಡುತ್ತದೆ. ಈ ಪುನರಾವರ್ತಿತ ಹವಾಮಾನ ಪರಿಸ್ಥಿತಿಗಳು ಆಹಾರ ಹಣದುಬ್ಬರವನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸಿವೆ ಎಂದು ವರದಿ ಹೇಳಿದೆ.

ಬೆಳೆಯುತ್ತಿರುವ ಆರ್ಥಿಕತೆಯ ಅಭಿವೃದ್ಧಿಯ ಭಾಗವಾಗಿ, ಕಳೆದ ದಶಕದಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ನಗರೀಕರಣ ಹೆಚ್ಚಾಗಿದೆ ಎಂದು ವೈಯಕ್ತಿಕ ಸಾಲದ ದತ್ತಾಂಶ ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಕಳೆದ ದಶಕದಲ್ಲಿ (2014-2024) ನಗರೀಕರಣದಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

"'ವೈಯಕ್ತಿಕ ಸಾಲಗಳ' ಕ್ರೆಡಿಟ್ ಡೇಟಾವನ್ನು ನೋಡಿದರೆ, ಯುಪಿಯಲ್ಲಿ ಸುಮಾರು 115 ಬೇಸಿಸ್ ಪಾಯಿಂಟ್​ಗಳಷ್ಟು (ಬಿಪಿಎಸ್) ಸಾಲದ ಪ್ರಮಾಣ ಹೆಚ್ಚಾಗಿದೆ. 97 ಬಿಪಿಎಸ್ ಪಾಯಿಂಟ್​​ಗಳೊಂದಿಗೆ ರಾಜಸ್ಥಾನ ನಂತರದ ಸ್ಥಾನದಲ್ಲಿದೆ. ನಗರ ಪ್ರದೇಶಗಳಲ್ಲಿಯೇ ವೈಯಕ್ತಿಕ ಸಾಲದ ಬೇಡಿಕೆ ಇರುವುದರಿಂದ ಈ ರಾಜ್ಯಗಳಲ್ಲಿ ನಗರೀಕರಣ ಹೆಚ್ಚಾಗಿರುವುದನ್ನು ತೋರಿಸುತ್ತದೆ ಎಂದು ವರದಿ ಹೇಳಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ, ನಗರೀಕರಣ ಹೆಚ್ಚಾಗುವುದರೊಂದಿಗೆ ನಗರಗಳಲ್ಲಿ ಉತ್ತಮ ಉದ್ಯೋಗ ಹಾಗೂ ಆದಾಯಗಳು ಕೂಡ ಹೆಚ್ಚಾಗುತ್ತವೆ. ಇದರಿಂದ ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಲು ಕಾರಣವಾಗುತ್ತದೆ.

ಇದನ್ನೂ ಓದಿ : ಪಿಎಂಜೆಜೆಬಿವೈ ಯೋಜನೆಯಡಿ 21 ಕೋಟಿ ನೋಂದಣಿ, 8 ಲಕ್ಷ 60 ಸಾವಿರ ಕ್ಲೈಮ್​ ಪಾವತಿ: ಕೇಂದ್ರದ ಮಾಹಿತಿ - PMJJBY LIFE INSURANCE SCHEME

ABOUT THE AUTHOR

...view details