ಕರ್ನಾಟಕ

karnataka

ETV Bharat / business

ಇಂಗ್ಲೆಂಡ್​​​​​​ನಲ್ಲಿದ್ದ 1 ಟನ್ ಚಿನ್ನ ಮರಳಿ ತಂದ ಭಾರತ: ಸ್ಥಳೀಯ ಖಜಾನೆಗೆ ರವಾನೆ; 822 ಮೆಟ್ರಿಕ್ ಟನ್​ಗೆ ಏರಿದ ಬಂಗಾರ ಸಂಗ್ರಹ! - India brings back gold from UK - INDIA BRINGS BACK GOLD FROM UK

ಯುನೈಟೆಡ್​ ಕಿಂಗಡಮ್​ನಲ್ಲಿ ಇಡಲಾಗಿದ್ದ 100 ಟನ್​ ಚಿನ್ನವನ್ನು ಭಾರತ ಮರಳಿ ತಂದಿದೆ.

ಯುಕೆಯಲ್ಲಿದ್ದ 1 ಟನ್ ಚಿನ್ನ ಮರಳಿ ತಂದ ಭಾರತ
ಯುಕೆಯಲ್ಲಿದ್ದ 1 ಟನ್ ಚಿನ್ನ ಮರಳಿ ತಂದ ಭಾರತ (IANS image)

By PTI

Published : May 31, 2024, 4:50 PM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಯುನೈಟೆಡ್ ಕಿಂಗ್​ಡಮ್ (ಯುಕೆ) ನಿಂದ 100 ಟನ್ ಅಥವಾ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನವನ್ನು ದೇಶದೊಳಗಿನ ತನ್ನ ಖಜಾನೆಗಳಿಗೆ ಸ್ಥಳಾಂತರಿಸಿದೆ. ಇದರಿಂದ ಭಾರತದ ದೇಶೀಯ ಚಿನ್ನದ ಸಂಗ್ರಹಣೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ.

ವಿದೇಶಿ ವಿನಿಮಯ ಬಿಕ್ಕಟ್ಟನ್ನು ನಿಭಾಯಿಸಲು ಚಿನ್ನದ ಹಿಡುವಳಿಯ ಗಣನೀಯ ಭಾಗವನ್ನು 1991 ಅಡವಿಟ್ಟ ನಂತರ ದೇಶವು ಕೈಗೊಂಡ ಅತಿದೊಡ್ಡ ಚಿನ್ನದ ಸ್ಥಳಾಂತರಗಳ ಪ್ರಕ್ರಿಯೆಗಳಲ್ಲಿ ಇದು ಒಂದಾಗಿದೆ. ಅಧಿಕೃತ ಅಂಕಿ- ಅಂಶಗಳ ಪ್ರಕಾರ, ದೇಶದ ಒಟ್ಟಾರೆ ಚಿನ್ನದ ಹಿಡುವಳಿ 2024 ರ ಹಣಕಾಸು ವರ್ಷದಲ್ಲಿ 27.46 ಮೆಟ್ರಿಕ್ ಟನ್​ನಷ್ಟು ಏರಿಕೆಯಾಗಿದ್ದು, 822 ಮೆಟ್ರಿಕ್ ಟನ್​ಗೆ ತಲುಪಿದೆ.

ಬಹುತೇಕ ಚಿನ್ನವನ್ನು ವಿದೇಶದಲ್ಲಿಯೇ ಸಂಗ್ರಹಿಸಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತರ ದೇಶಗಳಂತೆ ಭಾರತವೂ ಬ್ಯಾಂಕ್ ಆಫ್ ಇಂಗ್ಲೆಂಡ್​ನಲ್ಲಿ ಚಿನ್ನವನ್ನು ಇಟ್ಟಿದೆ. 100 ಮೆಟ್ರಿಕ್ ಟನ್​ಗಳಷ್ಟು ಚಿನ್ನವನ್ನು ಭಾರತಕ್ಕೆ ತರುವ ಮೂಲಕ ದೇಶದಲ್ಲಿ ಸಂಗ್ರಹಿಸಿ ಇಡಲಾದ ಒಟ್ಟಾರೆ ಚಿನ್ನದ ಪ್ರಮಾಣವು 408 ಮೆಟ್ರಿಕ್ ಟನ್​ಗೆ ತಲುಪಿದೆ. ಅಲ್ಲಿಗೆ ಸ್ಥಳೀಯ ಮತ್ತು ವಿದೇಶದಲ್ಲಿನ ಚಿನ್ನದ ಸಂಗ್ರಹದ ಪ್ರಮಾಣ ಸಮಾನ ಪ್ರಮಾಣಕ್ಕೆ ಬಂದಿದೆ.

ಗುರುವಾರ ಬಿಡುಗಡೆಯಾದ ಹಣಕಾಸು ವರ್ಷ 2024 ರ ಆರ್​ಬಿಐನ ವಾರ್ಷಿಕ ವರದಿಯ ಪ್ರಕಾರ, ಭಾರತದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಂಬಲವಾಗಿ 308 ಮೆಟ್ರಿಕ್ ಟನ್ ಚಿನ್ನವನ್ನು ಇರಿಸಲಾಗಿದ್ದು, ಇನ್ನೂ 100.28 ಟನ್ ಚಿನ್ನವನ್ನು ಸ್ಥಳೀಯವಾಗಿ ಬ್ಯಾಂಕಿಂಗ್ ಇಲಾಖೆಯ ಆಸ್ತಿಯಾಗಿ ಸಂಗ್ರಹಿಸಲಾಗಿದೆ.

ಒಟ್ಟಾರೆ ಚಿನ್ನದ ನಿಕ್ಷೇಪದಲ್ಲಿ 413.79 ಮೆಟ್ರಿಕ್ ಟನ್ ಚಿನ್ನ ವಿದೇಶದಲ್ಲಿ ಇದೆ ಎಂದು ವಾರ್ಷಿಕ ವರದಿ ತಿಳಿಸಿದೆ. ಮೂಲಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಚಿನ್ನ ಖರೀದಿಯನ್ನು ಗಮನದಲ್ಲಿಟ್ಟುಕೊಂಡು, ವಿದೇಶದಲ್ಲಿ ಚಿನ್ನದ ಸಂಗ್ರಹಣೆಯನ್ನು ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

2009 ರಲ್ಲಿ ಭಾರತವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 200 ಟನ್ ಚಿನ್ನವನ್ನು ಖರೀದಿಸಿತ್ತು. ನಂತರ ಅದು ತನ್ನ ವಿದೇಶಿ ವಿನಿಮಯ ಆಸ್ತಿ ವೈವಿಧ್ಯೀಕರಣ ಪ್ರಯತ್ನಗಳ ಭಾಗವಾಗಿ ದ್ವಿತೀಯ ಮಾರುಕಟ್ಟೆಯಿಂದ ಚಿನ್ನವನ್ನು ಖರೀದಿಸುತ್ತಿದೆ. ಹಿಂದಿರುಗಿದ ಚಿನ್ನವನ್ನು ಭಾರತದಲ್ಲಿ ಮುಂಬೈನ ಮಿಂಟ್ ರಸ್ತೆಯಲ್ಲಿರುವ ಆರ್​ಬಿಐ ಪ್ರಧಾನ ಕಚೇರಿ ಮತ್ತು ನಾಗ್ಪುರದಲ್ಲಿರುವ ಖಜಾನೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಏಪ್ರಿಲ್ 2024 ರ ಹೊತ್ತಿಗೆ, ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲು 2023 ರ ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡಾ 7.75 ರಿಂದ ಸುಮಾರು 8.7 ಕ್ಕೆ ಏರಿದೆ.

ಇದನ್ನೂ ಓದಿ : ಸ್ಪ್ಯಾಮ್ ಕಾಲ್ ತಡೆಗೆ ಕ್ರಮ: ಅಧಿಕೃತ ಕರೆಗಳಿಗೆ 160 ಮೊಬೈಲ್ ಸಂಖ್ಯಾ ಸರಣಿ ನಿಗದಿಪಡಿಸಿದ ಸರ್ಕಾರ - Move To Prevent Spam Calls

ABOUT THE AUTHOR

...view details